ಚುಂಚನಕಟ್ಟೆ ಅಭಿವೃದ್ಧಿ, ಭಕ್ತರಿಗೆ ಸವಲತ್ತು
Team Udayavani, Oct 18, 2020, 4:53 PM IST
ಕೆ.ಆರ್.ನಗರ: ಚುಂಚನಕಟ್ಟೆ ಹೋಬಳಿ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ 8.25 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಹಲವು ಕಾಮಗಾರಿಗಳು ಅಂತಿಮ ಹಂತದಲ್ಲಿವೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನಚುಂಚನಕಟ್ಟೆಕೋದಂಡರಾಮ ದೇವಾಲಯದ ಸುತ್ತಮುತ್ತ ಮತ್ತು ಬಸವನ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನುಅಧಿಕಾರಿಗಳು ಮತ್ತು ಮುಖಂಡರೊಂದಿಗೆಪರಿಶೀಲಿಸಿದ ನಂತರ ಮಾತನಾಡಿದ ಅವರು, ವರ್ಷಾಂತ್ಯದ ವೇಳೆಗೆ ಈ ಎಲ್ಲಾ ಕೆಲಸಗಳುಪೂರ್ಣಗೊಳ್ಳಲಿವೆ ಎಂದರು. ದೇಗುಲ, ಕೆರೆ ಅಭಿವೃದ್ಧಿ: ಜತೆಗೆ ಸಾಲಿಗ್ರಾಮದ ಯೋಗಾನರಸಿಂಹಸ್ವಾಮಿ ದೇವಾಲಯ ಹಾಗೂ ಕೆರೆಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ತಲಾ 2 ಕೋಟಿ ರೂ. ಅನುದಾನನೀಡಲಾಗಿದೆ. ಅತ್ಯಂತ ಪುರಾಣ ಪ್ರಸಿದ್ಧ ಸ್ಥಳವಾಗಿರುವ ಚುಂಚನಕಟ್ಟೆಯಲ್ಲಿ ಇತಿಹಾಸ
ಪ್ರಸಿದ್ಧ ಶ್ರೀರಾಮ ದೇವಾಲಯವಿದ್ದು ಇಲ್ಲಿ ಜೀವನದಿ ಕಾವೇರಿ ಹರಿಯುತ್ತಿರುವುದರಿಂದನಿತ್ಯ ಸಾವಿರಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅವರಿಗೆ ಮೂಲ ಸವಲತ್ತುಗಳನ್ನು ಕಲ್ಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದು, ಅದರಂತೆ ಕೆಲಸ ಮಾಡುತ್ತಿದ್ದೇನೆ. ಕಳೆದ 13 ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ಜನರ ನಿರೀಕ್ಷೆಯಂತೆಅವರ ಸೇವೆಯಲ್ಲಿ ತೊಡಗಿರುವ ತೃಪ್ತಿ ನನಗೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಮಗಾರಿ ಬಗ್ಗೆ ಮೆಚ್ಚುಗೆ: ಚುಂಚನಕಟ್ಟೆಯಲ್ಲಿ ನಡೆಯುತ್ತಿರುವಅಭಿವೃದ್ಧಿಕಾಮಗಾರಿಗಳು ಅತ್ಯಂತ ಉತ್ತಮವಾಗಿದ್ದು, ಇದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮನ್ವಯತೆಕಾರಣವಾಗಿದೆ. ಈ ರೀತಿ ಸಹಕಾರ ನೀಡಿದರೆನನಗೆ ಸರ್ಕಾರದಿಂದ ಮತ್ತಷ್ಟು ಅನುದಾನತರಲು ಹುರುಪು ಬರುತ್ತದೆಂದು ಶಾಸಕರು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷಕೃಷ್ಣೇಗೌಡ,ಜೆಡಿಎಸ್‌ಮುಖಂಡರಾದಎಚ್.ಕೆ.ಮಧುಚಂದ್ರ, ಎಚ್.ಕೆ.ಶ್ರೀಧರ್, ಗುತ್ತಿಗೆದಾರರಾದ ಎಚ್.ಪಿ.ಶಿವಪ್ಪ, ಎಚ್. ಎಸ್.ಜಗದೀಶ್, ಸಿ.ಪಿ.ಸಂಜಯ್, ಸಿಪಿಐ ಪಿ.ಕೆ.ರಾಜು, ಗ್ರಾಪಂ ಮಾಜಿ ಸದಸ್ಯ ಡಿ.ಸಿ.ಕುಮಾರ್, ಲೋಕೋಪಯೋಗಿ ಸಹಾಯಕಕಾರ್ಯಪಾಲಕ ಅಭಿಯಂತರ ಬಿ.ಎಲ್.ಅರುಣ್‌ಕುಮಾರ್, ಸಹಾಯಕ ಅಭಿ ಯಂತರರಾದ ಎಂ.ಎಸ್.ಮೋಹನ್, ಶಿವಪ್ಪ, ನರಸಿಂಹೇಗೌಡ, ಜಿ.ಸಿದ್ದೇಶ್‌ಪ್ರಸಾದ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.