ಎಲ್ಲ ಸಮಸ್ಯೆಗೂ ಸರ್ಕಾರವನ್ನೇ ಅವಲಂಬಿಸಬೇಡಿ
Team Udayavani, Feb 17, 2017, 12:39 PM IST
ಮೈಸೂರು: ಗ್ರಾಮೀಣ ಪ್ರದೇಶದ ಜನರು ಎಲ್ಲಾ ಸಮಸ್ಯೆಗಳಿಗೂ ಸರ್ಕಾರದ ಮೇಲೆ ಅವಲಂಬಿತವಾಗಬಾರದು ಎಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಕೆಂಪೇಗೌಡನಹುಂಡಿ ಯಲ್ಲಿ ಮೈಸೂರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಪ್ರತಿ ಸೋಮವಾರ ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿ ಗ್ರಾಮವನ್ನು ಸ್ವತ್ಛ ಮಾಡಿಕೊಳ್ಳುತ್ತಿದ್ದರು. ಈಗ ಅವರ ಮನೆ ಮುಂದಿನ ಕಸವನ್ನು ತೆಗೆಯಲು ಪಂಚಾಯಿತಿಯವರೇ ಬರಬೇಕು ಎನ್ನುತ್ತಾರೆ, ಈ ಮನೋಭಾವವನ್ನು ಜನರು ಬಿಡಬೇಕು. ಚರಂಡಿ ಕಟ್ಟಿಕೊಂಡು ಸೊಳ್ಳೆ ಕುಳಿತು ಕಾಯಿಲೆ ಬಂದಾಗ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ನಿಮ್ಮ ಮನೆ ಮುಂದಿನ ಪರಿಸರವನ್ನು ಪ್ರತಿಯೊಬ್ಬರು ಸ್ವತ್ಛತೆಯಿಂದ ಇಟ್ಟುಕೊಳ್ಳಬೇಕು. ಆಗ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂದರು.
ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಗ್ರಾಮವನ್ನು ಸ್ವತ್ಛತೆ ಮಾಡಲು ಮೈಸೂರಿನ ಕಾಲೇಜಿನಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಅದನ್ನು ನೀವು ಏಕೆ ಮಾಡಿಕೊಳ್ಳಬಾರದು. ಮೈಸೂರು ನಗರಕ್ಕೆ ಸ್ವತ್ಛ ನಗರ ಎಂದು ಪ್ರಶಸ್ತಿ ಬಂದಿದೆ. ಆದರೆ, ಇಡೀ ರಾಜ್ಯದ ಹಳ್ಳಿಗಳೆಲ್ಲಾ ಸ್ವತ್ಛವಾಗಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ.
ಆದ್ದರಿಂದ ನಮ್ಮ ಊರು ನಮ್ಮ ಮನೆಯ ಸ್ವತ್ಛತೆಯನ್ನು ನಾವೇ ಮಾಡಿಕೊಳ್ಳಬೇಕು ಎಂದ ಅವರು, ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿಗೆ ಶುದ್ಧಕುಡಿಯುವ ನೀರು ಘಟಕ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯೆ ಭಾಗ್ಯ, ತಾಪಂ ಮಾಜಿ ಸದಸ್ಯ ಎಂ.ಟಿ. ರವಿಕುಮಾರ್, ಎಪಿಎಂಸಿ ಸದಸ್ಯ ಆನಂದ್, ಎಂ.ಆರ್.ಗೌಡ, ದೊಡ್ಡರಾಮೇಗೌಡ, ಕಾಲೇಜಿನ ಪ್ರಾಂಶುಪಾಲರಾದ ಕೋದಂಡರಾಮ್, ಶಿಬಿರಾಧಿಕಾರಿ ಮಧುಸೂದನ್, ಎಸ್.ವಿ. ದೊಡ್ಡಯ್ಯ, ನವೀನ್, ಫಾರುಕ್ ಮುರುಸಲ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.