ನೋಟು ರದ್ಧತಿ ವಿರೋಧಿಸಿ “ಕೈ’ ಬೃಹತ್ ರ್ಯಾಲಿ
Team Udayavani, Jan 9, 2017, 12:24 PM IST
ಮೈಸೂರು: ನೋಟು ರದ್ಧತಿಯಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹಂತ ಹಂತವಾಗ ಚಳವಳಿ ಕೈಗೆತ್ತಿಕೊಳ್ಳುತ್ತಿದ್ದು, ಜ.9ರಂದು ಮೊದಲ ಹಂತದ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಎಐಸಿಸಿ ವೀಕ್ಷಕ ಜತ್ತಿ ಕುಸುಮಕುಮಾರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.8ರಂದು ಪ್ರಧಾನಿ ನರೇಂದ್ರಮೋದಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಕೂಲಿ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು ಬದುಕಿಗಾಗಿ ಪರಿತಪಿಸಬೇಕಾಗಿ ಬಂದಿದೆ. ಅಸಂಘಟಿತ ವಲಯದಲ್ಲಿ ಶೇಕಡ 8ಕ್ಕೂ ಹೆಚ್ಚು, ನಿರ್ಮಾಣ ಹಾಗೂ ಕೃಷಿ ಕಾರ್ಮಿಕ ವಲಯದಲ್ಲಿ ನೋಟು ರದ್ಧತಿಯಿಂದ 2 ಕೋಟಿ ಜನ ಉದ್ಯೋಗ ಕಳೆದು ಕೊಂಡಿದ್ದಾರೆ.
ಬಿರ್ಲಾ ಸಮೂಹದ ಕಂಪನಿ ಯಿಂದ ಸ್ವತಃ ನರೇಂದ್ರಮೋದಿ 50 ಕೋಟಿ ರೂ. ಲಂಚ ಪಡೆದಿರುವುದು ಬಯಲಿಗೆ ಬಂದ ಹಿನ್ನೆಲೆಯಲ್ಲಿ ಜನರ ದಿಕ್ಕು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದರು. ನೋಟು ರದ್ಧತಿಯಿಂದ ಕಪ್ಪುಹಣ ಹೊರ ತೆಗೆವ ಮಾತನಾಡುತ್ತಿದ್ದ ನರೇಂದ್ರಮೋದಿ, 50 ದಿನಗಳ ನಂತರ ಆ ಬಗ್ಗೆ ಚಕಾರ ಎತ್ತಲಿಲ್ಲ. ಕೇಂದ್ರ ವಿತ್ತ ಮಂತ್ರಿ ಹಾಗೂ ಆರ್‌ಬಿಐ ಗವರ್ನರ್ ನೋಟು ರದ್ಧತಿ ಬಳಿಕ ಎಷ್ಟು ಕಪ್ಪುಹಣ ಜಮೆ ಆಯಿತು ಎಂಬ ಮಾಹಿತಿಯನ್ನು ದೇಶಕ್ಕೆ ನೀಡುತ್ತಿಲ್ಲ.
ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಚರ್ಚೆಗೆ ಉತ್ತರ ನೀಡಲು ಪ್ರಧಾನಿ ಸಂಸತ್‌ಗೆ ಬರಲೇ ಇಲ್ಲ. ಹೀಗಾಗಿ ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಜನರ ಬಳಿಗೆ ಕೊಂಡೊಯ್ಯುತ್ತಿದೆ ಎಂದರು. ಅಪಮೌಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿ, ಅಮೆರಿಕ, ಅಣತಿಯಂತೆ ವಿಸಾ, ಮಾಸ್ಟರ್ ಕಾರ್ಡ್, ಪೇಟಿಮ್ ವಹಿವಾಟು ಮಾಡು ವಂತೆ ಜನತೆಗೆ ಕೋರುತ್ತಾರೆ. ಆದರೆ, 130 ಜನಸಂಖ್ಯೆ ಇರುವ ಭಾರತದಲ್ಲಿ ಅತೀ ಹೆಚ್ಚಿನ ಜನ ಅನಕ್ಷರಸ್ಥ ರಾಗಿದ್ದರೆ, ಅಕ್ಷರಸ್ಥರಲ್ಲೂ ಬಹುತೇಕ ಜನರಿಗೆ ಬ್ಯಾಂಕಿಂಗ್ ವ್ಯವಹಾರ ಸರಿಯಾಗಿ ತಿಳಿದಿಲ್ಲ.
