ಉಸ್ತುವಾರಿ ಸಚಿವರಿಂದ ಜಿಲ್ಲಾ ರೌಂಡ್ಸ್
Team Udayavani, May 31, 2021, 5:52 PM IST
ಮೈಸೂರು: ಕೋವಿಡ್‌ನಿಂದ ಮೃತರಾದ ಪೋಷಕರ ಮಕ್ಕಳಿಗೆ ಅನಾಥ ಭಾವ ಕಾಡಬಾರದು. ಅವರ ಜತೆ ಸರ್ಕಾರವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಉನ್ನತೀಕರಣ ಗೊಂಡಿರುವ ತುಳಸಿದಾಸ್ ಆಸ್ಪತ್ರೆ ಕಟ್ಟಡದಲ್ಲಿ 50 ಹಾಸಿಗೆಗಳಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಭಾನುವಾರಉದ್ಘಾಟಿಸಿ ಮಾತನಾಡಿದರು.ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸುತ್ತೂರುಮಠದ ಸ್ವಾಮೀಜಿ ಉಚಿತ ಶಿಕ್ಷಣದ ವ್ಯವಸ್ಥೆಮಾಡಿದ್ದಾರೆ. ಹಾಗೆಯೇ ಪ್ರಧಾನಿ ಮಕ್ಕಳಿಗಾಗಿನಿಧಿ ತೆರೆದಿರುವುದು ಸ್ವಾಗತಾರ್ಹ ಎಂದರು.
ಚಿಕಿತ್ಸೆ:ಬೆಂಗಳೂರು-ಮೈಸೂರಲ್ಲಿ ಸೋಂಕುಹೆಚ್ಚುತ್ತಿದೆ. ಹೀಗಾಗಿ ಮೈಸೂರು ನಗರ ಪಾಲಿಕೆವ್ಯಾಪ್ತಿಯಲ್ಲಿ ಮನೆ ಮನೆ ಸರ್ವೆ ಶೇ.60 ರಿಂದ70ರಷ್ಟು ಮುಗಿದಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಶೇ.70 ರಿಂದ 80 ಮನೆ ಮನೆಸರ್ವೆ ಮುಗಿದಿದೆ ಎಂದರು.
ಇನ್ನು ನೂತನವಾಗಿ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆ ಎಲ್ಲಾ ವ್ಯವಸ್ಥೆ ಒಳಗೊಂಡಿದೆ. ಭಾನು ವಾರದಿಂದ ಸೋಂಕಿತ ಗರ್ಭೀಣಿಯರಿಗೆ ಚಿಕಿತ್ಸೆಆರಂಭವಾಗಲಿದೆ ಎಂದರು.ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಂಗಲ್ ಲಾಡ್ಜಸ್ ಅಧ್ಯಕ್ಷಅಪ್ಪಣ್ಣ, ವಸ್ತುಪ್ರದರ್ಸನ ಪ್ರಾಧಿಕಾರದ ಅಧ್ಯಕ್ಷಹೇಮಂತ್ ಕುಮಾರ್‌ಗೌಡ, ಮೈಲ್ಯಾಕ್‌ಅಧ್ಯಕ್ಷ ಫಣೀಶ್, ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಪಾಲಿಕೆ ಆಯುಕ್ತೆಶಿಲ್ಪಾನಾಗ್, ಅಪರ ಜಿಲ್ಲಾ ಧಿಕಾರಿಮಂಜುನಾಥಸ್ವಾಮಿ, ವೈದ್ಯಾಧಿಕಾರಿ ಗಳಾದಡಾ.ಸಿ.ಪಿ.ನಂಜರಾಜ್, ಡಾ.ಸುಧಾ ರುದ್ರಪ್ಪ,ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್‌ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.