ತಿಂಗಳೊಳಗೆ ವ್ಯಾಪಾರಸ್ಥರಿಗೆ ಮಳಿಗೆಗಳ ಹಂಚಿಕೆ
Team Udayavani, May 13, 2017, 12:16 PM IST
ತಿ.ನರಸೀಪುರ: ಪಟ್ಟಣದ ಮಸೀದಿ ಎದುರಿಗೆ ನೂತನವಾಗಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯನ್ನು ಶೀಘ್ರವಾಗಿ ಹರಾಜು ಪ್ರಕ್ರಿಯೆ ನಡೆಸಿ ರಸ್ತೆ ಬದಿ ವ್ಯಾಪಾರಿಗಳಿಗೆ ಮಳಿಗೆ ಹಂಚಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿರುವ ಮಾರುಕಟ್ಟೆಯನ್ನು ಹಲವು ತಿಂಗಳು ಕಳೆದರೂ ಹರಾಜು ಪ್ರಕ್ರಿಯೆ ನಡೆಸದ ಪರಿಣಾಮ ತರಕಾರಿ ವ್ಯಾಪಾರಸ್ಥರಿಗೆ ಮೂಲ ಸೌಲಭ್ಯದ ಕೊರೆತೆಯಾಗಿದೆ. ಹಾಗಾಗಿ ಅಧಿಕಾರಿಗಳು ತ್ವರಿತವಾಗಿ ಹರಾಜು ಪ್ರಕ್ರಿಯೆ ನಡೆಸಿ ವ್ಯಾಪಾರಸ್ಥರಿಗೆ ಅನೂಕೂಲ ಮಾಡಿಕೊಡುವಂತೆ ಸದಸ್ಯರು ಸಭೆಯಲ್ಲಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್ಒ ರಾಣಿ ಈಗಾಗಲೇ ಹರಾಜು ಪ್ರಕ್ರಿಯೆ ಕ್ರಮವಹಿಸಲಾಗಿದ್ದು, ತಿಂಗಳೊಳಗೆ ಹರಾಜು ನಡೆಸಿ ವ್ಯಾಪಾರಸ್ಥರಿಗೆ ಮಳಿಗೆ ಹಂಚಲಾಗುವುದು ಎಂದರು.
2ನೇ ವಾರ್ಡ್ ಸದಸ್ಯ ರಾಘವೇಂದ್ರ ಮಾತನಾಡಿ, ಪಟ್ಟಣ ವಾಪ್ತಿಯಲ್ಲಿ ನಡೆಸಲಾಗಿರುವ ಸಾಕಷ್ಟು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಪಾವತಿ ಮಾಡಲಾಗಿದೆ. ಇದೂ ಹೇಗೆ ಎಂದು ಜೂನಿಯರ್ ಎಂಜಿನಿಯರ್ ಪುರುಷೋತ್ತಮ್ರನ್ನು ಪ್ರಶ್ನಿಸಿದರು.
ಉತ್ತರಿಸಿದ ಎಂಜಿನಿಯರ್ ಕಾಮಗಾರಿಗೆ ಬಂದತಹ ಹಣವನ್ನು ಆಯಾ ವಾರ್ಡ್ಗಳಿಗೆ ಉಪಯೋಗ ಮಾಡದೇ ಎಲ್ಲಾ ವಾರ್ಡ್ಗಳಿಗೂ ಹಂಚಿಕೆ ಮಾಡಲಾಗುತ್ತಿರುವುದರಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಮುಂದುವರೆದ ಕಾಮಗಾರಿಯಾಗಿ ಮಾಡಿ ಮತ್ತೂಂದು ಬಿಲ್ ಪಾವತಿ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.
ಹಿಂದಿನ ನಡವಳಿಕೆಯಲ್ಲಿ ಪಶು ಸಂಗೋಪನಾ ಇಲಾಖೆಯ ಕಾಪೌಂಡ್ ಬಳಿಗೆ ಮಟನ್ ಮಾರ್ಕೆಟ್ ಸ್ಥಳಾಂತರಿಸುವಂತೆ ತೀರ್ಮಾನಿಸಲಾಗಿತ್ತು. ಆದರೆ ಈಗ ಏಕಾಏಕಿ ಮಟನ್ ಮಾರ್ಕೆಟ್ನ್ನು ಹಳೆ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಸಲು ತೀರ್ಮಾನಿಸಿದ್ದೀರಿ ಇದೂ ಸರಿಯಲ್ಲ. ಕಳೆದ ಸಭೆಯ ತೀರ್ಮಾನದಂತೆ ಮಟನ್ ಮಾರ್ಕೆಟ್ನ್ನು ಪಶು ಇಲಾಖೆ ಕಚೇರಿ ಕಾಪೌಂಡ್ ಪಕ್ಕಕ್ಕೆ ಸ್ಥಳಾಂತರಿಸಬೇಕೆಂದು ನಾಮ ನಿರ್ದೇಶಿತ ಸದಸ್ಯ ಎನ್.ಮಹದೇವಸ್ವಾಮಿ ಸಭೆಯಲ್ಲಿ ಒತ್ತಾಯಿಸಿದರು.
