ಆಯೋಗದ ಅಧ್ಯಕ್ಷರಿಗೆ ಬೇಡಿಕೆ ಸಲ್ಲಿಕೆ
Team Udayavani, Mar 15, 2021, 1:11 PM IST
ಹುಣಸೂರು: ಪೌರಕಾರ್ಮಿಕರಿಗೆ ಪ್ರತ್ಯೇಕ ಸ್ಮಶಾನ ಕಲ್ಪಿಸಿಕೊಡಿ, ಒಂದು ಮನೆಯಲ್ಲಿ ನಾಲ್ಕೈದು ಕುಟುಂಬಗಳು ವಾಸವಿದ್ದೇವೆ. ಸಮುದಾಯ ಭವನಬೇಕು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ತೆರೆದಿಟ್ಟರು.ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಪ್ರವಾಸಕೈಗೊಂಡಿರುವ ಸಫಾಯಿ ಕರ್ಮಚಾರಿಗಳ ಆಯೋಗದರಾಷ್ಟ್ರೀಯ ಅಧ್ಯಕ್ಷ ವೆಂಕಟೇಶನ್ ಅವರ ಮುಂದೆ ಹುಣಸೂರು ಪಿ.ಕೆ.ಕಾಲೋನಿಯ ಮಂದಿ ತಮ್ಮ ಅಳಲುತೋಡಿಕೊಂಡರು.
ಈ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್, ಕಣ್ಣಯ್ಯ ಪಿ.ಕೆ.ಕಾಲೋನಿಯಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಒಂದೇ ಮನೆಯಲ್ಲಿನಾಲ್ಕೈದು ಕುಟುಂಬಗಳು ವಾಸವಿದ್ದೇವೆ. ಸರ್ಕಾರ ಹಾಗೂಶಾಸಕರು 3 ಎಕರೆಯಲ್ಲಿ ಜಿ.ಪ್ಲಸ್ ಟು ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ, ಅದು ಸಾಲುತ್ತಿಲ್ಲ. ಮತ್ತಷ್ಟು ಮನೆಗಳನ್ನು ಮಂಜೂರು ಮಾಡಿಸಿಕೊಡುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶನ್, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆಆಯೋಜಿಸಿದ್ದು, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮನೆಮಂಜೂರಿಗೆ ಕ್ರಮವಹಿಸಲಾಗುವುದೆಂದರು. ಮುಖಂಡ ಪೆರುಮಾಳ್, ಸಮುದಾಯದ ಮಂದಿಸಾವನ್ನಪ್ಪಿದರೆ ಪ್ರತ್ಯೇಕ ಸ್ಮಶಾನವಿಲ್ಲ. ಮಂಜೂರುಮಾಡಿಸುವಂತೆ ಮಾಡಿದ ಮನವಿಗೆ ಪ್ರತ್ಯೇಕ ಸ್ಮಶಾನ ಬೇಡಿಕೆ ಒಳ್ಳೆಯದಲ್ಲ, ಎಲ್ಲರೂ ಕೂಡಿ ಬಾಳುವಂತಾಗಬೇಕು. ತಮಿಳುನಾಡಿನಲ್ಲಿ ಸಾರ್ವಜನಿಕ ಸ್ಮಶಾನದಲ್ಲೇಅವಕಾಶ ನೀಡಲಾಗಿದೆ. ಇಲ್ಲಿ ಪ್ರತ್ಯೇಕ ಬೇಡಿಕೆ ಬೇಡ ಎಂದು ಅಧ್ಯಕ್ಷರು ತಿಳಿಸಿದರು.
ಮುಖಂಡ ಮುರುಗೇಶ್ ಮಾತನಾಡಿ, ನಗರಸಭೆಯಲ್ಲಿ ವಾಟರ್‌ಮ್ಯಾನ್‌ಗಳು ಹಾಗೂ ಗುತ್ತಿಗೆ ನೌಕರರಿಗೆಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ದೂರಿದರು.ಬಡಾವಣೆಯ ಸ್ವಸಹಾಯ ಸಂಘದ ಮಹಿಳೆಯರು,ಸರ್ 15 ವರ್ಷಗಳಿಂದ ಮನೆಮನೆ ಕಸ ಸಂಗ್ರಹಿಸಿ, ಅವರುನೀಡುತ್ತಿದ್ದ ಹಣ ಹಾಗೂ ನಗರಸಭೆವತಿಯಿಂದ ನೀಡುತ್ತಿದ್ದಅಲ್ಪ ಸಂಬಳದಿಂದ ಜೀವನ ನಡೆಸುತ್ತಿದ್ದೆವು. ಇದೀಗಆಟೋಗಳನ್ನು ಮಾಡಿರುವುದರಿಂದ ಮನಗೆಕೆಲಸವಿಲ್ಲದಂತಾಗಿದೆ. ಮನೆಗಳು ಹಾಗೂ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಮತ್ತೆ ಕೆಲಸ ಮಾಡಲುಅವಕಾಶ ಮಾಡಿಕೊಡುವಂತೆ ಕೋರಿದರು. ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದರು. ನಗರಸಭೆ ಸದಸ್ಯೆ ರಾಣಿ ಪೆರುಮಾಳ್, ಸಫಾಯಿ ಕರ್ಮಾಚಾರಿ ಸದಸ್ಯರಾದ ಎಂ.ವಿ.ವೆಂಕಟೇಶ್, ಮುಖಂಡಮಣಿ, ರೇವಣ್ಣ, ಸಮಾಜ ಕಲ್ಯಾಣಾಧಿಕಾರಿಗಳಾದ ಮಧುಸೂದನ್, ಮೋಹನ್‌ಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.