ವಿಶ್ವನಾಥರಿಂದ ವಿವರಣೆ, ಯತ್ನಾಳ್,ನಿರಾಣಿಗೆ ನೋಟಿಸ್ :ನಳಿನ್ ಕುಮಾರ್ ಕಟೀಲ್
ಹಿಂದೆ ಸಮಯಕ್ಕೆ ತಕ್ಕಂತೆ ನಿರ್ಣಯ, ಈಬಾರಿ ಗಂಭೀರವಾಗಿ ಪರಿಗಣಿಸಿದ್ದೇವೆ
Team Udayavani, Jan 8, 2023, 11:00 PM IST
ಹುಣಸೂರು: ಹಳೇ ಮೈಸೂರು ಪ್ರದೇಶದಲ್ಲಿ ಬಿಜೆಪಿ ಅರಳಿಸಲು ಕಾರ್ಯ ತಂತ್ರ ರೂಪಿಸಿದ್ದು, ಫೆಬ್ರವರಿಯಲ್ಲಿ ಈ ಬಾಗದ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಬೂತ್ ಮಟ್ಟದ ವಿಜಯ್ ಅಭಿಯಾನಕ್ಕೆ ಬೋಳನಹಳ್ಳಿಯಲ್ಲಿ ಚಾಲನೆ ನೀಡಿದ ನಂತರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್ ನಿವಾಸದಲ್ಲಿ ಕಾಫಿ ಸೇವಿಸುತ್ತಿದ್ದ ರಾಜ್ಯಾಧ್ಯಕ್ಷರನ್ನು ಪತ್ರಕರ್ತರು ಮಾತಿಗೆಳೆದು ಮೈಸೂರು ಜಿಲ್ಲೆಯ ತಾಲೂಕುಗಳಲ್ಲಿ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಲ್ಲ ಎನ್ನುವ ಪ್ರಶ್ನೆಗೆ. ಆಯಾ ಸಮಯಕ್ಕೆ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದ್ದೆವು.ಈ ಬಾರಿ ಎಲ್ಲ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆಂದರು.
ಸಚಿವರ ಕೆಲಸಕ್ಕೆ ಶ್ಲಾಘನೆ
ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರು ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ. ಎಲ್ಲಾ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯವರನ್ನು ಮೈಸೂರು ಜಿಲ್ಲೆಗೆ ಉಸ್ತುವಾರಿ ಮಾಡಿದ್ದರಿಂದ ಅಭಿವೃದ್ಧಿ ಉತ್ತಮವಾಗಿ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ಪಕ್ಷ ವಿರೋಧ ಹೇಳಿಕೆಗೆ ನೋಟಿಸ್
ಹೆಚ್.ವಿಶ್ವನಾಥ್ ಅವರು ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ, ಯತ್ನಾಳ್ ಹಾಗೂ ನಿರಾಣಿ ನಡುವಿನ ಕಲಹದ ಬಗೆಗಿನ ಪ್ರಶ್ನೆಗೆ ಶೀಘ್ರದಲ್ಲಿಯೇ ವಿಶ್ವನಾಥ್ ಅವರನ್ನು ಕರೆದು ಅವರಿಂದ ವಿವರಣೆ ಪಡೆಯುತ್ತೇನೆ. ಅವರಿಬ್ಬರಿಗೂ ನೋಟಿಸ್ ನೀಡಲಾಗಿದೆ, ಯಡಿಯೂರಪ್ಪರನ್ನು ಪಕ್ಷ ನಿರ್ಲಕ್ಷ್ಯ ಮಾಡಿಲ್ಲ, ಅವರ ನೇತೃತ್ವ, ಬೊಮ್ಮಾಯಿ ಸಾರಥ್ಯದಲ್ಲೇ ಚುನಾವಣೆಯನ್ನು ಎದುರಿಸಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ಸ್ಯಾಂಟ್ರೋ ರವಿ ಗೊತ್ತಿಲ್ಲ
ಸ್ಯಾಂಟ್ರೋ ರವಿ ವಿಚಾರದ ಬಗ್ಗೆ ಕೇಳಲಾಗಿ. ಸ್ಯಾಂಟ್ರೋ ರವಿ ನನಗೆ ಯಾರೆಂದು ಗೊತ್ತಿಲ್ಲ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇನ್ನಷ್ಟೆ ತಿಳಿಯಬೇಕೆಂದು ಜಾರಿಕೊಂಡರು.
ಅಧ್ಯಕ್ಷರಾದ ನೀವೇ ಅಭಿವೃದ್ಧಿ ಬಿಟ್ಟು ಬೇರೆ ಧಾರ್ಮಿಕ ವಿಚಾರದಲ್ಲಿ ಮತವನ್ನು ಕೇಳಿ ಎಂದು ಹೇಳಿದ್ದೀರಲ್ಲಾ ಎಂಬ ಮಾತಿಗೆ, ನಾನು ಆ ರೀತಿ ಅಲ್ಲ ನಮ್ಮ ಸರಕಾರ ಸಾಕಷ್ಟು ಯೋಜನೆ ಮೂಲಕ ಅಭಿವೃದ್ದಿ ಕೆಲಸ ಮಾಡಿದೆ. ಆದರೆ ಲವ್ ಜಿಹಾದ್ ಹೆಸರಿನಲ್ಲಿ ದೇಶದ್ರೋಹದ ಕೆಲಸ ನಡೆಯುತ್ತಿದೆ., ಆ ಬಗ್ಗೆ ಗಮನ ಹರಿಸಿ ಎಂದು ಹೇಳಿದ್ದೇನಷ್ಟೆ ಎಂದು ಜಾರಿಕೊಂಡರು. ಕಾಂಗ್ರೆಸ್‌ನ ಡಿಕೆಶಿ, ಸಿದ್ರಾಮಣ್ಣ ಕುಕ್ಕರ್ ಬ್ಲಾಸ್ಟ್, ಲವ್ ಜಿಹಾದ್ ವಿಷಯದಲ್ಲಿ ಅವರ ನಿಲುವನ್ನು ಎಂದಾದರೂ ಸ್ವಸ್ಥಪಡಿಸಿದ್ದಾರೆಯೇ ಎಂದು ಮರು ಪ್ರಶ್ನೆ ಹಾಕಿದರು.
ಹುಣಸೂರು ಚರ್ಚೆಯಾಗಿಲ್ಲ
ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಹುಣಸೂರು ಕ್ಷೇತ್ರದಿಂದ ಯಾರು ಎನ್ನುವ ಪ್ರಶ್ನೆಗೆ. ರಾಜ್ಯದಲ್ಲಿ ಅಭ್ಯರ್ಥಿಗಳ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಗೆಲ್ಲುವ ಅಭ್ಯರ್ಥಿಗಳಿಗೆ ನಾವು ಟಿಕೆಟ್ ನೀಡುತ್ತೇವೆ. ನಮ್ಮ ಅಭಿವೃದ್ಧಿ ನೋಡಿ 150ಕ್ಕೂ ಹೆಚ್ಚು ಸ್ಥಾನಗಳನ್ನು ರಾಜ್ಯದ ಜನತೆ ನೀಡುತ್ತಾರೆಂದರು. ಈ ವೇಳೆ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.