ಬಿ.ಆರ್.ಕಾವಲಿನಲ್ಲಿ ದೊಡ್ಡಮ್ಮ-ಚಿಕ್ಕಮ್ಮ ದೇವಿ ರಥೋತ್ಸವ
Team Udayavani, Apr 29, 2022, 8:08 PM IST
ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಬಿ.ಆರ್ ಕಾವಲು ಗ್ರಾಮದಲ್ಲಿ ಗ್ರಾಮ ದೇವತೆ ದೊಡ್ಡಮ್ಮ-ಚಿಕ್ಕಮ್ಮ ದೇವಿಯ ರಥೋತ್ಸವವು ಶುಕ್ರವಾರ ಭಕ್ತರ ಜಯ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನಡೆಯಿತು.
ಬಿ.ಆರ್.ಕಾವಲ್ ಗ್ರಾಮದ ದೇವಾಲಯದ ಪ್ರಾಂಗಣದಲ್ಲಿ ಗುರುವಾರ ಸಂಜೆ ಕಳಸ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗಿ ಶುಕ್ರವಾರ ಮುಂಜಾನೆಯಿಂದಲೇ ಪೂಜಾ ವಿಧಿ-ವಿಧಾನ ನಡೆಸಿ ಬೆಳಿಗ್ಗೆ ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ಭಕ್ತರು ಭಕ್ತಿ-ಭಾವದಿಂದ ತೇರನ್ನೆಳೆದರು. ರಥೋತ್ಸವದ ವೇಳೆ ಭಕ್ತರು, ನವ ದಂಪತಿಗಳು ಹರಕೆ ಹೊತ್ತ ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಪುನೀತರಾದರು.
ರಥೋತ್ಸವಕ್ಕೂ ಮುನ್ನ ದೇವಾಲಯಕ್ಕೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಹನಗೋಡು ತಾ.ಪಂ.ಮಾಜಿ ಸದಸ್ಯೆ ರೂಪನಂದೀಶ್, ಗ್ರಾಮದ ಯಜಮಾನರಾದ ಸೋಮೇಗೌಡ, ನಾಗೇಗೌಡ, ಶ್ರೀನಿವಾಸ್ ಗೌಡ, ಕೃ ಷ್ಣಾ ಗೌಡ, ಚಲುವಮ್ಮ ವೆಂಕಟೇಶ್, ಮಂಡಿಮಾದೇಗೌಡ, ಪೂಜಾರಿನಾಗರಾಜ್, ಶೀಲಾರಾಜು, ನಂದೀಶ, ಗಣೇಶ, ಮಂಜೇಶ ಸೇರಿದಂತೆ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.