ದಾಸನಪುರ ಪಿಕಪ್ ನಾಲೆ ಏರಿ ಒಡೆದು ಬೆಳೆಹಾನಿ
Team Udayavani, Aug 30, 2017, 11:50 AM IST
ಹುಣಸೂರು: ತಾಲೂಕಿನ ಹನಗೋಡು ಅಣೆಕಟ್ಟೆಯ ದಾಸನಪುರ ಪಿಕಪ್ ನಾಲಾ ಏರಿ ಒಡೆದುಹೋಗಿ ಸಾಕಷ್ಟು ಬೆಳೆ ನಷ್ಟ ಉಂಟಾಗಿದ್ದು. ರೆತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಕೊಡಗು ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಲಕ್ಷಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹನಗೋಡು ಅಣೆಕಟ್ಟೆಯಲ್ಲಿ ನೀರಿನ ಒಳಹರಿವು ಹೆಚ್ಚಿದೆ. ನಾಲೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಜೊತೆಗೆ ಕಳೆದೆರಡು ದಿನಗಳಿಂದ ಬೀಳುತ್ತಿದ್ದ ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಏರಿ ಒಡೆದಿದೆ. ಆದರೆ ಈವರೆವಿಗೂ ಯಾವ ಎಂಜಿನಿಯರ್‌ಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.
ಆಕ್ರೋಶ: ಕಿತ್ತೂರು ಹಾರಂಗಿ ವಿಭಾಗಕ್ಕೆ ಸೇರಿದ ನಾಲೆ ಇದಾಗಿದ್ದು, ಮುಂದೆ ಹತ್ತಾರು ಕೆರೆಗಳಿಗೆ ನೀರು ಹರಿಯುತ್ತಿತ್ತು. ರತ್ನಪುರಿ ಹತ್ತಿರದ ದಾಸನಪುರದ ಬಳಿ ಪಿಕಪ್ ನಾಲಾ ಏರಿ ಒಡೆದಿದ್ದರಿಂದ ಅಪಾರ ಪ್ರಮಾಣ ನೀರು ಅಕ್ಕ-ಪಕ್ಕದ ಜಮೀನುಗಳಿಗೆ ಹರಿದು ಪೋಲಾಗುತ್ತಿದೆ, ಇದೀಗ ರೆತರೇ ಮುಂದೆನಿಂತು ನೀರುಗಂಟಿ ಮೂಲಕ ನೀರಿನ ಹರಿವು ಕಡಿಮೆಗೊಳಿಸಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಬೆಳೆ ಹಾನಿ: ನಾಲೆ ಒಡೆದಿರುವ ಸ್ಥಳದ ಅಕ್ಕಪಕ್ಕದ ಜಮೀನಿನ ಮಾಲಿಕರಾದ ಬೋರೇಗೌಡ, ಕಷ್ಣೇಗೌಡ, ಶ್ರೀನಿವಾಸಗೌಡ, ದಾಸೇಗೌಡರಿಗೆ ಸೇರಿದ ಬಾಳೆ ಬೆಳೆಗೆ ಹಾನಿಯಾಗಿದ್ದರೆ, ಭತ್ತದ ನಾಟಿ ಹಲವೆಡೆ ಕೊಚ್ಚಿ ಹೋಗಿದೆ.
ಶಿಥಿಲಗೊಂಡ ಏರಿ: ಇದೊಂದು ಹಳೆಯ ಪ್ರಮುಖ ನಾಲೆಯಾಗಿದ್ದು, ಅಭಿವದ್ಧಿಕಂಡಿಲ್ಲ. ಸಕಾಲದಲ್ಲಿ ನಾಲೆಯ ಹೂಳೆತ್ತುವುದಿಲ್ಲ, ಅಲ್ಲಲ್ಲಿ ಶಿಥಿಲಗೊಂಡಿರುವ ಏರಿಯನ್ನು ದುರಸ್ತಿ ಪಡಿಸಿಲ್ಲವಾದ್ದರಿಂದಾಗಿ ಏರಿ ಒಡೆದಿದೆ, ಏರಿ ಒಡೆದ ಅನಿತಿ ದೂರದಲ್ಲೇ ವರ್ಷದ ಹಿಂದೆಯೂ ಸಹ ಏರಿ ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿತ್ತು.
ನಂತರ ಒಡೆದಿದ್ದ ಕೂನಿಯನ್ನು ನಿರ್ಮಿಸಿ, ನಾಲೆ ದುರಸ್ತಿ ಪಡಿಸಲಾಗಿತ್ತು. ಈ ಏರಿ ಅಪಾಯದಲ್ಲಿರುವ ಬಗ್ಗೆ ಹಲವಾರು ಬಾರಿ ಎಂಜಿನಿಯರ್‌ಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೂ ಗಮನ ಹರಿಸಿಲ್ಲ, ಇದೀಗ ಮತ್ತೆ ಏರಿ ಒಡೆದು ರೈತರಿಗೆ ತೊಡಕಾಗಿದೆ.
ಎಂಜಿನಿಯರ್‌ಗಳು ನಾಪತ್ತೆ: ನಾಲೆ ಏರಿ ಒಡೆದು ಎರಡು ದಿನಗಳಾದವರೂ ಸ್ಥಳಕ್ಕೆ ಈವರೆವಿಗೆ ಸಂಬಂಧಿಸಿದ ಎಂಜಿನಿಯರ್ ಭೇಟಿ ನೀಡಿ, ದುರಸ್ತಿಗೆ ಮುಂದಾಗಿಲ್ಲ. ಈ ಸಂಬಂಧ ಪತ್ರಿಕೆಯು ಎಂಜಿನಿಯರ್‌ಗಳ ಸಂಪರ್ಕಕ್ಕೆ ಯತ್ನಿಸಿದರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ.
ರೈತರ ಆಗ್ರಹ: ಇನ್ನಾದರೂ ಹಾರಂಗಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ಇತ್ತು ತಕ್ಷಣಕ್ಕೆ ಏರಿ ದುರಸ್ತಿ ಪಡಿಸಬೇಕು, ಏರಿ ಅಗಲಗೊಳಿಸಿ ಕಾಂಕ್ರೀಟ್ ಲೈನಿಂಗ್ ಮಾಡಬೇಕು. ಶಾಸಕರು ಸಹ ಎಂಜಿನಿಯರ್‌ಗಳಿಗೆ ಅಗತ್ಯ ಕ್ರಮ ಕೆಗೊಳ್ಳಲು ಸೂಚಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ ತಕ್ಷಣಕ್ಕೆ ಏರಿ ದುರಸ್ತಿಪಡಿಸಿ, ಮುಂದಿನ ಕೆರೆಗಳಿಗೆ ನೀರು ತುಂಬಿಸಲು ಎಂಜಿನಿಯರ್ ಗಳಿಗೆ ಸೂಚಿಸುತ್ತೇನೆ.
-ಶಾಸಕ ಎಚ್.ಪಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.