ದಸರೆಗೆ ದೀಪಾಲಂಕಾರವೇ ಮೆರುಗು
Team Udayavani, Sep 29, 2021, 3:31 PM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆ ಗರಿಗೆದರಿದ್ದು, ಈ ಬಾರಿಯ ದಸರಾ ಉತ್ಸವಕ್ಕೆ ದೀಪಾಲಂಕಾರವೇ ಪ್ರಮುಖ ಆಕರ್ಷಣೆಯಾಗಿದ್ದು, ನಗರದ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಗಳ ಜೋಡಣೆಕಾರ್ಯ ಹಾಗೂ ಹೊಸ ವಿನ್ಯಾಸದ ಪ್ರತಿಕೃತಿ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ.
ಅರಮನೆಗೆ ಗಜಪಡೆ ಪ್ರವೇಶಿಸಿದ ಬಳಿಕ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ, ವಿದ್ಯುತ್ ಬಲ್ಬ್ ಬದಲಾಯಿಸುವುದು, ಹೂದೋಟ ಸೇರಿ ವಿವಿಧ ಕೆಲಸಗಳು ಆರಂಭಗೊಂಡಿದ್ದು, ವಾರದಲ್ಲಿ ಮುಕ್ತಾಯವಾಗಲಿವೆ. ಇದರ ಜೊತೆಗೆ ಅರಮನೆ ಸುತ್ತಲಿನ ರಸ್ತೆ, ರಾಜಮಾರ್ಗ, ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಕಾರ್ಯ ನಡೆಯುತ್ತಿದೆ.
ದೀಪಾಲಂಕಾರವೇ ಪ್ರಮುಖ ಆಕರ್ಷಣೆ: ಈ ಬಾರಿಯ ದಸರಾದಲ್ಲಿ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳು ಇಲ್ಲದೇ ಇರುವುದರಿಂದ ದೀಪಾಲಂಕಾರವೇ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಈ ಬಾರಿ ಅಚ್ಚುಕಟ್ಟಾಗಿ ದೀಪಾ ಲಂಕಾರ ವ್ಯವವಸ್ಥೆ ಮಾಡಲು ನಿರ್ಧರಿಸಿದ್ದಾರೆ.
100 ಕಿಲೋ ಮೀಟರ್ ದೀಪಾಲಂಕಾರ: ಕಳೆದ ಬಾರಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ವಿದ್ಯುತ್ ದೀಪಾಲಂಕಾರ ಕೇವಲ 60 ಕಿ.ಮೀ ಸೀಮಿತವಾಗಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ಇಳಿಮುಖವಾಗಿರುವುದರಿಂದ ನಗರ ವ್ಯಾಪ್ತಿಯ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದ್ದು,ನಗರದ 121 ರಸ್ತೆಗಳು, 50 ವೃತ್ತಗಳಿಗೆದೀಪಾಲಂಕಾರ ಮಾಡುವ ಕಾರ್ಯ ಹಾಗೂ ಹೊಸ ವಿನ್ಯಾಸದ ಪ್ರತಿಕೃತಿ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ.
ಅಕ್ಟೋಬರ್ 7ರಂದು ನಗರದ ಸಯ್ನಾಜಿರಾವ್ ರಸ್ತೆಯಲ್ಲಿ ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿದ್ದು, ರಾತ್ರಿ 7 ಗಂಟೆಯಿಂದ 9.30ರವರೆಗೆ ದೀಪಾಲಂಕಾರ ಜಗಮಗಿಸಲಿದೆ. ಬಳಿಕ ಜಂಬೂಸವಾರಿ ದಿನವಾದ ಅ.17ರಂದು ದೀಪಾಲಂಕಾರ ಮುಕ್ತಾಯವಾಗಲಿದೆ.