ಹೀಗಿರು ವಾಗ ಭಾರತಕ್ಕೆ ಡಿಜಿಟಲ್ ಆರ್ಥಿಕತೆ ಸೂಕ್ತವಲ್ಲ. ಇಷ್ಟಕ್ಕೂ ಪೇಟಿಮ್ ಚೀನಾದ ಮೋಸಗಾರ ಕಂಪನಿ. ಇಂತಹವುಗಳ ಕೈಗೆ ದೇಶದ ಆರ್ಥಿಕತೆ ಕೊಡುವುದು ಸರಿಯಲ್ಲ ಎಂದು ಹೇಳಿದರು. ನೋಟು ರದ್ಧತಿಯ ನಂತರ ಹೊಸ ನೋಟುಗಳ ಮುದ್ರಣ ಹಾಗೂ ಸಾಗಣೆಯಿಂದ ದೇಶದ ಬೊಕ್ಕಸಕ್ಕೆ 20 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಮತ್ತೆ ಈ ಹೊರೆ ಜನತೆಯ ಮೇಲೆ ಹೇರಲಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಹಂತ ಹಂತವಾಗಿ ಹೋರಾಟ ಕೈಗೆತ್ತಿಕೊಂಡಿದ್ದು, ಮೊದಲ ಹಂತವಾಗಿ ಜ.9ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, 2ನೇ ಹಂತದಲ್ಲಿ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳೂ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದೆ. 1978ರಲ್ಲಿ ನೋಟು ರದ್ದು ಮಾಡಿದಾಗ ದೇಶದಲ್ಲಿ ಈ ರೀತಿಯ ಅರಾಜಕತೆ ಉಂಟಾಗಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರಮೋದಿ ಯಾವುದೇ ಪೂರ್ವ ತಯಾರಿ ಇಲ್ಲದೆ, ನೋಟು ರದ್ದು ಮಾಡಿದ್ದರಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಿತ್ತ ಮಂತ್ರಿ, ಆರ್‌ಬಿಐ ಯನ್ನು ಕತ್ತಲಲ್ಲಿಟ್ಟು ದಿನಕ್ಕೊಂದು ಆದೇಶ ಮಾರ್ಪಾಡು ಮಾಡುತ್ತಿರುವುದರಿಂದ ದೇಶದ ಬೆಳವಣಿಗೆ ದರ (ಜಿಡಿಪಿ) ಕುಸಿಯುತ್ತಿದೆ ಎಂದು ದೂರಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್ ಹಲವು ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.
10 ಸಾವಿರ ಮಂದಿ ಭಾಗಿ
ನೋಟು ರದ್ಧತಿ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಪಕ್ಷದ ಮುಂಚೂಣಿ ಘಟಕಗಳ ಮುಖಂಡರು ಸೇರಿದಂತೆ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದು, ಬೆಳಗ್ಗೆ 11ಕ್ಕೆ ರೈಲು ನಿಲ್ದಾಣ ಬಳಿಯ ಕಾಂಗ್ರೆಸ್ ಪಕ್ಷದ ನಿವೇಶನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲಾಗುತ್ತದೆ.
ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಅದರಲ್ಲೂ ಬೆಂಗಳೂರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಕ್ರಿಸ್‌ಮಸ್ ದಿನವೇ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿದ ಪ್ರಕರಣದ ಬಗ್ಗೆ ಯಾವ ಮಾಧ್ಯಮಗಳೂ ಬಿಂಬಿಸುತ್ತಿಲ್ಲ.
-ಡಾ. ನಾಗಲಕ್ಷ್ಮೀ, ಉಪಾಧ್ಯಕ್ಷೆ, ರಾಜ್ಯ ಮಹಿಳಾ ಕಾಂಗ್ರೆಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.