ಭೈರಾಪುರ, ಆಲಗೂಡು ಗ್ರಾಮ ವ್ಯಾಪ್ತಿಗಳಲ್ಲಿ ವಾರ್ಡ್ ಸಭೆ ನಡೆಸಿ ಜನರ ಸಮಸ್ಯೆ ಆಲಿಸುವಂತೆ ಕಳೆದ ಮೂರ್ನಾಲ್ಕು ಸಭೆಗಳಿಂದ ಹೇಳುತ್ತ ಬಂದರೂ ಇದೂವರೆವಿಗೂ ಯಾವುದೇ ಸಭೆ ನಡೆಸಿಲ್ಲ ಇದೂ ಏಕೆ ಎಂದು ಸದಸ್ಯ ನಾಗೇಂದ್ರ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನಾಗರತ್ನ, ಅನುದಾನದ ಕೊರತೆ ಇರುವುದರಿಂದ ವಾರ್ಡ್ ಸಭೆ ನಡೆಸಿಲ್ಲ. ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿದ ಮೇಲೆ ಕನಿಷ್ಠ ಶೇ 50 ಸಮಸ್ಯೆ ಬಗೆಹರಿಸಬೇಕು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ವಾರ್ಡ್ ಸಭೆ ನಡೆಸಿಲ್ಲ ಎಂದು ವಿವರಣೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿನ ಹಳೇ ಶೌಚಾಲಯನ್ನು ಪುನಶ್ಚೇತನಗೊಳಿಸಲು ಹಾಗೂ ಭೈರಾಪುರ. ಹಳೆ ತತಿರುಮಕೂಡಲು, ಹೆಳವರಹುಂಡಿ, ಪೇಟೆಕೇರಿ ಬೀದಿ, ಆಲಗೂಡು, ಶ್ರೀರಾಂಪುರದಲ್ಲಿ ಬಡಾವಣೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಸರ್ವೆ ನಂ 7ರಲ್ಲಿ ನಿವೇಶನ ಹಂಚಿ ವಸತಿ ಸಮುಚ್ಚಾಯ ನಿರ್ಮಿಸುವ ಕುರಿತು ಕಳೆದ 40 ವರ್ಷಗಳ ಹಿಂದಿನಿಂದಲೂ ಸಮಸ್ಯೆ ಬಗೆ ಹರಿದಿಲ್ಲ. ಈ ಬಗ್ಗೆ ಸ್ಥಳೀಯ ಎಂಎಲ್ಸಿ ಧರ್ಮಸೇನಾ ಅವರ ಗಮನಕ್ಕೆ ತರದೇ ಪುರಸಭೆ ಸದಸ್ಯರುಗಳಾದ ನೀವುಗಳೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸದಸ್ಯ ಸಿ.ಮಹದೇವ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ತ್ರಿವೇಣಿ ನಗರ, ಬೈರಾಪುರ , ಶ್ರೀ ಗುಂಜಾನರಸಿಂಹಸ್ವಾಮಿ ದೇಗುಲ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು. ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮೀನಾಕ್ಷಿ, ಶಶಿಕಲಾ, ರಾಜಮ್ಮ, ಶೃತಿ, ರಾಘವೇಂದ್ರ, ಟಿ.ಜಿ. ಪುಟ್ಟಸ್ವಾಮಿ, ಮಲ್ಲೇಶ್, ಅಧಿಕಾರಿಗಳಾದ ಕಂದಾಯ ಅಧಿಕಾರಿ ರಾಣಿ, ಪುಟ್ಟಸ್ವಾಮಿ, ವಿನಯ್ಕುಮಾರ್, ಕೆಂಪರಾಜು, ಆಶಾ, ಮಹದೇವು, ಮೈತ್ರಾವತಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.