ಈಗಾಗಲೇ ಬೆಂಗಳೂರು ರಸ್ತೆ, ಅಂಬೇಡ್ಕರ್ ವೃತ್ತ, ಸಯ್ನಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಉಳಿದ ರಸ್ತೆ ಮತ್ತು ವೃತ್ತಗಳಲ್ಲಿ ದೀಪಗಳ ಅಲಂಕಾರ ಮಾಡಲು ರಸ್ತೆ ಎರಡು ಬದಿಯಲ್ಲಿ ಮರದ ಕಂಬಗಳನ್ನು ನೆಡಲಾಗುತ್ತಿದೆ. ಒಟ್ಟಾರೆ ದಸರಾ ದೀಪಾಲಂಕಾರ ಕಾರ್ಯದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ತೊಗಿಸಿಕೊಂಡಿದ್ದು, ಅನಗತ್ಯವಾಗಿ ವಿದ್ಯುತ್ ಪೋಲಾಗದಂತೆ ತಡೆಯಲು ರಾಜ ಮಾರ್ಗದಲ್ಲಿ ಅರಮನೆಗೆ ಬಳಸಿರುವ ಬಲ್ಬ್ಗಳನ್ನು ಬಳಸಿ, ಉಳಿದೆಲ್ಲಾ ರಸ್ತೆಗಳಿಗೆ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗುತ್ತಿದೆ. ಇದರಿಂದ 1ಲಕ್ಷದ 25 ಸಾವಿರ ಯೂನಿಟ್ ವಿದ್ಯುತ್ ಸಾಕಾಗಲಿದೆ ಎಂದು ಸೆಸ್ಕ್ನ ಅಧೀಕ್ಷಕ ಎಂಜಿನಿಯರ್ ಪತ್ರಿಕೆಗೆ ತಿಳಿಸಿದ್ದಾರೆ.
ಒಟ್ಟಾರೆ ಅ.7ರಂದು ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿರುವುದರಿಂದ ದೀಪಾಲಂಕಾರಜೋಡಣೆ ಕಾರ್ಯ ಬಿರುಸಿನಿಂದ ಸಾಗಿದ್ದು, ಮಳೆ ಕಡಿಮೆಯಾದರೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.
24 ವಿಶೇಷ ಪ್ರತಿಕೃತಿ:
ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಅವರ ಪ್ರತಿಕೃತಿ ನಿರ್ಮಿಸಲಾಗುತ್ತಿರುವುದು ವಿಶೇಷ. ಹಾಗೆಯೇ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾತಂತ್ರ್ಯ ಹೋರಾಟಗಾರರು,ದೇಶದ ನಾಯಕರು, ಮೈಸೂರು ಅರಮನೆ,ವಿಷ್ಣು, ಶ್ರೀಕೃಷ್ಣ ರಥ, ಸುತ್ತೂರು ರಾಜೇಂದ್ರ ಸ್ವಾಮೀಜಿ ಅವರ ಪ್ರತಿಕೃತಿ ವಿಶೇಷವಾಗಿದೆ.ಜೊತೆಗೆ ನಗರದ ಎಲ್‌ಐಸಿ ಕಚೇರಿ ವೃತ್ತದಲ್ಲಿವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತುಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮಾಡುವ ಕೆಲಸ ನಡೆಯುತ್ತಿದೆ.
ಅ.7ರಂದು ಸಯ್ನಾಜಿ ರಾವ್ ರಸ್ತೆಯಲ್ಲಿನ ಹಸಿರು ಚಪ್ಪರದಲ್ಲಿದೀಪಾ ಲಂಕಾರ ಉದ್ಘಾಟಿಸಲಾಗುತ್ತದೆ.ನಿತ್ಯ ರಾತ್ರಿ 7 ಗಂಟೆಯಿಂದ 9.30ರವರೆಗೆ ದೀಪಾಲಂಕಾರ ಇರಲಿದೆ. ಈ ಬಾರಿ ದೀಪಾಲಂಕಾರವೇ ಪ್ರಮುಖ ಆಕರ್ಷಣೆ ಯಾಗಿರುವುದರಿಂದ ಒತ್ತು ನೀಡಲಾಗಿದೆ.– ನಾಗೇಶ್, ಅಧೀಕ್ಷಕ ಎಂಜಿನಿಯರ್ ಸೆಸ್ಕ್
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.