“ತರಾತುರಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬೇಡ’
Team Udayavani, Jan 28, 2017, 12:47 PM IST
ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವ ಹಂತದಲ್ಲಿರುವಾಗ ರಾಜ್ಯ ಸರ್ಕಾರ ತರಾತುರಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ. ಹೀಗಾಗಿ ಕೇವಲ ಒಂದು ವರ್ಷದ ಅವಧಿಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದರಿಂದ ಕೋಟ್ಯಂತರ ರೂ. ವೆಚ್ಚದ ಜತೆಗೆ ಶಿಕ್ಷಕರು ಮತ್ತು ಮಕ್ಕಳಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಹೊಸ ಪಠ್ಯಕ್ರಮದ ಬಗ್ಗೆ ಶಿಕ್ಷಕರಿಗೆ ತರಬೇತಿಯನ್ನೇ ನೀಡದೆ ಜಾರಿ ಮಾಡುವುದರಿಂದ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆಯ ಕರಡು ಪ್ರತಿ ಈವರೆಗೆ ಯಾರ ಕೈಗೂ ಸಿಕ್ಕಿಲ್ಲ. ಈ ಬಗ್ಗೆ ಶಿಕ್ಷಣ ತಜ್ಞರು, ಸಾರ್ವಜನಿಕರ ಮಧ್ಯೆ ಚರ್ಚೆಗಳಾಗಿಲ್ಲ. ಆದರೂ ಪ್ರೊ.ಬರಗೂರು ರಾಮಚಂದ್ರಪ್ಪ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿಯವರು ಹೊಸ ಪಠ್ಯಪುಸ್ತಕ ಮುದ್ರಣಕ್ಕೆ ಸೂಚಿಸಿ ಬಿಟ್ಟಿದ್ದಾರೆ. ಎಡಪಂಥೀಯ, ಬಲಪಂಥೀಯ ಎಂಬ ಪ್ರಶ್ನೆಯಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ಸೇs… ಅವರ ಕೈಗೂ ಪಠ್ಯಪುಸ್ತಕ ಪರಿಷ್ಕರಣೆಯ ಕರಡು ಪ್ರತಿ ಸಿಕ್ಕಂತಿಲ್ಲ ಎಂದು ಹೇಳಿದರು.
ಸಾಮಾನ್ಯವಾಗಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಲಿಖೀತ ಕರಡು ಪ್ರತಿಯನ್ನು ನೀಡುವುದು ವಾಡಿಕೆ. ಆದರೆ, ಬರಗೂರು ರಾಮಚಂದ್ರಪ್ಪ ಕರಡು ಪ್ರತಿಯ 138 ಸೀಡಿ ನೀಡಿದ್ದಾರಂತೆ. ಆ ಸೀಡಿಗಳನ್ನು ಯಾರು ನೋಡಿದ್ದಾರೆ ಎಂಬುದು ಕೂಡ ತಿಳಿದಿಲ್ಲ. ತಮಗೆ ಬಂದಿರುವ ಮಾಹಿತಿಯ ಪ್ರಕಾರ ಮಹಾ ಪುರುಷರ ಭಾವಚಿತ್ರಗಳು, ಅವರ ಬಗೆಗಿನ ಮಾಹಿತಿಗಳನ್ನೇ ಪಠ್ಯಪುಸ್ತಕದಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ ಎಂದು ತಿಳಿಸಿದರು.
ದಿವಾಳಿ ಘೋಷಿಸಿ: ಸುವರ್ಣ ಆರೋಗ್ಯ ಸುರûಾ ಟ್ರಸ್ಟ್‌ನಡಿ ಖಾಸಗಿ ಆಸ್ಪತ್ರೆಗಳು ನೀಡಿರುವ ಆರೋಗ್ಯಸೇವೆಯ ಬಾಕಿಯನ್ನು ಸರ್ಕಾರ ಕೂಡಲೇ ಪಾವತಿಸಲಿ, ಇಲ್ಲವೇ ಸರ್ಕಾರ ದಿವಾಳಿಯಾಗಿದೆ ಎಂದು ಘೋಷಿಸಲಿ ಎಂದು ಆಗ್ರಹಿಸಿದರು. ಟ್ರಸ್ಟ್ ನಡಿ 5 ಮಾರಾಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ 10 ತಿಂಗಳಿಂದ ಸರ್ಕಾರ ನೀಡಬೇಕಾದ 150 ಕೋಟಿ ರೂ. ಪಾವತಿಸಿಲ್ಲ.
ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸಾಕಷ್ಟು ಒತ್ತಾಯ ಮಾಡಿದಾಗ ಈ ಯೋಜನೆಯಿಂದ ಖಾಸಗಿ ಆಸ್ಪತ್ರೆಗಳನ್ನೇ ಸರ್ಕಾರ ಕೈಬಿಟ್ಟಿದೆ. ಹೀಗಾದರೆ, ಚಿಕಿತ್ಸೆಯ ಮಧ್ಯೆ ಆ ರೋಗಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದಿರುವಾಗ ಅರ್ಧದಲ್ಲಿ ಕಾರ್ಯಕ್ರಮ ನಿಲ್ಲಿಸಿದರೆ ರೋಗಿಗಳ ಪಾಡೇನು? ಸರ್ಕಾರ ಕೂಡಲೇ ಬಾಕಿ ಮೊತ್ತ ಪಾವತಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಮುಂದುವರಿಸಲಿ ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಆಸಕ್ತಿ ಹೊಂದಿರುವ ರಾಜ್ಯ ಸರ್ಕಾರ ಜನರ ಜೀವದ ಜತೆಗೆ ಚೆಲ್ಲಾಟ ನಡೆಸುತ್ತಿದೆ. ರಮೇಶ್‌ಕುಮಾರ್ ಆರೋಗ್ಯ ಸಚಿವರಾದ ನಂತರ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಸುಧಾರಿಸಬಹುದು ಎಂದು ಕೊಂಡರೆ, ಆರೋಗ್ಯ ಇಲಾಖೆಯ ಪರಿಸ್ಥಿತಿಯೇ ಅಧೋಗತಿಗೆ ಇಳಿಯುತ್ತಿದೆ ಎಂದು ಟೀಕಿಸಿದರು.
ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರ ಬಿಜೆಪಿ ಅಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಮೈಸೂರು ವಿಭಾಗ ಪ್ರಭಾರಿ ಎಲ್.ನಾಗೇಂದ್ರ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಫಣೀಶ್ ಮೊದಲಾದವರಿದ್ದರು.
ತನ್ವೀರ್ ಪಠ್ಯಪುಸ್ತಕ ಪರಿಷ್ಕರಣೆಗೆ ಹಿಂದೆಯೇ ನಿರ್ಧಾರವಾಗಿದೆ ಎನ್ನುತ್ತಾರೆ. ಅವರು ಸಚಿವರಾಗುವ ಮೊದಲು ನಿರ್ಧಾರವಾಗಿದ್ದರೂ ಈಗ ಅನುಷ್ಠಾನ ಆಗುತ್ತಿರುವುದರಿಂದ ಅವರು ಹೊಣೆಹೊರಲೇ ಬೇಕಾಗುತ್ತದೆ. ಹೀಗಾಗಿ ಯಾರ ಪಕ್ಷಪಾತಿಯೂ ಅಲ್ಲದ ಕರ್ನಾಟಕ ಜಾnನ ಆಯೋಗದ ಅಧ್ಯಕ್ಷರಾದ ಕಸ್ತೂರಿರಂಗನ್ ಅವರ ಮೂಲಕ ಅಥವಾ ಶಿಕ್ಷಣ ಇಲಾಖೆ ನಿರ್ಧಾರಕ್ಕೆ ಬಿಡಲಿ.
-ಶೋಭಾ ಕರಂದ್ಲಾಜೆ, ಸಂಸದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.