ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ
Team Udayavani, Sep 30, 2019, 3:00 AM IST
ಮೈಸೂರು: ಕುಸ್ತಿ ಪಟುಗಳ ಮಾಸಾಶನವನ್ನು 500 ರೂ.ಗಳಿಂದ ಒಂದು ಸಾವಿರ ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದ ವಸ್ತುಪ್ರದರ್ಶನ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ ಮಾತನಾಡಿದ ಅವರು, ಮೈಸೂರು ಅರಮನೆಗಳ ನಗರಿಯಂತೆ ಗರಡಿ ಮನೆಗಳ ನಗರವೂ ಹೌದು.
ಮಹಾರಾಜರ ಕಾಲದಲ್ಲಿ ಕುಸ್ತಿ ಜನಪ್ರಿಯ ಕ್ರೀಡೆಯಾಗಿ ಉತ್ತುಂಗಕ್ಕೇರಿತ್ತು. ಕುಸ್ತಿ ಪಂದ್ಯಾ ಮೈಸೂರು ದಸರಾದೊಂದಿಗೆ ಹಾಸುಹೊಕ್ಕಾಗಿದೆ. ಸರ್ಕಾರದಿಂದ ಕುಸ್ತಿಪಟುಗಳಿಗೆ ನೀಡಲಾಗುತ್ತಿದ್ದ 500 ರೂ. ಮಾಶಾಸನದ ಬದಲಿಗೆ ಒಂದು ಸಾವಿರ ರೂ. ನೀಡಲಾಗುವುದು. ಜೊತೆಗೆ ಉಳಿಕೆ ಬಾಕಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ನಂತರ 3 ಕೋಟಿ ರೂ. ವೆಚ್ಚದ ದಸರಾ ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡುವ ಪ್ರೇಕ್ಷಕರ ಗ್ಯಾಲರಿಯ ಛಾವಣಿ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಕೆ.ಜಿ ಕೊಪ್ಪಲಿನ ಪೈಲ್ವಾನ್ ಡಿ.ಕರಿಗೌಡ ಅವರು ಕುಸ್ತಿ ಪಂದ್ಯಾವಳಿಯ ಜ್ಯೋತಿಯನ್ನು ತಂದರು. ಬಳಿಕ ಜ್ಯೋತಿಯನ್ನು ಮುಖ್ಯಮಂತ್ರಿಗಳು ಕುಸ್ತಿ ಪಂದ್ಯಾವಳಿಯ ಆಯೋಜಕರಿಗೆ ನೀಡಿದರು. ಮೊದಲನೆಯ ಕುಸ್ತಿಯು ಕನಕಪುರದ ಸ್ವರೂಪ್‌ಗೌಡ ಮತ್ತು ನಜರ್‌ಬಾದ್‌ನ ಚೇತನ್‌ಗೌಡ ನಡುವೆ ಹಾಗೂ ಕಿರಿಯ ವಯಸ್ಸಿನ ಪೈಲ್ವಾನ್ ಮುಖೇಶ್‌ಗೌಡ ಮತ್ತು ಶ್ರೇಯಸ್ ನಡುವೆ ಸಮ ಬಲದ ಕುಸ್ತಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ , ಶಾಸಕ ಎಲ್. ನಾಗೇಂದ್ರ, ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.