ಹೈನುಗಾರಿಕೆಯಿಂದ ಅಭಿವೃದ್ಧಿ ಹೊಂದಿ
Team Udayavani, Oct 24, 2018, 11:32 AM IST
ಹುಣಸೂರು: ಕೃಷಿ ಪ್ರಧಾನವಾಗಿರುವ ದೇಶದಲ್ಲಿಂದು ಬೆಳೆದ ಬೆಳೆಗೆ ಬೆಲೆ ಸಿಗದೆ ಹೈರಾಣಾಗಿರುವ ರೈತರು ಹಸು ಸಾಕಣೆಯನ್ನು ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ, ಪರಿಸರಕ್ಕೂ ಕೊಡುಗೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೂಚಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಬೈಪ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಐಟಿಸಿ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ಮಿಶ್ರ ತಳಿ, ನಾಟಿಹಸು- ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ರೈತರು ಕೃಷಿಯೊಂದನ್ನೇ ಅವಲಂಬಿಸದೇ ಪ್ರತಿ ಕುಟುಂಬವೂ ಎರಡು ಹಸುಗಳನ್ನು ಸಾಕಾಣಿಕೆ ಮಾಡುವುದರೊಂದಿಗೆ ಹಾಲು ಉತ್ಪಾದನೆ ಜೊತೆಗೆ ಕೊಟ್ಟಿಗೆ ಗೊಬ್ಬರ ಶೇಖರಣೆಯಾಗುವುದರಿಂದ ತಮ್ಮ ಜಮೀನುಗಳಲ್ಲಿ ರಾಸಾಯನಿಕ ಮುಕ್ತ ಜಮೀನುಗಳಾಗಿ ಮಾರ್ಪಟು ಮಾಡುವುದರೊಟ್ಟಿಗೆ ಅಧಿಕ ಇಳುವರಿ ಬೆಳೆ ಪಡೆಯಬಹುದು ಎಂದರು.
ಹಾಲು ಉತ್ಪಾದನೆಯಲ್ಲಿ ಮೇಲುಗೈ: ಜಿಲ್ಲೆಗೆ ಹುಣಸೂರು ತಾಲೂಕು ಮೈಮುಲ್‌ಗೆ ಹಾಲು ಪೂರೈಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ತಾಲೂಕಿನಿಂದ ಪ್ರತಿ ನಿತ್ಯ 90 ಸಾವಿರ ಲೀ. ಹಾಲು ಸರಬರಾಜಾಗುತ್ತಿದ್ದು, ನಿತ್ಯ 20.70 ಲಕ್ಷ ರೂ. ಬಟವಾಡೆಯಾಗುತ್ತಿದೆ. ಮಹಿಳಾ ಸಂಘಗಳ ರಚನೆಯಲ್ಲೂ ಮುಂದಿದೆ ಎಂದು ಅಭಿನಂದಿಸಿದ ಅವರು, ಗುಣಮಟ್ಟದ ಹಾಲನ್ನೇ ಪೂರೈಸಿ ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಹಾಲು ಉತ್ಪಾದನೆಗೆ ಅನೂಕೂಲವಾಗುವಂತೆ ಪಶುಸಂಗೋಪನೆ ಸಚಿವ ನಾಡಗೌಡ, ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಮತ್ತು ಕೆಎಂಎಫ್‌ನ ರಾಜ್ಯ ಮಟ್ಟದ ಅಧಿಕಾರಿಗಳನ್ನು ಹುಣಸೂರಿಗೆ ಕರೆ ತಂದು ಕಾರ್ಯಾಗಾರ ಹಾಗೂ ತರಬೇತಿ ಕೊಡಿಸುವುದಾಗಿ ಭರವಸೆ ನೀಡಿದರು.
ಆತ್ಮಹತ್ಯೆಗೆ ಶರಣಾಗಬೇಡಿ: ರೈತರು ಐಷಾರಾಮಿ ಜೀವನ ನಡೆಸದೆ ಅದ್ದೂರಿ ಮದುವೆ ಮಾಡದೆ ಸರಳ ಮದುವೆ ಮಾಡಿ, ಸಾಲದ ಸುಳಿಗೆ ಸಿಲುಕಬೇಡಿ. ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳದೆ ಸರಳ ಜೀವನ ನಡೆಸಿ. ಎಷ್ಟೇ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ನೆರವಿಗೆ ಕುಮಾರ ಸ್ವಾಮಿ ಸರಕಾರ ನಿಲ್ಲಲಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್‌ಸಿಂಹ, ಐಟಿಸಿ ಕಂಪನಿ ಲೀಫ್ ಮ್ಯಾನೇಜರ್ ರವೀಶ್, ಬೈಫ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಶಿವರುದ್ರಪ್ಪ, ಜಿಪಂ ಸದಸ್ಯ ಅಮೀತ್‌ದೇವರಹಟ್ಟಿ, ಮಾಜಿ ಸದಸ್ಯ ರಮೇಶ್‌ಕುಮಾರ್, ಮೈಸೂರು ಡೇರಿ ನಿರ್ದೇಶಕ ಕೆ.ಎಸ್.ಕುಮಾರ್, ಎಪಿಎಂಸಿ ಅಧ್ಯಕ್ಷ ನಾಗಮಂಗಲ ಕುಮಾರ್, ಮಾಜಿ ಅಧ್ಯಕ್ಷ ರವಿಗೌಡ, ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜ್, ತಾಪಂ ಸದಸ್ಯೆ ಮಂಜುಳಾ,
ಹೆಗ್ಗಂದೂರು ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಹನಗೋಡು ಮಂಜುನಾಥ್, ಎಚ್.ಆರ್.ರಮೇಶ್, ರವಿಗೌಡ, ಸುಭಾಷ್, ದಾ.ರಾ.ಮಹೇಶ್, ಮರಿಯಮ್ಮ, ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಷಡಕ್ಷರಿಸ್ವಾಮಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಮಹಿಳಾ ಸಂಘದವರು, ಬೈಪ್ ಹಾಗೂ ಐಟಿಸಿ ಕಂಪನಿಯ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.