ಕೋಟ್ಯಾಂತರ ಮೊತ್ತದ ಆಸ್ತಿ ಪತ್ರಗಳು ಪತ್ತೆ

Team Udayavani, May 17, 2017, 12:22 PM IST

mys2.jpg

ಮೈಸೂರು: ಚಾಮರಾಜ ನಗರ ಉಪ ವಿಭಾಗದ ಸೆಸ್ಕ್ ಕಚೇರಿ ಮೇಲ್ವಿಚಾರಕ ಎಂ.ಸಿದ್ದಲಿಂಗಯ್ಯರ ಮನೆ, ಕಚೇರಿ ಸೇರಿದಂತೆ ಏಕಕಾಲಕ್ಕೆ ಅವರಿಗೆ ಸೇರಿದ ಹಲವು ಆಸ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ.

ಚಾಮರಾಜ ನಗರದ ಜೆಎಸ್‌ಎಸ್‌ ಬಡಾವಣೆಯ ಒಂದನೇ ಅಡ್ಡರಸ್ತೆಯಲ್ಲಿರುವ ಇವರ ನಿವಾಸ, ಇವರ ತಾಯಿ ವಾಸಿಸುತ್ತಿರುವ ರಥದ ಬೀದಿಯ ಮನೆ, ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿರುವ ಮನೆ, ಅಲಗೂಡು ಗ್ರಾಮದಲ್ಲಿರುವ ತೋಟದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಚಾಮರಾಜ ನಗರ ಉಪ ವಿಭಾಗದ ಸೆಸ್ಕ್ ಕಚೇರಿಯ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ದೊರೆತಿರುವ ದಾಖಲೆಗಳ ಪ್ರಕಾರ ತಿ.ನರಸೀಪುರ ತಾಲೂಕು ಆಲಗೂಡು ಗ್ರಾಮದಲ್ಲಿ ಅಂದಾಜು 8 ಲಕ್ಷ ರೂ. ಮೌಲ್ಯದ 85-30 ಅಡಿ ವಿಸ್ತೀರ್ಣದ ಎರಡು ನಿವೇಶನಗಳು, ಅಲಗೂಡು ಗ್ರಾಮದಲ್ಲಿ ಅಂದಾಜು 2 ಲಕ್ಷ ರೂ. ಮೌಲ್ಯದ 30-50 ಚದರ ಅಡಿ ವಿಸ್ತೀರ್ಣದ ಒಂದು ನಿವೇಶನ, ತಿ.ನರಸೀಪುರ ತಾಲೂಕು ಭೈರಾಪುರ ಗ್ರಾಮದಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ 25-50 ಚದರ ಅಡಿ ವಿಸ್ತೀರ್ಣದ ನಿವೇಶನ ಜತೆಗೆ

ಅದೇ ಗ್ರಾಮದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ 1.5 ಎಕರೆ ಜಮೀನು, ಭೈರಾಪುರ ಹೊಸ ಬಡಾವಣೆಯಲ್ಲಿ ಅಂದಾಜು 75 ಲಕ್ಷ ರೂ. ಮೌಲ್ಯದ 3800 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗಿರುವ ಮನೆ ಹಾಗೂ ವಾಣಿಜ್ಯ ಮಳಿಗೆಗಳು, ತಿ.ನರಸೀಪುರ ತಾಲೂಕು ಮೂಗೂರು ಹೋಬಳಿ ಯರಗನ ಹಳ್ಳಿ ಗ್ರಾಮದಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ 1.3 ಎಕರೆ ಜಮೀನು,  ಅದೇ ಗ್ರಾಮದಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ 1.38 ಎಕರೆ ಜಮೀನು ಸಿದ್ದಲಿಂಗಯ್ಯ ಹೆಸರಿನಲ್ಲಿದೆ.

ಪತ್ನಿ ಹೆಸರಲ್ಲಿ ತಿ.ನರಸೀಪುರ ತಾಲೂಕು ಅಲಗೂಡು ಗ್ರಾಮದಲ್ಲಿ 25 ಲಕ್ಷ ರೂ. ಮೌಲ್ಯದ 3.3 ಎಕರೆ ಜಮೀನಿನಲ್ಲಿ ಒಂದು ಅಂತಸ್ತಿನ ಆರ್‌ಸಿಸಿ ಕಟ್ಟಡ , ಚಾಮರಾಜ ನಗರ ತಾಲೂಕು ಸಂತೆಮರಹಳ್ಳಿ ಹೋಬಳಿ ನವಿಲೂರು ಗ್ರಾಮದಲ್ಲಿ 4 ಲಕ್ಷ ರೂ. ಮೌಲ್ಯದ 2.13 ಎಕರೆ ಜಮೀನು ಹಾಗೂ ಸಿದ್ದಲಿಂಗಯ್ಯ ಹೆಸರಲ್ಲಿ 12 ಲಕ್ಷ ಮೌಲ್ಯದ 4.37 ಎಕರೆ ಜಮೀನು, ಪತ್ನಿ ಹೆಸರಲ್ಲಿ 3 ಲಕ್ಷ ರೂ. ಮೌಲ್ಯದ 2.17 ಎಕರೆ ಜಮೀನು,

14.9 ಲಕ್ಷ ರೂ. ಮೌಲ್ಯದ 522 ಗ್ರಾಂ ಚಿನ್ನ, 1.2 ಲಕ್ಷ ರೂ. ಮೌಲ್ಯದ 3.5 ಕೆಜಿ ಬೆಳ್ಳಿ, 16 ಲಕ್ಷ ರೂ. ಮೌಲ್ಯದ ಗೃಹಉಪಯೋಗಿ ವಸ್ತುಗಳು, ಒಂದು ಮಾರುತಿ ಸ್ವಿಫ್ಟ್ ಕಾರು, 1 ಹಿರೋ ಹೋಂಡಾ ಮತ್ತು ಒಂದು ಹೊಂಡಾ ಶೈನ್‌ ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಜತೆಗೆ ಸುಮಾರು 19.5 ಲಕ್ಷ ರೂ. ಮೊತ್ತದ ವಿವಿಧ ಕಂಪನಿಗಳ ವಿಮಾ ಪಾಲಿಸಿಗಳನ್ನು ಹೊಂದಿರುವುದು ದಾಖಲಾತಿ ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

PM Mod

Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

PM Mod

Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.