ದಸರಾದಲ್ಲಿ ತುಸು ಎಚ್ಚರ ತಪ್ಪಿದರೂ ಅಪಾಯ

ಸರಳ ದಸರಾಗೂ ಕಾಡುತ್ತಿದೆ ಕೋವಿಡ್ ಭಯ , ಅಕ್ಷನ್‌ಕಮಿಟಿ ವರದಿ ಮೇಲೆ ನಿಂತಿದೆ ದಸರಾ ಆಚರಣೆ

Team Udayavani, Oct 9, 2020, 3:26 PM IST

ದಸರಾದಲ್ಲಿ ತುಸು ಎಚ್ಚರ ತಪ್ಪಿದರೂ ಅಪಾಯ

ಸೆ.2ರಂದು ದಸರಾ ಗಜಪಡೆ ಅರಮನೆ ಪ್ರವೇಶಿಸುವ ವೇಳೆ ಸಾಮಾಜಿಕ ಅಂತರ ಇಲ್ಲದೇ ಜನರು ಸೇರಿರುವುದು

ಮೈಸೂರು: ಜಿಲ್ಲೆಯಲ್ಲಿ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿದ ಕೋವಿಡ್ ಆರ್ಭಟ ಜೋರಾಗಿದ್ದು, ದಿನೇ ದಿನೆ ಪ್ರಕರ‌ಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ನಿತ್ಯ ಸರಾಸರಿ 600-1000 ಪ್ರಕರಣಗಳು ದಾಖಲಾಗುತ್ತಿವೆ. ಏತನ್ಮಧ್ಯೆ, ನಾಡಹಬ್ಬ ವಿಶ್ವವಿಖ್ಯಾತ ದಸರಾ ಮಹೋತ್ಸವ ‌ ಸಮೀಪಿಸುತ್ತಿದ್ದು, ಯಾವ ರೀತಿ, ಹೇಗೆ ಆಚರಿಸಬೇಕು ಎಂಬ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ದಸರಾ ಆಚರಣೆಯಲ್ಲಿ ಸ್ವಲ್ಪ ಎಚ್ಚರ ‌ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಬಾರಿ ದಸರಾವನ್ನು ಸರ‌ಳವಾಗಿ ಅರಮನೆ ಆವರಣ, ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿಆಚರಿಸಲುನಿರ್ಧರಿಸಲಾಗಿದೆ. ಜಂಬೂ ಸವಾರಿಗೆ ಸಾವಿರ ‌ ಮಂದಿಗೆ ಅವಕಾಶ ಕ‌ಲ್ಪಿಸಲಾಗಿದ್ದು, ಆರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ, ಇದೀಗ ಕೋವಿಡ್  ಆರ್ಭಟದಿಂದ ಸರಳ ದಸರಾಕ್ಕೂ ಜನಪ್ರತಿನಿಧಿಗಳಿಂದ ಅಪಸ್ವರ ಕೇಳಿ ಬಂದಿದೆ.

ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಣೆಗ 2 ಸಾವಿರ ‌ ಮಂದಿಗೆ ಅವ‌ಕಾಶ ನೀಡಿದರೆ ಅಲ್ಲಿ 5-6 ಸಾವಿರ ಜನ ಸೇರಿ ಜನಸಂದಣಿ ಉಂಟಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ, ಜನ ‌ದಟ್ಟಣೆ ವಿಪರೀತ‌ವಾಗುತ್ತದೆ. ಹೀಗಾಗಿ ಜಂಬೂ ಸ‌ವಾರಿಗೆ 2 ಸಾವಿರ ‌ ಮಂದಿಗೆ ಅವಕಾಶ ನೀಡಬೇಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಡಿ ಎಂದು ಜನಪ್ರತಿನಿಧಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ದ‌ಸರಾ ಆಚರಣೆ ಸಂಬಂಧ ಸರ್ಕಾರ ‌ ಹಾಗೂ ಜಿಲ್ಲಾಡಳಿತ ಯಾವುದೇ ಅಂತಿಮ ತೀರ್ಮಾನ ‌ ಕೈಗೊಂಡಿಲ್ಲ. ಈ ನಡುವೆ, ದಸರಾ ಮಹೋತ್ಸವಕ್ಕೆ ಕೆಲವೊಂದು

