38 ದಿವ್ಯಾಂಗರಿಗೆ ತ್ರಿಚಕ್ರ ವಾಹನ ವಿತರಣೆ
Team Udayavani, Jul 23, 2018, 12:40 PM IST
ಹುಣಸೂರು: ತಾಲೂಕಿನ 38 ಮಂದಿ ದಿವ್ಯಾಂಗರಿಗೆ(ವಿಕಲಚೇತನ) ಒಟ್ಟು 30.40 ಲಕ್ಷರೂ ವೆಚ್ಚದಡಿ ತ್ರಿಚಕ್ರವಾಹನಗಳನ್ನು ಶಾಸಕ ಎಚ್.ವಿಶ್ವನಾಥ್ ವಿತರಿಸಿದರು.
ತಾಪಂ ಆವರಣದಲ್ಲಿ ಜಿಲ್ಲಾ ಅಂಗವಿಲಕರ ಕಲ್ಯಾಣಾ ಧಿಕಾರಿ ಕಚೇರಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನೀಡುವ ವಾಹನಗಳನ್ನು ವಿತರಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ವಿಕಲಚೇತನರನ್ನು ದಿವ್ಯಾಂಗರೆಂದು ಕರೆಯುವ ಮೂಲಕ ಕಾಳಜಿತೋರಿರುವುದು ಹೆಮ್ಮೆಯ ವಿಚಾರ.
ತಾವು ಸಂಸದರಾಗಿದ್ದ ವೇಳೆ ಸಂಸದರ ನಿಧಿ ಯಿಂದ ಈ ವರ್ಗದವರಿಗೆ ಯಾವುದೇ ಸವಲತ್ತು ವಿತರಿಸಲು ಅವಕಾಶವಿರಲಿಲ್ಲ, ಇದನ್ನು ಮನಗಂಡ ತಾವು ಹಿರಿಯ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್‌ರ ಗಮನಕ್ಕೆ ತಂದ ವೇಳೆ ದಿವ್ಯಾಂಗರಿಗೂ ಸಂಸದರ ನಿಧಿ ಯಿಂದ ಸವಲತ್ತು
ಕಲ್ಪಿಸುವ ಅವಕಾಶ ನೀಡಿದ್ದರಿಂದಾಗಿ ಅಂದು ಮೈಸೂರು ಜಿಲ್ಲೆಯ 85 ಹಾಗೂ ಕೊಡಗಿನ 80ಕ್ಕೂ ಹೆಚ್ಚು ಮಂದಿಗೆ ಸವಲತ್ತು ವಿತರಿಸಲಾಗಿತ್ತು. 2016-17ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಜಿಲ್ಲೆಯ 400ಕ್ಕೂ ಹೆಚ್ಚು ಮಂದಿಗೆ ಅವಕಾಶ ಸಿಕ್ಕಿದ್ದರೆ, ತಾಲೂಕಿನ 38 ಮಂದಿಗೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೋನ್‌ಮ್ಯಾರೋ ಕಾಯಿಲೆಗೊಳಗಾಗಿರುವವರ ಹೆಚ್ಚಿನ ಚಿಕಿತ್ಸೆಗಾಗಿ ಈ ಬಾರಿಯ ಬಜೆಟ್‌ನಲ್ಲಿ 12 ಕೋಟಿ ರೂ ಮೀಸಲಿರಿಸಿದ್ದಾರೆ.
ಎಲ್ಲರಿಗೂ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಕೈಗೊಂಡಿದ್ದ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿದ ನಂತರ ಶೀಘ್ರ ಜಾರಿಗೆ ತರಲಾಗುತ್ತಿದೆ ಎಂದರು.
ಜಿ.ಪಂ.ಸದಸ್ಯ ಎಂ.ಬಿ.ಸುರೇಂದ್ರ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್, ಕಾರ್ಯ ನಿರ್ವಹಣಾಧಿ ಕಾರಿ ಕೃಷ್ಣಕುಮಾರ್, ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ಶಿವರಾಜು, ಸಿಡಿಪಿಓ ನವೀನ್‌ಕುಮಾರ್, ದಿವ್ಯಾಂಗರ ಕಲ್ಯಾಣಾ ಧಿಕಾರಿ ದೇವರಾಜ್ ಹಾಗೂ ಫಲಾನುಭವಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.