![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 7, 2022, 6:33 PM IST
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ದಕ್ಷಿಣಗಂಗೆ ಕಾವೇರಿ ಕೊಡಗು ಜಿಲ್ಲೆ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶ ದಲ್ಲಿ ಮಳೆಯಾಗುತ್ತಿರುವುದರಿಂದ ಮೈದುಂಬಿ ಕೊಂಡು ಚೇತೋಹಾರಿಯಾಗಿ ಕಂಗೊಳಿಸುತ್ತಿದ್ದು, ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಕೆ.ಆರ್.ನಗರ ಪಟ್ಟಣದಿಂದ 16 ಕಿ.ಮೀ. ದೂರದಲ್ಲಿರುವ ಚುಂಚನಕಟ್ಟೆ ಸುಂದರ ಪರಿಸರದೊಂದಿಗೆ ಪ್ರಕೃತಿಯ ಆರಾಧಕರ ಮೆಚ್ಚಿನ ತಾಣವಾಗಿದೆ. ಅಲ್ಲದೇ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಕೋದಂಡರಾಮ ದೇವಾಲಯವನ್ನೂ ಹೊಂದಿದೆ. ಕಾವೇರಿ ಇಲ್ಲಿ 27 ಮೀಟರ್ ಎತ್ತರದಿಂದ ಭೋರ್ಗರೆತದೊಂದಿಗೆ ಧುಮುಕುತ್ತಾ ಸೀತೆಯ ಮಡುವಿನಲ್ಲಿ ನಯನ ಮನೋಹರವಾದ ಜಲಪಾತ ನಿರ್ಮಿಸಿದ್ದು, ಧನುಷ್ಕೋಟಿಯಲ್ಲಿ ತನ್ನ ವೈಭವ ಮೆರೆಯುತ್ತಿದೆ. ಸುಮಾರು 400 ಮೀಟರ್ ವಿಸ್ತೀರ್ಣದಲ್ಲಿ ಶ್ವೇತ ವೈಭವದೊಂದಿಗೆ ರುದ್ರರಮಣೀಯವಾಗಿ ಕಂಗೊಳಿಸುವ ಕಾವೇರಿ ಧುಮ್ಮಿಕ್ಕುವ ಪರಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಕಾವೇರಿಯ ಭೋರ್ಗರೆತ: ಕಾವೇರಿಯ ಬಲಭಾಗದ ದಂಡೆಯ ಮೇಲೆ ವಿಜಯನಗರ ಶೈಲಿಯಲ್ಲಿ ಕಟ್ಟಿರುವ ಶ್ರೀಕೋದಂಡರಾಮನ ದೇವಾಲಯದ ವಿನ್ಯಾಸದಲ್ಲಿ ತೋರಿರುವ ಕೌಶಲ್ಯತೆ ಅಚ್ಚರಿ ಮೂಡಿಸುತ್ತದೆ. ಕಾವೇರಿಯ ಭೋರ್ಗರೆತ 8 ರಿಂದ 9 ಕಿ.ಮೀ ದೂರದವರೆಗೆ ಕೇಳಿಸಿದರೆ, ಅನತಿ ದೂರದಲ್ಲಿರುವ ದೇವಾಲಯದ ಆವರಣ ದಲ್ಲಿ ಕೇಳಿಸದೆ ಇರುವುದು ಇಲ್ಲಿನ ವಿಸ್ಮಯವಾಗಿದೆ. ಧನುಷ್ಕೋಟಿಯಲ್ಲಿ ಧುಮುಕುತ್ತಿರುವ ಕಾವೇರಿಯ ವೈಭವದ ರಮಣೀಯ ದೃಶ್ಯ
ನೋಡಲು ಹೊರ ರಾಜ್ಯಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಚುಂಚನಕಟ್ಟೆಯನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು 20 ಕೋಟಿ ಅನುದಾನ ತಂದು ವಿಭಿನ್ನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೋದಂಡರಾಮನ ದೇವಾಲಯದ ಜೀರ್ಣೋದ್ಧಾರದ ಜತೆಗೆ ಅದರ ಮುಂಭಾಗದಲ್ಲಿ 30 ಅಡಿ ಎತ್ತರದ ವೀರಾಂಜನೇಯಸ್ವಾಮಿಯ
ಏಕಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ರುದ್ರ ರಮಣೀಯ ದೃಶ್ಯ: ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ರಜಾ ದಿನಗಳಲ್ಲಿ ಕುಟುಂಬ ಸಮೇತ ಬಂದು ಭೋರ್ಗರೆದು ಧುಮುಕುತ್ತಿರುವ ಕಾವೇರಿ ನದಿ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಪಾಯ ಕಟ್ಟಿಟ್ಟ ಬುತ್ತಿ
ಮುಂಗಾರು ಮಳೆಯಿಂದ ಮೈತುಂಬಿಕೊಂಡ ಕಾವೇರಿಯನ್ನು ಹತ್ತಿರದಿಂದ ನೋಡಿ ಆಸ್ವಾದಿಸಲು ಕಲ್ಲು ಬಂಡೆಗಳನ್ನು ಏರುವ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರವಾಸಿ ಗರು ತಮ್ಮ ತಮ್ಮ ಮೊಬೈಲ್ ಫೋನುಗಳಲ್ಲಿ ಸೌಂದರ್ಯ ಸೆರೆ ಹಿಡಿಯಲು ಯತ್ನಿಸುವುದು
ಸರ್ವೆ ಸಾಮಾನ್ಯವಾಗಿದೆ. ಆದರೆ ಸೂಕ್ತ ರಕ್ಷಣೆ ಕಲ್ಪಿಸದಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.
● ಗೇರದಡನಾಗಣ್ಣ
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.