ಸಾಂಸ್ಕೃತಿಕ ಕಾರ್ಯಕ್ರಮ  ‌ನಡೆಸಬೇಕಾ, ದೀಪಾಲಂಕಾರ ಅಗತ್ಯವೇ ಅಥವಾ ಅನಗತ್ಯವೇ, ಅರಮನೆ ಕಾರ್ಯಕ್ರಮಗಳು ಆಗಬೇಕಾ, ಜಂಬೂ ಸವಾರಿ ವೀಕ್ಷಣೆಗೆ ಎಷ್ಟು ಮಂದಿಗೆ ಅವಕಾಶ ನೀಡಬೇಕು ಎಂಬುದು ‌ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸ‌ರ್ಕಾರ‌ ಅಕ್ಷನ್‌ ಕಮಿಟಿಯನ್ನು ರ‌ಚಿಸಿದೆ. ಆರೋಗ್ಯ ಇಲಾಖೆಯ ತಜ್ಞರ ‌ ತಂಡವು ಮೈಸೂರಿಗೆ ಆಗಮಿಸಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಮಾಹಿತಿ ಪಡೆದು ‌ವರದಿಯನ್ನು ಸಿದ್ಧಪಡಿಸುತ್ತಿದೆ. ಈ ವರದಿಯ ಆಧಾರದ ಮೇರೆಗೆ ದಸರಾ ಆಚರಣೆಗೆ ಅಂತಿಮ ರೂಪುರೇಷೆಯನ್ನು ‌ತಯಾರಿಸಲಾಗುತ್ತದೆ. ಆದರೆ, ವ‌ರದಿಯಲ್ಲಿ ಯಾವ ‌ ಯಾವ ವಿಷಯಯಗ‌ಳನ್ನು ಪ್ರಸ್ತಾಪಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಕೇರಳದಿಂದ ನಾವು ಕಲಿಯಬೇಕಾದ ಪಾಠ : ಕೋವಿಡ್ ನಿಯಂತ್ರಣದಲ್ಲಿ ಕೇರಳದೇಶಕ್ಕೆ ಮಾದರಿಯಾಗಿತ್ತು. ಆದರೆ, ಇದೀಗ ಆ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಮಿತಿ ಮೀರಿದೆ. ಬುಧವಾರ ಒಂದೇ ದಿನ 10 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.ಓಣಂ ಆಚರಣೆ ಬಳಿಕ ಕೇರಳದಲ್ಲಿ ಕೋವಿಡ್ ಆರ್ಭಟ ಜೋರಾಗಿದೆ. ಓಣಂ ಆಚರಣೆ, ನಿರಂತರಪ್ರತಿಭಟನೆಗಳು, ಅನ್‌ ಲಾಕ್‌ನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಅದರಲ್ಲೂ ತಿರುವನಂಪುರಂನಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಟೆಸ್ಟ್‌ಪಾಸಿಟಿವ್‌ ರೇಟ್‌(ಟಿಪಿಆರ್‌)ಶೇ.13.93ರಷ್ಟು ಏರಿಕೆ ಆಗಿದೆ. ನೆರೆಯ ಕೇರಳದಲ್ಲಿ ಪ್ರಾರಂಭದಲ್ಲಿ ಟಿಪಿಆರ್‌ ಶೇ.ಶೇ.2ಕ್ಕಿಂತ ಕಡಿಮೆ ಇತ್ತು. ಜುಲೈ ಪ್ರಾರಂಭದಲ್ಲಿ ಶೇ.2.66ರಷ್ಟು ಟಿಪಿಆರ್‌ ಆಗಸ್ಟ್‌ ವೇಳೆಗೆ ಶೇ.6-7 ತಲುಪಿತು. ತಿರುವನಂತಪುರದಲ್ಲಿ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಟಿಪಿಆರ್‌ ಶೇ. 11.4ರಷ್ಟು ಏರಿಕೆಯಾಗಿತ್ತು.ಸೆಪ್ಟೆಂಬರ್‌ ಅಂತ್ಯಕ್ಕೆ (ಸೆ.28) ಟಿಪಿಆರ್‌ ಶೇ.13.93ರಷ್ಟು ಏರಿಕೆ ಆಗಿದೆ. ಓಣಂ ಆಚರಣೆ, ರಾಜ್ಯವ್ಯಾಪ್ತಿ ಪ್ರತಿಭಟನೆಗಳು, ಅನ್‌ಲಾಕ್‌ ಪರಿಣಾಮದಿಂದ ಟಿಪಿಆರ್‌ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೇರಳಕ್ಕೆ ಹೋಲಿಕೆ ಮಾಡಿದರೆ ಮೈಸೂರಿನಲ್ಲಿಹೆಚ್ಚು ಕಡಿಮೆಅದೇಪರಿಸ್ಥಿತಿ ಇದೆ. ಅಲ್ಲಿ ಓಣಂ ಹಬ್ಬ ಆಚರಿಸಿದರೆ, ಇಲ್ಲಿ ನಾಡಹಬ್ಬ ದಸರಾ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನೂ ಸಾಲು ಸಾಲು ಪ್ರತಿಭಟನೆ, ಧರಣಿ, ಮೆರವಣಿಗೆಗಳುನಡೆಯುತ್ತಿವೆ. ಯಾವುದೇ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕದಿದ್ದರೆ ಕೇರಳದಂತೆ ಮೈಸೂರಿನಲ್ಲೂ ಕೋವಿಡ್ ಸ್ಫೋಟಗೊಂಡು ಜನರು ಅಪಾಯಕ್ಕೆ ಸಿಲುವ ಸಾಧ್ಯತೆ ಇದೆ.

