ಕೋಡಿಬಿದ್ದ ಬಿಳಿಕೆರೆ ರೈತರ ಮೊಗದಲ್ಲಿ ಸಂತಸ
Team Udayavani, Jul 26, 2017, 12:10 PM IST
ಹುಣಸೂರು: ಬರದಿಂದ ತತ್ತರಿಸಿದ್ದ ತಾಲೂಕಿನ ಬಿಳಿಕರೆ ಭಾಗದ ರೈತರ ಕಣ್ಣಲ್ಲೀಗ ಸಂತಸ ಮನೆಮಾಡಿದ್ದು, ಇಲ್ಲಿನ ಕೆರೆಗಳಲ್ಲಿ ನೀರು ತುಂಬಿ ಕಂಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಾದರೂ ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯುವ ಹಾಗೂ ಅಂತರ್ಜಲ ವೃದ್ಧಿಸುವ ಆಶಾ ಭಾವನೆ ಅನ್ನದಾತರದ್ದಾಗಿದೆ.
ಕಳೆದ ನಾಲ್ಕು ದಶಕಗಳಿಂದ ಕೆರೆಗಳನ್ನು ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಯೋಜನೆಗಳ ಮೂಲಕ ನೀರು ತುಂಬಿಸಲಾಗುತ್ತಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಜೀನಹಳ್ಳಿ ಕೆರೆ, ಕಸಬಾ ಹೋಬಳಿಯ ಬೀಜಗನಹಳ್ಳಿ ದೊಡ್ಡಕೆರೆ, ಸೋಮನಹಳ್ಳಿ ಕೆರೆಗಳು ಭರ್ತಿಯಾಗಿದ್ದು, ಈ ಭಾಗದ ಇನ್ನುಳಿದ ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದು, ಪವರ್ ಕಟ್‌ನದ್ದೇ ತೀವ್ರ ಸಮಸ್ಯೆಯಾಗಿದೆ.
ಅನ್ನದಾತರ ಕನಸು ಈಡೇರಿದೆ: ಈ ಕೆರೆಗಳ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿರುವುದು. ಅಂತರ್ಜಲ ಪಾತಾಳಕ್ಕಿಳಿ ದಿರುವುದನ್ನು ಗಮನಿಸಿದ ಶಾಸಕ ಎಚ್.ಪಿ.ಮಂಜುನಾಥ್ ತಜ್ಞರ ಹಾಗೂ ರೈತರ ಅಭಿಪ್ರಾಯ ಸಂಗ್ರಹಿಸಿ ಏತ ನೀರಾವರಿ ಯೋಜನೆಯೊಂದೇ ಕೆರೆಗಳಿಗೆ ನೀರುಣಿಸುವ ಏಕೈಕ ಮಾರ್ಗವೆಂಬುದನ್ನು ಕಂಡುಕೊಂಡು ಸಿಎಂ, ನೀರಾವರಿ ಸಚಿವರ ಮೇಲೆ ಒತ್ತಡ ಹಾಕಿ ಅನುದಾನ ತರುವಲ್ಲಿ ಯಶಸ್ವಿಯಾದರು.
ಬೀಜಗನಹಳ್ಳಿ ಏತನೀರಾವರಿ ಯೋಜನೆ: ತಾಲೂಕಿನ ಬೀಜಗನಹಳ್ಳಿ ಏತನೀರಾವರಿ ಯೋಜನೆಯನ್ನು 4.99 ಲಕ್ಷ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಬೀಜಗನಹಳ್ಳಿ ದೊಡ್ಡಕೆರೆ, ಪುಟ್ಟನಕಟ್ಟೆ ಹಾಗೂ ಎಮ್ಮೆಕೊಪ್ಪಲು ಕೆರೆೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದ್ದು. ಕಳೆದ 25-30 ವರ್ಷಗಳಿಂದ ಪಾಳು ಬಿದ್ದಿದ್ದ ಬೀಜಗನಹಳ್ಳಿ ದೊಡ್ಡಕೆರೆ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಹುಣಸೂರು-ಮೈಸೂರು ಹೆದ್ದಾರಿ ಬಳಿಯಲ್ಲಿರುವ ಕೆರೆಗೆ ನೀರು ಹರಿಯಲಾರಂಭಿದ್ದು, ಈ ಯೋಜನೆಯಿಂದ 222 ಎಕರೆ ಪ್ರದೇಶಕ್ಕೆ ನೀರುಣಿಸಲಿದೆ. ಅಲ್ಲದೆ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲವೃದ್ಧಿಗೆ ನೆರವಾಗಲಿದೆ.
