ಎಲ್ಲಾ ಕ್ಷೇತ್ರದಲ್ಲೂ ಕ್ರೀಡಾಪಟುಗಳಿಗೆ ಬೇಡಿಕೆ
Team Udayavani, Sep 1, 2019, 3:00 AM IST
ತಿ.ನರಸೀಪುರ: ಕ್ರೀಡೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದ್ದು, ಆಸಕ್ತ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಸಲಹೆ ನೀಡಿದರು. ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ವಿಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಾಟಾಳು ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲೂ ಕ್ರೀಡಾಪಟುಗಳಿಗೆ ಬೇಡಿಕೆ ಇದ್ದು, ಇದರಿಂದಲೇ ವೃತ್ತಿ ಬದುಕನ್ನೂ ಕಂಡುಕೊಳ್ಳಬಹುದು. ಶಿಕ್ಷಕರು ಸಹ ವಿದ್ಯಾರ್ಥಿಗಳಲ್ಲಿರುವ ಕ್ರೀಡಾಸ್ಫೂರ್ತಿ ಗುರುತಿಸಿ, ಅವರ ಪ್ರತಿಭೆ ಹೊರಹೊಮ್ಮಲು ನೆರವಾಗಬೇಕು. ಕ್ರೀಡೆಗೆ ಸರ್ಕಾರ ಕೂಡ ಹೆಚ್ಚು ಪ್ರೋತ್ಸಾಹಿಸುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ರಾಜ್ಯ, ರಾಷ್ಟಮಟ್ಟದಲ್ಲಿ ಸಾಧನೆ ತೋರಬೇಕು ಎಂದರು.
ಕ್ರೀಡಾಪಟುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ತಾಪಂ ಸದಸ್ಯ ಕೆ.ಎಸ್.ಗಣೇಶ್ ಕ್ರೀಡಾ ಜ್ಯೋತಿ ಸ್ವಿಕರಿಸಿದರು. ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಾಟಾಳು ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ, ಜಿಪಂ ಸದಸ್ಯರಾದ ಟಿ.ಎಚ್. ಮಂಜುನಾಥ್, ಜಯಪಾಲ್ ಭರಣಿ, ತಾಪಂ ಸದಸ್ಯರಾದ ಎಂ.ರಮೇಶ್, ರತ್ನರಾಜ್, ಪುರಸಭೆ ಸದಸ್ಯರಾದ ಟಿ.ಎಂ. ನಂಜುಂಡಸ್ವಾಮಿ,
ರೂಪಶ್ರೀ ಪರಮೇಶ್, ಬಿಇಒ ಸ್ವಾಮಿ, ದೈಹಿಕ ಶಿಕ್ಷಣ ಪರೀಕ್ಷಕ ಮಹಾಂತಪ್ಪ ನಾಗೂರು, ಸಂಪತ್ ದೊರೈರಾಜ್, ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಬಿಆರ್‌ಪಿ ಶಂಕರ್, ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ, ನಿರ್ದೇಶಕ ಎಚ್.ಡಿ. ಮಾದಪ್ಪ, ಶಶಿಧರ್, ಮೈಥಿಲಿ, ಪುಷ್ಪಾ, ಡಾ.ಪ್ರಭಾ, ಮುಖಂಡರಾದ ಮೂಗೂರು ಕುಮಾರಸ್ವಾಮಿ, ಶಂಭುದೇವನಪುರ ರಮೇಶ್, ಪುಟ್ಟಬುದ್ದಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.