ರೋಗ ನಿರೋಧಕ ಶಕ್ತಿವೃದ್ಧಿಸಿಕೊಳ್ಳಿ : ಡಾ.ರಾಘವೇಂದ್ರ
Team Udayavani, Jul 20, 2020, 10:10 AM IST
ಮೈಸೂರು: ಕೋವಿಡ್-19ನಿಂದ ದೂರವಿರಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಸಲುವಾಗಿ ಆಯುಷ್ ಇಲಾಖೆಯಿಂದ ಸಂಸಮಣಿವಟಿ ಹಾಗೂ ಅರಾಕ್ ಅಜೀಬ್ ಔಷಧವನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ವಿತರಿಸಲಾಯಿತು.
ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗದವರಿಗೆ ಆಯುಷ್ ಇಲಾಖೆಯಿಂದ ಔಷಧ ವಿತರಿಸಿ ಮಾತನಾಡಿದ ಆಯುಷ್ ಇಲಾಖೆಯ ವೈದ್ಯಕೀಯ ಅಧಿಕಾರಿ ಡಾ.ರಾಘವೇಂದ್ರ ಆಚಾರ್ಯ, ಇದು ಅಮೃತಬಳ್ಳಿಯಿಂದ ಮಾಡಲ್ಪಟ್ಟ ಔಷಧಿಯಾಗಿದ್ದು, ಮಾನವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಒಂದು ಬಾಕ್ಸ್‌ನಲ್ಲಿ 40 ಸಂಸಮಣಿವಟಿ ಮಾತ್ರೆಗಳಿದ್ದು, 10 ದಿನಗಳು ಬೆಳಗ್ಗೆ ಎರಡು ಹಾಗೂ ರಾತ್ರಿ ಎರಡು ಮಾತ್ರೆಗಳನ್ನು ಊಟಕ್ಕೂ ಮುಂಚೆ ಸೇವಿಸುವಂತೆ ಹಾಗೂ ಅರಾಕ್ ಅಜೀಬ್ ಯುನಾನಿ ಮೆಡಿಸನ್ ಅನ್ನು ಮಾಸ್ಕ್ ಕೈಚೌಕಗಳಿಗೆ ಸಿಂಪಡಿಸಿಕೊಂಡು ವಾಸನೆ ತೆಗೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆರೋಗ್ಯಾಧಿಕಾರಿ ಡಾ.ಸುರೇಶ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮಂಜುನಾಥ್, ಗ್ರಂಥಾಲಯದ ಉಪನಿರ್ದೇಶಕ ಹಾಗೂ ಕೋವಿಡ್-19 ವಿಮಾನ ನಿಲ್ದಾಣದ ನೋಡಲ್ ಅಧಿಕಾರಿ ಬಿ.ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿಗಳಾದ ಪ್ರಕಾಶ್, ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ವೇಣುಗೋಪಾಲ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.