ಮರದೂರು ನೀರಾವರಿ ಯೋಜನೆ: ಮರದೂರು ಬಳಿ 2 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, 60 ಎಚ್‌ಪಿ ಮೂರು ಮೋಟಾರ್‌ಗಳನ್ನು ಅಳವಡಿಸಿದ್ದು, ಸರದಿಯಂತೆ 8 ಗಂಟೆ ಎರಡು ಮೋಟರ್ ಮೂಲಕ ನದಿಯಿಂದ ನೀರೆತ್ತಲಾಗುತ್ತಿದೆ. ಈಗಾಗಲೆ ಸುಮಾರು 3 ಕಿಮೀ ದೂರದ ಸೋಮನಹಳ್ಳಿ ಕೆರೆಗೆ ನೀರು ತುಂಬಿಸಿದ್ದು, ಮಾರ್ಗಮಧ್ಯದಲ್ಲಿನ ಮತ್ತೂಂದು ಸೋಮನಹಳ್ಳಿಕಟ್ಟೆಗೂ ನೀರು ಹರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಯಿಂದ ಮರದೂರು, ರಾಮಪಟ್ಟಣ, ಸೋಮನಹಳ್ಳಿ ಗ್ರಾಮಗಳ 220 ಎಕರೆ ಪ್ರದೇಶಕ್ಕೆ ನೀರುಣಿಸುವ ಜೊತೆಗೆ ಅಂತರ್ಜಲ ವೃದ್ಧಿ ಸಲಿದೆ.
ಬಿಳಿಕೆರೆ ಏತನೀರಾವರಿ ಯೋಜನೆ: 4.99 ಲಕ್ಷ ರೂ ವೆಚ್ಚದ ಯೋಜನೆಯು ಮೈಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಬಳಿ ಲಕ್ಷ್ಮಣತೀರ್ಥ ನದಿಗೆ ಪಂಪ್‌ಹೌಸ್ ನಿರ್ಮಿಸಿ, 220 ಎಚ್‌ಪಿ ಮೂರು ಮೋಟಾರ್ ಅಳವಡಿಸಿದ್ದು, ಒಮ್ಮೇಲೆ ಎರಡು ಮೋಟಾರ್ ಮೂಲಕ 6 ಕಿ.ಮೀ ದೂರದ ಜೀನಹಳ್ಳಿ ಕೆರೆಗೆ ಏರು ಕೊಳವೆ ಮೂಲಕ ನೀರು ತುಂಬಿಸಲಾಗುತ್ತಿದ್ದು, ವಾರದಲ್ಲಿ ಕೆರೆ ತುಂಬಿ ಕೋಡಿ ಬೀಳಲಿದೆ. ನಂತರ ಬಿಳಿಕೆರೆಯ ಕೆರೆ ಆನಂತರ ಹಳೇಬೀಡು ಕೆರೆಗೆ ನೀರು ತುಂಬಿಸಲಾಗುವುದು.
ಈ ಭಾಗದಲ್ಲಿ ಬಿಳಿಕೆರೆ ಬೈಪಾಸ್ ಆದ ನಂತರದಲ್ಲಿ ಕೆರೆ ಪಾಳು ಬಿದ್ದಿತ್ತು, ಅಲ್ಲದೆ ಅರಣ್ಯ ಇಲಾಖೆಯವರು ಕೆರೆ ಅಂಗಳದಲ್ಲೇ ಸಸಿನೆಟ್ಟು ಬೆಳೆಸಿದ್ದರು ಹಾಗೂ ಗ್ರಾಮದ ಚರಂಡಿ ನೀರು ಹರಿದು ಕಲುಷಿತಗೊಳ್ಳುವುದರ ಜೊತೆಗೆ ಬರಿದಾಗಿತ್ತು. ಕೆರೆಗೆ ನೀರು ತುಂಬದೆ ಗ್ರಾಮಸ್ಥರು, ಜಾನುವಾರುಗಳು ಸಂಕಷ್ಟಕೊಳಗಾಗಿದ್ದರು. ಮೂರು ಕೆರೆಗಳು ಭರ್ತಿಯಾದಲ್ಲಿ ಈ ಭಾಗದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ, ಜಾನುವಾರುಗಳಿಗೆ ಅನುಕೂಲವಾಗಲಿದೆ.
ಬಿಳಿಕೆರೆ ಹಾಗೂ ಬೀಜಗನಹಳ್ಳಿ ನೀರಾವರಿ ಯೋಜನೆ ಯಶಸ್ವಿಯಾಗಿದ್ದು, ವಿದ್ಯುತ್ ಸಮಸ್ಯೆ ನಡುವೆಯೂ ಕೆರೆಗಳಿಗೆ ನೀರು ಹರಿಯುತ್ತಿದೆ. ಎರಡು ಕೋಟಿ ವೆಚ್ಚದ ಮರದೂರು ಏತ ನೀರಾವರಿ ಯೋಜನೆಗೆ ಅಗತ್ಯದಷ್ಟು ಗಾತ್ರದ ಪೈಪ್ ಬಳಸದೆ, ನಾಲ್ಕಾರು ಕಡೆ ಪೈಪ್ ಒಡೆದು ನೀರು ಪೋಲಾಗುವ ಜೊತೆಗೆ ರಸ್ತೆಯೂ ಹಾಳಾಗುತ್ತಿದೆ.
