ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ
Team Udayavani, May 25, 2022, 1:30 AM IST
ಮೈಸೂರು: ಭಕ್ತಿ ಎನ್ನುವುದು ಮಾರುಕಟ್ಟೆ ಅಥವಾ ಮಾಲ್‌ನಲ್ಲಿ ಹಣ ಕೊಟ್ಟು ಖರೀದಿಸುವ ಸರಕಲ್ಲ. ಅದು ನಮ್ಮೊಳಗಿಂದ ಹುಟ್ಟಿಬರಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವಧೂತ ದತ್ತಪೀಠದ ಶೀಗಣಪತಿ ಸಚ್ಚಿದಾನಂದ ಸ್ವಾಮೀಜಿ 80ನೇ ವರ್ಧಂತ್ಯುತ್ಸವದಲ್ಲಿ ಮಂಗಳವಾರ ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರವಚನ ನೀಡಿದ ಶ್ರೀಗಳು, ದೇವರ ಅನುಗ್ರಹಕ್ಕೆ ಬೇಕಿರುವುದು ಭಕ್ತಿ ಹೊರತು ಸಿರಿಸಂಪತ್ತಲ್ಲ ಎಂದರು.
ಗಣಪತಿ ಶ್ರೀಗಳು ತಮ್ಮ ಸಂಗೀತದ ಗಾನದಿಂದ ಅನೇಕ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವುಳ್ಳವರು. ನಾದ-ಕೀರ್ತನೆಗಳಿಗೆ ಭಕ್ತಿಯ ಶಕ್ತಿಯೂ ಸೇರಿ ಉತ್ಕೃಷ್ಟತೆ ಪಡೆದುಕೊಂಡಿದೆ. 80ರ ವರ್ಧಂತಿ ಆಚರಿಸಿಕೊಳ್ಳುತ್ತಿರುವ ಶ್ರೀಗಳಿಗೆ ಭಗವಂತ ಪರಿಪೂರ್ಣ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಸ್ವಾಮೀಜಿ ಹಾರೈಸಿದರು.
ಹಲವು ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.