![New-CEC](https://www.udayavani.com/wp-content/uploads/2025/02/New-CEC-415x249.jpg)
![New-CEC](https://www.udayavani.com/wp-content/uploads/2025/02/New-CEC-415x249.jpg)
Team Udayavani, May 6, 2018, 5:21 PM IST
ಮೈಸೂರು: ಸಿನಿಮಾ ಹಾಗೂ ಕಿರುತೆರೆ ನಟ – ನಟಿಯರು ಯಾರ ಪರ ವಾಗಿಯೂ ಪುಕ್ಕಟ್ಟೆಯಾಗಿ ಚುನಾವಣಾ ಪ್ರಚಾರ
ಮಾಡುತ್ತಿಲ್ಲ, ಹೀಗಾಗಿ ನಟ- ನಟಿಯರನ್ನು ನೋಡಿ ಮತ ಹಾಕಬೇಡಿ ಎಂದು ನಟ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವೆಂಕಟ್ ಮನವಿ ಮಾಡಿದರು.
ಮತದಾರರು ಯಾವುದೇ ನಟ-ನಟಿಯರ ಮುಖ ನೋಡಿ ಯಾರಿಗೂ ಮತ ಹಾಕಬೇಡಿ, ಚುನಾ ವಣೆ ಮುಗಿದು ನಾಳೆ ಯಾವುದೇ ಸಮಸ್ಯೆ ಎದುರಾದರೆ ನಟ-ನಟಿ ಯರು ಬಂದು ಸಮಸ್ಯೆ ಬಗೆಹರಿಸಲ್ಲ. ನಟ- ನಟಿಯರು ಹಣವಿಲ್ಲದೆ ಯಾರ ಪರವಾಗಿಯೂ ಪ್ರಚಾರ ನಡೆಸುತ್ತಿಲ್ಲ, ಹಣಕ್ಕಾಗಿ ಚುನಾವಣಾ ಪ್ರಚಾರ ನಡೆಸುವ ಕಲಾವಿದರಿಂದ ರಾಜ್ಯ ಹಾಳಾಗಲಿದೆ ಎಂಬು ದನ್ನು ಆಲೋಚನೆ ಮಾಡುವುದಿಲ್ಲ ಎಂದರು.
ಅಲ್ಲದೆ ಜನಪರವಾಗಿ ಕೆಲಸ ಮಾಡುವ ರಾಜಕಾರಣಿಗಳು ಬೇರೆ ಯವರನ್ನು ತೋರಿಸಿ ಮತ ಕೇಳುವುದಿಲ್ಲ. ಮತದಾರರು ಹಣ-ಆಮಿಷ ಗಳಿಗೆ ಮತವನ್ನು ಮಾರಿಕೊಳ್ಳದೆ, ಚುನಾವಣೆಯಲ್ಲಿ ತನ್ನತನವನ್ನು ಉಳಿಸಿಕೊಳ್ಳುವ ಅಭ್ಯರ್ಥಿಗೆ ಮತಹಾಕಿ ಎಂದು ಶನಿವಾರ ಸುದ್ದಿಗೋಷ್ಠಿ ಯಲ್ಲಿ ಒತ್ತಾಯಿಸಿದರು.
ನಾನು ಖರ್ಚು ಮಾಡಲ್ಲ: ಸಮಾಜ ಸೇವೆಯ ಮೂಲಕ ಚಿತ್ರರಂಗಕ್ಕೆ ಬಂದ ತಾವು, ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಚುನಾವಣಾ ಆಯೋಗ ಪ್ರತಿಯೊಬ್ಬ ಅಭ್ಯರ್ಥಿಗೆ ಚುನಾವಣೆಯಲ್ಲಿ 28 ಲಕ್ಷ ಖರ್ಚು ಮಾಡುವ ಮಿತಿ ನಿಗದಿಗೊಳಿಸಿದೆ. ಆದರೆ ಚುನಾವಣೆಯಲ್ಲಿ ಇದಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಲಿದ್ದು, ಪ್ರಚಾರಕ್ಕೆ ಇಷ್ಟೊಂದು ಹಣಬೇಕೆ?.
