Congress Govt ;ಡಿಸೆಂಬರ್ ನಂತರ ಅಭಿವೃದ್ದಿಗೆ ವೇಗ ಸಿಗಲಿದೆ: ಸಚಿವ ಬೋಸ್ ರಾಜ್
ಚಿಲ್ಕುಂದ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ
Team Udayavani, Aug 13, 2023, 11:06 PM IST
ಹುಣಸೂರು: ಹುಣಸೂರು ತಾಲೂಕು ಚಿಲ್ಕುಂದ ಹಾಗೂ ಕೆ.ಆರ್.ನಗರದ ಎರಡು ಏತ ನೀರಾವರಿ ಯೋಜನೆಯ ಉಳಿಕೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸೆಪ್ಟಂಬರ್ ಅಂತ್ಯದೊಳಗೆ ಸಮರ್ಪಿಸಲಾಗುವುದೆಂದು ಸಣ್ಣನೀರಾವರಿ ಸಚಿವ ಬೋಸ್‌ರಾಜ್ ತಿಳಿಸಿದರು.
ಹುಣಸೂರು ತಾಲೂಕಿನ ನಿಲುವಾಗಿಲು ಬಳಿಯ ಚಿಲ್ಕುಂದ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿದ ನಂತರ ಉದಯವಾಣಿಯೊಂದಿಗೆ ಮಾತನಾಡಿದ ಸಚಿವರು 14 ಕೆರೆಗಳಿಗೆ ನೀರು ತುಂಬಿಸುವ ಚಿಲ್ಕುಂದ ಯೋಜನೆಯ ಬಹುತೇಕ ಕಾಮಗಾರಿ ಮುಗಿದಿದ್ದು, ಕೆಲ ಕೆರೆಗಳಿಗೆ ನಾಲೆ ಮೂಲಕ ನೀರು ತುಂಬಿಸುವುದರಿಂದ ನೀರು ಪೋಲಾಗುವುದನ್ನು ತಪ್ಪಿಸಲು ಹಾಗೂ ಹೆಚ್ಚುವರಿಯಾಗಿ ಮತ್ತೆ ಆರು ಕೆರೆಗಳಿಗೆ ನೀರು ತುಂಬಿಸಿದಲ್ಲಿ ಅನುಕೂಲವಾಗಲಿದೆ ರೈತರು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಿಯಾಯೋಜನೆ ಸಲ್ಲಿಸಲು ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆಂದರು.
ಕೆ.ಆರ್.ನಗರದ ಎರಡು ಯೋಜನೆ
ಇನ್ನು ಕೆ.ಆರ್.ನಗರ ತಾಲೂಕಿನ 60 ಕೋಟಿ ವೆಚ್ಚದ ಜಪದಕಟ್ಟೆ, ಚುಂಚನಕಟ್ಟೆಯ ಏತನೀರಾವರಿ ಯೋಜನೆಗೆ ಕೆಲವೆಡೆ ಪೈಪ್ ಅಳವಡಿಸಲು ಇರುವ ಸಮಸ್ಯೆ ಪರಿಹರಿಸಲು ಸೂಚಿಸಿದ್ದು, ಈ ಎರಡೂ ಯೋಜನೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಿ ಬರುವ ಸಮಸ್ಯೆಗಳನ್ನು ಪರಿಹರಿಸಿ ಏಕಕಾಲದಲ್ಲಿ ಹುಣಸೂರು, ಕೆ.ಆರ್.ನಗರದಲ್ಲೂ ಉದ್ಘಾಟಿಸಲಾಗುವುದೆಂದರು.
ಗ್ಯಾರಂಟಿಯಿಂದ ಅಡಚಣೆಯಾಗಲ್ಲ
ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಿಂದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂಬ ಆರೋಪವಿದೆಯಲ್ಲಾ ಎಂಬ ಪ್ರಶ್ನೆಗೆ ವಿರೋಧಿಗಳ ಹೇಳಿಕೆಗೆ ನಾವು ವಿರೋಧಿಸುವುದಿಲ್ಲಾ. ಆದರೆ ಅನುದಾನದ ಕೊರತೆ ಇಲ್ಲ. ಸರಕಾರ ಬಂದು ಎರಡೂವರೆ ತಿಂಗಳಾಗಿದೆ. ಮುಖ್ಯಮಂತ್ರಿಗಳು ಈಗಾಗಲೆ ಎಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಒಂದು ಹಂತದ ಸಭೆ ನಡೆಸಿದ್ದು. ಹಂತಹಂತವಾಗಿ ಎಲ್ಲವನ್ನೂ ಕಾರ್ಯಗತ ಮಾಡಿಯೇ ತೀರುತ್ತೇವೆ. ಅನುಮಾನ ಬೇಡವೆಂದು ಈ ಸರಕಾರದಲ್ಲಿ ಆಗೊಲ್ಲ, ಅನುದಾನ ಬಿಡುಗಡೆ ಮಾಡಲ್ಲವೆಂಬ ಊಹಾಪೋಹಗಳಿಗೆ ತೆರೆಎಳೆದರು.
30 ಸಾವಿರ ಕೋಟಿ ಬೇಕಿದೆ
ಕಳೆದ ಸರಕಾರದ ಅವಧಿಯಲ್ಲಿ ಸುಮಾರು ೧೩ಸಾವಿರ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, 600-700 ಕೋಟಿ ಟೆಂಡರ್ ಹಂತದಲ್ಲಿದೆ. ಶಾಸಕರು, ಮಂತ್ರಿಗಳು 750 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ, ಒಟ್ಟಾರೆ ೩೦ಸಾವಿರ ಕೋಟಿ ಅವಶ್ಯವಿದ್ದು, ಸದ್ಯಕ್ಕೆ ಕಷ್ಟ ಸಾದ್ಯವಾಗಿದೆ. ಮೊದಲು ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಮುಗಿಸಲಾಗುವುದು. ಮುಖ್ಯಮಂತ್ರಿಗಳು ಡಿಸೆಂಬರ್ ನಂತರ ಹೊಸ ಯೋಜನೆಗಳಿಗೆ ಅನುದಾನ ನೀಡುವುದಾಗಿ ತಿಳಿಸಿದ್ದು, ನಂತರ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದರು.
ಸಚಿವರೊಂದಿಗೆ ಚೀಪ್ ಇಂಜಿನಿಯರ್ ಕೆ.ರಾಘವನ್, ಸೂಪರಿಂಡೆಂಟ್ ಇಂಜಿನಿಯರ್ ವಿನಾಯಕ್, ಇಇ ನಾಗರಾಜ್, ಎಇಇ ಈಶ್ವರ್ ಇದ್ದರು.
ಸಚಿವರಿಗೆ ಸನ್ಮಾನ
ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ರ ಹುಣಸೂರಿನ ನಿವಾಸಕ್ಕೆ ಸಚಿವ ಬೋಸ್‌ರಾಜ್‌ರು ಭೇಟಿ ಇತ್ತ ವೇಳೆ ಮಂಜುನಾಥರ ತಂದೆ ಸಚಿವರ ಆಪ್ತರಾದ ಎಚ್.ಎನ್.ಪ್ರೇಮಕುಮಾರ್‌ರವರು ಸಚಿವರನ್ನು ಸನ್ಮಾನಿಸಿದರು. ಕಾಂಗ್ರೆಸ್ ನಗರ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷ ಪುಟ್ಟರಾಜು, ವೆನ್ನಿಥಾಮಸ್ ಸೇರಿದಂತೆ ಅನೇಕ ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.