ಆಚರಣೆಯಿಂದ ಅಪಾಯ ಇದೆಯಾ? : ದಸರಾ ಆಚರಣೆ ವೇಳೆ ಸ್ವಲ್ಪ ಎಡವಟ್ಟುಗಳು ಸಂಭವಿಸಿದರೂ ಅಪಾಯ ಕಟ್ಟಿಟ್ಟಬುತ್ತಿ. ಜಂಬೂ ಸವಾರಿ ವೀಕ್ಷಣೆಗೆ 2 ಸಾವಿರ ಮಂದಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.ಜಂಬೂ ಸವಾರಿ ವೇಳೆ ಸ್ವಲ್ಪ ವಿನಾಯಿತಿ ನೀಡಿದರೆಜನಪ್ರತಿನಿಧಿಗಳು, ಅವರ ಬೆಂಬಲಿಗರು, ಕಾರ್ಯಕರ್ತರು, ಕುಟುಂಬದವರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಎಲ್ಲಾ ಸೇರಿದರೆ ಈ ಸಂಖ್ಯೆ 5-6 ಸಾವಿರ ಸಂಖ್ಯೆ ದಾಟುವ ಸಾಧ್ಯತೆ ಇರುತ್ತದೆ.ಅಲ್ಲದೇ ಅಲ್ಲಿ ಯಾವುದೇ ಸಾಮಾಜಿಕ ಅಂತರಕೂಡ ಇರುವುದಿಲ್ಲ. ಕೋವಿಡ್‌ ಮಾರ್ಗಸೂಚಿಗಳನ್ನುಪಾಲಿಸಲು ಆಗುವುದಿಲ್ಲ. ಕಳೆದ ವಾರ ಅರಮನೆಗೆ ಗಜಪಡೆ ಪ್ರವೇಶಿಸುವ ವೇಳೆಇಂತಹ ಅವ್ಯವಸ್ಥೆ ಉಂಟಾಗಿತ್ತು.ಸಚಿವರು, ಶಾಸಕರು, ಅಧಿಕಾರಿಗಳು ತಮಗೇನೂ ನಿಯಮ ಅನ್ವಯವಾಗದಂತೆ ಸಾಮಾಜಿಕ ಅಂತರ ಕಾಪಾಡುವುದನ್ನು ಮರೆತಿದ್ದರು. ಜೊತೆಗೆ ಕೆಲವರು ಮಾಸ್ಕನ್ನು ಧರಿಸಿರಲಿಲ್ಲ. ಸಣ್ಣ ಕಾರ್ಯಕ್ರಮದಲ್ಲೇ ಇಂತಹ ಅವ್ಯವಸ್ಥೆಗಳ ಆಗರವಾಗಿತ್ತು.ಇನ್ನೂ ವಿಜಯದಶಮಿಯ ದಿನ ಜಂಬೂ ಸವಾರಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಜನಸೇರಿದರೆ ಅಪಾಯ ತಪ್ಪಿದ್ದಲ್ಲ. ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಮತ್ತಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ.

ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಗಮನಕ್ಕೆ : ನಾಡಹಬ್ಬ ದಸರಾ ಆಚರಣೆ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಕೋವಿಡ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದಕ್ಕೆಕೇರಳದಲ್ಲಿ ಓಣಂ ಆಚರಣೆ ಉತ್ತಮ ನಿದರ್ಶನ ಆಗಿದೆ. ದೇಶಕ್ಕೆ ಮಾದರಿಯಾಗಿದ್ದ ಕೇರಳ ರಾಜ್ಯದಲ್ಲೇ ಓಣಂ ಆಚರಣೆ, ನಿರಂತರ ಪ್ರತಿಭಟನೆ, ರಾಜಕೀಯ ಸಭೆ, ಅನ್‌ಲಾಕ್‌ ನಿಂದಾಗಿ ಕೋವಿಡ್  ಸಂಖ್ಯೆ ಮಿತಿ ಮೀರಿದೆ. ಮೈಸೂರಿನಲ್ಲೂ ಸದ್ಯ ಅದೇ ಪರಿಸ್ಥಿತಿನಿರ್ಮಾಣವಾಗಿದೆ. ಅಲ್ಲಿ ಒಣಂ ಆಚರಿಸಿದರೆ, ಇಲ್ಲಿ ದಸರಾ ಆಚರಿಸಲಾಗುತ್ತಿದೆ. ದಸರಾ ಆಚರಣೆ ಪ್ರಸ್ತುತ ಸವಾಲಿನ ಸನ್ನಿವೇಶವಾಗಿದ್ದು,ಯಾವ ರೀತಿ,ಹೇಗೆಆಚರಣೆ ಎಂಬಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಂದು ವೇಳೆ ನಿಯಂತ್ರಣ ತಪ್ಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ತೊಂದರೆಗೆಸಿಲುಕ ಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಇನ್ನೂ ಜಿಲ್ಲೆಯಲ್ಲೂ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಿವಿಧ ಸಂಘಟನೆಗಳ ವತಿಯಿಂದ ಸಾಲು ಸಾಲು ಪ್ರತಿಭಟನೆ ಗಳು, ರಾಜಕೀಯ ಸಭೆಗಳು ನಡೆಯುತ್ತಿವೆ. ಎಂದಿನಂತೆಯೇ ಜನಸಂದಣಿ ನೆರೆದಿರುತ್ತದೆ. ನಗರದಲ್ಲಿ ಕನಿಷ್ಠ ಎರಡೂ¾ರು ಪ್ರತಿಭಟನೆ ಸೇರಿದಂತೆ ಜಿಲ್ಲೆಯಲ್ಲಿ 10 ಧರಣಿಗಳು ನಡೆಯುತ್ತವೆ. ಮಾಸ್ಕ್, ಅಂತರ ಕೂಡ ಇರುವುದಿಲ್ಲ. ಇವುಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಶ್ರವಣಬೆಳಗೊಳದಲ್ಲಿ ಜರುಗಿದ ಮಹಾ ಮಸ್ತಕಾಭಿಷೇಕದಲ್ಲಿ ಹತ್ತು ದಿನದಲ್ಲಿ 5 ಲಕ್ಷ ಜನ ಸೇರಿದ್ದರು. ಆಗ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಸಿಂಧೂರಿ ಅವರು ಇದನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಇದೀಗ ಅದಕ್ಕಿಂದ ಹೆಚ್ಚಿನ ಸವಾಲಿನ ದಸರಾ ಆಚರಣೆಯಲ್ಲಿ ಸುರಕ್ಷತಾ, ಮುನ್ನೆಚ cರಿಕ ಕ್ರಮಗಳೊಂದಿಗೆ ಜನ ಸಮೂಹಕ್ಕೆಕೊರೊನಾ ತಗುಲದಂತೆ ನಿಗಾವಹಿಸಬೇಕಿದೆ.

 

– ಸತೀಶ್‌ ದೇಪುರ

 

ಟಾಪ್ ನ್ಯೂಸ್

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

17-panaji

Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

17-panaji

Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.