ಮೃಗಾಲಯದ ಚಿಂಪಾಂಜಿ ಉಸಿರಾಟ ಸಮಸ್ಯೆಯಿಂದ ಸಾವು
Team Udayavani, Dec 26, 2018, 11:19 AM IST
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿಂಪಾಂಜಿ 27 ವರ್ಷದ ಗುರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ. ಚೆನ್ನೈನ ಅರಿಗ್ನಾರ್ ಅಣ್ಣ ಮೃಗಾಲಯದಿಂದ 2003ರಲ್ಲಿ ಈ ಚಿಂಪಾಂಜಿಯನ್ನು ತರಿಸಲಾಗಿತ್ತು.
ನಿಶ್ಯಕ್ತಿಯಿಂದ ಬಳಲುತ್ತಿದ್ದ ಈ ಚಿಂಪಾಂಜಿಗೆ ಮೃಗಾಲಯದ ಪಶು ವೈದ್ಯ ಡಾ.ಸುಂದರ್‌ರಾಜ್, ಸಲಹಾ ವೈದ್ಯರು ಮತ್ತು ಪ್ರೈಮೆಟ್ಸ್‌ಗಳನ್ನು ಸಂಪರ್ಕಿಸಿ ಚಿಕಿತ್ಸೆ ಮುಂದುವರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ ಮೃತಪಟ್ಟಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ತಜ್ಞ ಪಶು ವೈದ್ಯರ ತಂಡ, ಪಶು ರೋಗ ನಿರ್ಣಯ ತಜ್ಞರು, ಪಶುಪಾಲನಾ ಇಲಾಖೆ ಮತ್ತು ಕೆ.ಆರ್.ಆಸ್ಪತ್ರೆ, ಗೋಪಾಲ ಗೌಡ ಆಸ್ಪತ್ರೆಯ ತಜ್ಞ ವೈದ್ಯರು ಚಿಂಪಾಂಜಿಯ ಮರಣೋತ್ತರ ಪರೀಕ್ಷೆ ನಡೆಸಿದರು.
ಮೃತ ಚಿಂಪಾಂಜಿಯ ವಿವಿಧ ಅಂಗಾಂಗಗಳ ಮಾದರಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ತಜ್ಞ ವೈದ್ಯರ ತಂಡ ಚಿಂಪಾಂಜಿಯು ಉಸಿರಾಟದ ವಿಫಲತೆಯಿಂದ ಮೃತಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.