ಆದರೆ ತಾವು ವೇದಿಕೆ ಹಾಕಿ ಸಬೆ-ಸಮಾರಂಭ ನಡೆಸುವುದಿಲ್ಲ, ಹಣ ಕೊಟ್ಟು ಚಪ್ಪಾಳೆ, ಶಿಳ್ಳೆ ಹೊಡೆಸಿ ಕೊಳ್ಳುವುದಿಲ್ಲ, ಮತದಾರರಿಗೆ ಯಾವುದೇ ಆಮಿಷಗಳನ್ನು ನೀಡುವುದಿಲ್ಲ. ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಮುಂದೆ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.
ಪ್ರಕಾಶ್ ರೈ ವಿರುದ್ಧ ಕಿಡಿ
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ, ಅರ್ಹತೆ ಪ್ರಕಾಶ್ ರೈಗಿಲ್ಲ, ಸಿನಿಮಾಗಳಲ್ಲಿ ಹೇಳುವ ಡೈಲಾಗ್ ಗಳನ್ನು ಬೇರೆ ಕಡೆ ಹೇಳಬೇಡ ಎಂದು ವೆಂಕಟ್ ಕಿಡಿಕಾರಿದರು. ಏಕವಚನದಲ್ಲಿ ಪ್ರಕಾಶ್ ರೈ ಅವರನ್ನು ನಿಂದಿಸಿದ ವೆಂಕಟ್,
ಸಿನಿಮಾದಲ್ಲಿ ಯಾರೋ ಬರೆದು ಕೊಡುವ ಡೈಲಾಗ್ ಹೇಳಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳೋ ನಿನಗೆ, ಪ್ರಧಾನಿ ಬಗ್ಗೆ ಮಾತನಾಡೋ ಯೋಗ್ಯತೆ ಇದೆಯಾ? ರಾಜ್ಯಕ್ಕೆ ಹಾಗೂ ಜನರಿಗೆ ನೀನು ಏನು ಮಾಡಿದ್ಯಾ? ಜನ ಮನರಂಜನೆಗಾಗಿ ನಿನ್ನನ್ನು ನೋಡ್ತಾರೆ, ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವವೇ ಹೆಮ್ಮೆಪಡುವ
ವ್ಯಕ್ತಿತ್ವ ಇದೆ. ಆದರೆ ಸಿನಿಮಾದಲ್ಲಿ ಅವಕಾಶ ವಿಲ್ಲವೆಂದು ಗಣ್ಯರನ್ನು ನಿಂದಿಸಿ ಪ್ರಚಾರ ಗಿಟ್ಟಿಸಿಕೊಂಡು, ಚಿತ್ರರಂಗ ದಲ್ಲಿ ಬೇಡಿಕೆ ಹೆಚ್ಚಿಸಿ ಕೊಳ್ಳಬೇಡ. ಸಿನಿಮಾದಲ್ಲಿ ವಿಲನ್ ಆಗಿರುವ ನೀನು, ನಿಜ ಜೀವನದಲ್ಲೂ ವಿಲನ್ ಆಗಿದ್ದೀಯಾ. ಒಳ್ಳೆಯ ಡೈಲಾಗ್ ಬರೆಯುವವರನ್ನು ನೇಮಿಸಿ ಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಇನ್ನಷ್ಟು ಪ್ರಸಿದ್ಧನಾಗುತ್ತೀಯಾ ಎಂದು ಟೀಕಿಸಿದರು.
Hunasuru: ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ; ಚಪ್ಪಲಿಯಿಂದ ಬಡಿದುಕೊಂಡ ಪಿಡಿಒ!
Mysuru: ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆಗೆ ಶರಣು… ಸ್ಥಳದಲ್ಲಿ ಡೆ*ತ್ ನೋಟ್ ಪತ್ತೆ
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
CEC Appoint: ಜ್ಞಾನೇಶ್ ಕುಮಾರ್ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ
Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ
ಕಾಂಞಂಗಾಡ್ -ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್
Aranthodu: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರು ಅಪಘಾತ
Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್ ಜಾಥಾ
You seem to have an Ad Blocker on.
To continue reading, please turn it off or whitelist Udayavani.