ಅಲೋಕದಲ್ಲಿ ದಸರಾ ಗಜಪಡೆ ವಿಶ್ರಾಂತಿ
Team Udayavani, Aug 14, 2017, 12:23 PM IST
ಮೈಸೂರು: ಅದ್ಧೂರಿ ಕಾರ್ಯಕ್ರಮದೊಂದಿಗೆ ಮೈಸೂರಿಗೆ ಕರೆತರಲಾದ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೊದಲ ತಂಡದ ಎಂಟು ಆನೆಗಳು ನಗರದ ಹೊರವಲಯದ ಅಲೋಕದಲ್ಲಿ ವಿಶ್ರಾಂತಿಯಲ್ಲಿವೆ.
ದಸರಾ ಗಜಪಡೆಯ ಕ್ಯಾಫ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಯಣದೊಂದಿಗೆ ಮೈಸೂರಿಗೆ ಕರೆತರಲಾದ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ, ವರಲಕ್ಷ್ಮೀ ಹಾಗೂ ಕೆ.ಗುಡಿ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ನೇರವಾಗಿ ಕರೆತರಲಾದ ಗಜೇಂದ್ರ ಹಾಗೂ ಭೀಮ ಆನೆಗಳು ಈ ತಂಡವನ್ನು ಸೇರಿಕೊಂಡಿದ್ದು, ಐದು ದಿನಗಳ ವಿಶ್ರಾಂತಿಯಲ್ಲಿರಲಿವೆ.
ಗಜಪಡೆಯ ಜತೆಗೆ ಆಗಮಿಸಿರುವ ಅರ್ಜುನನ ಮಾವುತ ಸಣ್ಣಪ್ಪ, ಕಾವಡಿ ವಿನು, ಬಲರಾಮನ ಮಾವುತ ತಿಮ್ಮ, ಕಾವಾಡಿ ಗೋಪಾಲ, ಅಭಿಮನ್ಯುವಿನ ಮಾವುತ ವಸಂತ, ಕವಾಡಿ ರಾಜು, ಗಜೇಂದ್ರನ ಮಾವುತ ಶಂಕರ, ಕಾವಾಡಿ ಸುನಿಲ್, ಭೀಮ ಮಾವುತ ರಾಧಾಕೃಷ್ಣ, ಕವಾಡಿ ರಾಜು, ಕಾವೇರಿಯ ಮಾವುತ ದೋಬಿ, ಕಾವಾಡಿ ರಘು, ವಿಜಯ ಆನೆಯ ಮಾವುತ ಭೋಜಪ್ಪ, ಕವಾಡಿ ದೊರೆಯಪ್ಪ, ವರಲಕ್ಷ್ಮೀಯ ಮಾವುತ ಗುಂಡ, ಕವಾಡಿ ಚಿನ್ನ ಮತ್ತು ಅವರ ಕುಟುಂಬ ಸದಸ್ಯರು ಅಲೋಕ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.
ಅರಣ್ಯ ಇಲಾಖೆಯ ಲಾರಿಗಳಲ್ಲಿ ಸೊಪ್ಪು ತಂದು ಆನೆಗಳಿಗೆ ಮೇವು ಒದಗಿಸಿದ್ದು, ಆ.17ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಶಾಸ್ತ್ರೋಕ್ತವಾಗಿ ಗಜಪಡೆಯನ್ನು ಬರಮಾಡಿಕೊಳ್ಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.