ಅರಸು ಮನೆ, ಗ್ರಾಮ ಅಭಿವೃದ್ಧಿ ಮಾಡಿ
Team Udayavani, Aug 20, 2017, 11:50 AM IST
ಪಿರಿಯಾಪಟ್ಟಣ: ಡಿ.ದೇವರಾಜು ಅರಸ್‌ರವರ ಹುಟ್ಟೂರಾದ ಬೆಟ್ಟದತುಂಗ ಗ್ರಾಮದಲ್ಲಿ ಮೂಲಸೌಕರ್ಯಗಳ ಕಡೆ ಒತ್ತು ನೀಡದೆ ಕೇವಲ ಶಾಲೆ ಮತ್ತು ಪಂಚಾಯಿತಿ ಕಾಂಪೌಂಡ್ ನಿರ್ಮಿಸಿರುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ.
ಡಿ.ದೇವರಾಜು ಅರಸ್‌ರವರ 100ನೇ ಹುಟ್ಟುಹಬ್ಬದಂದು ವರ್ಷದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಬೆಟ್ಟದತುಂಗ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಬಂದು ಈ ಗ್ರಾಮದಲ್ಲಿರುವ ಅವರು ಹುಟ್ಟಿದ ಮನೆಯನ್ನು ಮತ್ತು ಗ್ರಾಮವನ್ನು ದತ್ತು ಪಡೆದು 20 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿ ಹೋಗಿದ್ದರು.
ಆದರೆ ಡಿ.ದೇವರಾಜ ಅರಸುರವರ ಅಭಿವೃದ್ಧಿ ನಿಗಮದಿಂದ ಕೆಲಸ ಪ್ರಾರಂಭಿಸಿರುವ ಅಧಿಕಾರಿಗಳು ಯಾವುದೇ ಗ್ರಾಮದಲ್ಲಿರುವ ಸಮುದಾಯ ಭವನ ಅರಸುರವರ ಹುಟ್ಟಿದ ಮನೆಯನ್ನು ಸ್ಮಾರಕ ಮಾಡುವುದಾಗಲಿ ಗ್ರಾಮದಲ್ಲಿ ಒಳಚರಂಡಿಗಳನ್ನು ನಿರ್ಮಿಸುವುದಾಗಲಿ ಸ್ವತ್ಛತೆಯನ್ನು ಕಾಪಾಡುವುದಾಗಲಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗವಿಯಲ್ಲಿ ಪೂಜೆ: ದೇವರಾಜ ಅರಸು ಅವರು ಹುಟ್ಟಿದ್ದ ಹುಲ್ಲಹಟ್ಟಿ ಎಂದು ಖ್ಯಾತಿ ಪಡೆದಿದ್ದ ಅವರ ಮನೆಯನ್ನು ವಂಶಸ್ಥರು ನವೀಕರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮವು ಬೆಟ್ಟದಪುರದ ಬೆಟ್ಟಕ್ಕೆ ಹೊಂದಿಕೊಂಡಂತೆ ಇದ್ದ ಕಾರಣ ಡಿ.ದೇವರಾಜ ಅರಸ್‌ರವರು ಅವರ ತಾಯಿ ಗೌರಮ್ಮಣ್ಣಿ, ತಂದೆ ದೇವರಾಜೇ ಅರಸ್ ಜೊತೆ ಬೆಟ್ಟದಪುರದ ಬೆಟ್ಟದ ಮೂಡಲುಗವಿಯಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದರು.
ಬಂಡೆಯ ಮೇಲೆ ಸ್ವಂತ ಡಿ. ದೇವರಾಜ ಅರಸ್ ಅವರೇ ತಮ್ಮ ತಂದೆ-ತಾಯಿ ಹಾಗೂ ತಮ್ಮ ಹೆಸರನ್ನು ಕಲ್ಲಿನಿಂದ ಕೆತ್ತಿರುವ ಅಕ್ಷರಗಳು ಇಂದಿಗೂ ಅ ಗವಿಯಲ್ಲಿ ಕಾಣುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ದಿ.ದೇವರಾಜ ಅರಸ್‌ರವರು ಬಾಲ್ಯದಲ್ಲಿಯೇ ನೂರಾರು ಕಿಲೋಮೀಟರ್ ಗಳನ್ನ ಬರಿಗಾಲಲ್ಲಿ ನಡೆಯುತ್ತಿದ್ದರು. ಇವರು ತಮ್ಮ ತಾಯಿಯ ತವರೂರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸಂತೆಮರೂರು.
ಬೆಟ್ಟದತುಂಗ ಮತ್ತು ಸಂತೆಮರೂರು ಗ್ರಾಮಕ್ಕೆ ಹಲವಾರು ಬಾರಿ ನಡೆದುಕೊಂಡು ಹೋಗುವಾಗ ಕಲ್ಲು, ಮುಳ್ಳು ತಾಗಿ ಗಾಯಗೊಳ್ಳುತ್ತಿದ್ದರು. ಇದರಿಂದ ವಿಚಲಿತರಾದ ದೇವರಾಜ ಅರಸರು, ತಮ್ಮ ಅಧಿಕಾರದ ಅವಧಿಯಲ್ಲಿ ಪ್ರತಿ ಹಳ್ಳಿಗೂ ರಸ್ತೆ ಮತ್ತು ಕೆರೆಗಳಲ್ಲಿ ಕುಡಿಯುವ ನೀರನ್ನು ಶೇಖರಿಸುವ ಬೃಹತ್ ಆಂದೋಲನವನ್ನು ಕೈಗೊಂಡರು.
ದೇವರಾಜ ಅರಸು ಅವರ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಿರುವ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ ತುಂಬಿಸುವ ಯೋಜನೆ ಕೈಗೊಂಡಿದ್ದಾರೆ. ಆದಷ್ಟು ಬೇಕ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಿ ಡಿ.ದೇವರಾಜ ಅರಸ್ ಅವರ ಹುಟ್ಟಿದ ಮನೆ ಮತ್ತು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.