ನಿರೀಕ್ಷೆಯಂತೆ ಸೋಮನಹಳ್ಳಿ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬುವುದು ತಡವಾಗುತ್ತಿದೆ. ಮುಂದಾದರೂ ಹೆಚ್ಚಿನ ಗುಣಮಟ್ಟದ ಪೈಪ್ ಅಳವಡಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕು, ಇಲ್ಲಿನ ಸಣ್ಣ ನೀರಾವರಿ ಇಲಾಖೆ ಕಚೇರಿ ಮೈಸೂರಿಗೆ ವರ್ಗಾವಣೆ ಗೊಂಡಿದ್ದರಿಂದಲೂ ಅಧಿಕಾರಿಗಳಿಗೆ ಹೇಳಿಕೊಳ್ಳಲು ತೊಂದರೆಯಾಗಿದೆ ಎಂಬುದು ರೈತರ ಆರೋಪ.
40 ವರ್ಷಗಳಿಂದ ಬೀಜಗನಹಳ್ಳಿ ದೊಡ್ಡಕೆರೆ ತುಂಬದೆ ರೈತರು ಕೃಷಿ ಚಟುವಟಿಕೆಯಿಂದ ದೂರಾಗಿದ್ದೆವು, ದನ-ಕರುಗಳಿಗೆ ನೀರು ಕುಡಿಸಲು ಪರದಾಡುತ್ತಿದ್ದೆವು. ಮೇವಿಲ್ಲದೆ ದನಗಳು ಅಲೆಮಾರಿಗಳಂತೆ ಅಡ್ಡಾಡುತ್ತಿದ್ದವು, ಇದೀಗ ಶಾಸಕರ ವಿಶೇಷ ಆಸಕ್ತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.
-ರಾಮರೆಡ್ಡಿ, ರೈತ, ಬೀಜಗನಹಳ್ಳಿ
ಮದುವೆಯಾಗಿ ಜೀನಹಳ್ಳಿಗೆ ಬಂದು 8 ವರ್ಷವಾಗಿದೆ. ಬಿಳಿಕೆರೆ ಭಾಗದ ಕೆರೆಗಳಲ್ಲಿ ನೀರನ್ನು ಕಂಡೇ ಇರಲಿಲ್ಲ, ಬಟ್ಟೆ ತೊಳೆಯಲು, ದನಕರುಗಳಿಗೆ ನೀರು ಕುಡಿಸಲು ನಲ್ಲಿ ನೀರನ್ನೇ ಅವಲಂಬಿಸಿದ್ದೆವು, ಇದೀಗ ಕಾಲುವೆಯಲ್ಲಿ ನೀರು ಹರಿಯುವ ಪರಿ ಕಂಡು ಸಂತೋಷವಾಗಿದೆ. ಮುಂದೆ ನೆಮ್ಮದಿಯ ದಿನಗಳು ಬರಲಿವೆ ಎಂಬ ಆಶಾ ಭಾವನೆಯಲ್ಲಿದ್ದೇವೆ.
-ಗೌರಿ, ರೈತ ಮಹಿಳೆ, ಜೀನಹಳ್ಳಿ
ಹುಣಸೂರು ತಾಲೂಕಿನ ಮೂರು ಕಡೆ ಏತನೀರಾವರಿ ಯೋಜನೆ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ. ಇದೀಗ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ವಿದ್ಯುತ್ ಸಮಸ್ಯೆಯೂ ಸಾಕಷ್ಟಿದ್ದರೂ ಮುಂದಿನ ಒಂದು ತಿಂಗಳಿಗೆ ಯಾವುದೇ ತೊಂದರೆಯಿಲ್ಲ, ಎಲ್ಲ ಕೆರೆಗಳಿಗೂ ನೀರು ತುಂಬಿಸಲಾಗುವುದು, ಮರದೂರು ಯೋಜನೆಗೆ ಅಳವಡಿಸಿರುವ ಏರ್‌ಪೈಪ್ ಮೂಲಕ ಕೆಲ ರೈತರು ಸಂಪರ್ಕ ಕಲ್ಪಿಸಿಕೊಂಡು, ನೀರು ಪಡೆಯುತ್ತಿದ್ದುದ್ದರಿಂದ ಅಲ್ಲಲ್ಲಿ ಪೈಪ್‌ಗ್ಳು ಒಡೆದು ನೀರು ಪೋಲಾಗುತ್ತಿತ್ತು ಇದನ್ನು ಸರಿಪಡಿಸಲಾಗಿದೆ.
-ಕೃಷ್ಣಮೂರ್ತಿ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಮೈಸೂರು.
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.