ಟಿಪ್ಪು ಜಯಂತಿಗೆ ಜಿಲ್ಲಾಡಳಿತ ಸಿದ್ಧತೆ
Team Udayavani, Oct 31, 2017, 12:57 PM IST
ಮೈಸೂರು: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನ.10 ರಂದು ಕಲಾಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಪ್ಪು ಜಯಂತಿ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಜಯಂತಿಯಲ್ಲ, ಎಲ್ಲ ವರ್ಗ ಹಾಗೂ ಸಮುದಾಯದವರ ಕಾರ್ಯಕ್ರಮವಾಗಿದೆ. ಹೀಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಶುಕ್ರವಾರದಂದೇ ಟಿಪ್ಪು ಜಯಂತಿ ಇರುವುದರಿಂದ ಅಂದು ಮಧ್ಯಾಹ್ನದ ಪ್ರಾರ್ಥನೆ ಬಳಿಕ ಜಯಂತಿ ಆಚರಣೆಗೆ ಸಮಯ ನಿಗದಿಪಡಿಸುವುದು ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಬಡಾವಣೆಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಲಾಯಿತು. ಇದಕ್ಕೆ ಒಪ್ಪದ ಜಿಲ್ಲಾಡಳಿತ, ಸರ್ಕಾರಿ ಕಾರ್ಯಕ್ರಮಕ್ಕೆ ತನ್ನದೇ ಆದ ಶಿಷ್ಟಾಚಾರ ಇರುತ್ತದೆ.
ಹೀಗಾಗಿ ಬೆಳಗ್ಗೆ 10.30 ರಿಂದ 11ಗಂಟೆ ಅವಧಿಯಲ್ಲಿ ಕಲಾಮಂದಿರದಲ್ಲೇ ಟಿಪ್ಪು ಜಯಂತಿ ಆಚರಿಸುವುದಾಗಿ ಮನವರಿಕೆ ಮಾಡಿಕೊಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಟಿಪ್ಪು ಸುಲ್ತಾನ್ ಕುರಿತು ಮುಖ್ಯ ಭಾಷಣಕ್ಕೆ ಪತ್ರಕರ್ತ ಟಿ.ಗುರುರಾಜ್ , ಉರಿಲಿಂಗ ಪೆದ್ದಿ ಮಠದ ಜಾnನ ಪ್ರಕಾಶ ಸ್ವಾಮೀಜಿ ಹಾಗೂ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಅವರ ಹೆಸರನ್ನು ಚರ್ಚಿಸಲಾಗಿದ್ದು, ಅಂತಿಮ ಆಯ್ಕೆ ಮಾಡಬೇಕಿದೆ.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪೊ›. ಪ್ರೀತಿ ಮಂಧರಕುಮಾರ್, ಕೋಮು ಸೌಹಾರ್ದ ಬೆಸೆಯುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಜಯಂತಿ ದಿನದಂದು ಗೌರವ ಸಮರ್ಪಣೆ ಮಾಡುವಂತೆ ಸಭೆಯಲ್ಲಿ ಸಲಹೆ ನೀಡಿದರು.
ಬಹುಜನ ವಿದ್ಯಾರ್ಥಿ ಸಂಘದ ಸೋಸಲೆ ಸಿದ್ದರಾಜು, ಟಿಪ್ಪು ಸುಲ್ತಾನ್ ಕಾರ್ಯ ವೈಖರಿ, ಆಡಳಿತ, ಸಾಧನೆ ಕುರಿತ ಕಿರುಹೊತ್ತಿಗೆ ಮುದ್ರಿಸಿ ನೀಡಿದರೆ ಅವರ ಸಾಧನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಮಾಜಿ ಮೇಯರ್ ಅಯೂಬ್ ಖಾನ್, ಪಾಲಿಕೆ ಸದಸ್ಯ ಶೌಕತ್ ಆಲಿ, ಸರ್ವ ಜನಾಂಗ ಹಿತರಕ್ಷಣಾ ವೇದಿಕೆ ವೇಣುಗೋಪಾಲ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
MUST WATCH
ಹೊಸ ಸೇರ್ಪಡೆ
C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.