ಸಮಾಜಮುಖಿ ಕೆಲಸ ಮಾಡಿ
Team Udayavani, May 22, 2018, 2:05 PM IST
ಬನ್ನೂರು: ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಬನ್ನೂರಿನ ಬಸ್ ನಿಲ್ದಾಣದ ಸಮೀಪದಲ್ಲಿರುವ ಈಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ಹಾಗೂ ಬಸವ ಬಳಗದ ವತಿಯಿಂದ ಬಸವಣ್ಣನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರು ಸಮಾಜಕ್ಕೆ ನೀಡಿರುವಂತ ಕೊಡುಗೆ ಆಪಾರವಾಗಿದೆ ಎಂದು ತಿಳಿಸಿದರು.
ಸರ್ವಕಾಲಕ್ಕೂ ಸಲ್ಲುವಂತ ವಿಚಾರಲಹರಿಯನ್ನು ಜನರಿಗೆ ತಿಳಿಸುವ ಮೂಲಕ ತಮ್ಮದೆ ಆದಂತಹ ಚಾಪನ್ನು ಮೂಡಿಸಿ ಅಜರಾಮರರಾಗಿದ್ದಾರೆ. ಪ್ರತಿಯೊಂದು ಘಟನೆಯ ಬಗ್ಗೆ ವಚನದ ಮೂಲಕ ಸರಳ ಪರಿಹಾರ ಕೊಡುವ ಮೂಲಕ ಉತ್ತಮ ಗುಣ ಪಡೆಯುವಂತೆ ಮನುಜರಿಗೆ ತಿಳಿಸಿದರು. ಅವರು ತಿಳಿಸಿದ ಮಾರ್ಗದಲ್ಲಿ ನಾವು ಸಾಗುವ ಮೂಲಕ ಉತ್ತಮ ಆಡಳಿತದ ಜೊತೆಗೆ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಹಲವು ಶತಮಾನಗಳ ಹಿಂದೆ ಹೇಳಿದ ವಿಚಾರಗಳು ಇಂದಿಗೂ ಅನ್ವಯ ಆಗುತ್ತದೆ ಎಂದರೆ ಬಸವಣ್ಣನವರ ಬುದ್ಧಿ ಎಷ್ಟು ಮೊನಚಾಗಿತ್ತು ಎನ್ನುವುದನ್ನು ಅರಿಯಬೇಕು. ಆದ್ದರಿಂದಲೇ ವಿಶ್ವದಲ್ಲಿ ಇಂದಿಗೂ ಬಸವಣ್ಣನವರು ವಚನಗಳ ಮೂಲಕ ಜನರ ತಪ್ಪನ್ನು ತಿದ್ದುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ ಮಾತನಾಡಿ, ಬಸವ ಜಯಂತಿಯಂತಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಬೇಕು. ಈ ಮೂಲಕ ಮುಂದಿನ ಪೀಳಿಗೆಯ ಮಕ್ಕಳಿಗೆ ಬಸವಣ್ಣನವರ ಬದುಕಿನ ಸಂಪೂರ್ಣ ಮಾಹಿತಿ ಅವರಿಗೆ ಸಿಗುವಂತಾಗಬೇಕು.
ದಾರ್ಶನಿಕರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಬಳಸುವ ಮೂಲಕ ಮಕ್ಕಳಿಗೆ ಅವರ ಜೀವನ ಚರಿತ್ರೆಯ ಪರಿಚಯ ಮಾಡಿಸಬೇಕು ಎಂದು ತಿಳಿಸಿದರು. ಕಾಯಕವೇ ಕೈಲಾಸ ಎಂದು ವಚನ ಸಂದೇಶ ಸಾರಿದ ಮಾಹಾನ್ ಚೇತನರ ವಚನಗಳು ಪ್ರತಿಯೊಬ್ಬರೂ ಪಠಣ ಮಾಡುವ ರೀತಿಯಲ್ಲಿ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ಬಸವಯೋಗಿ ಪ್ರಭು, ಶಿವಮಲ್ಲಪ್ಪ, ಎಂ.ಚಂದ್ರಶೇಖರ್, ಕುಮಾರಸ್ವಾಮಿ, ವಚನಕುಮಾರಸ್ವಾಮಿ, ಗೌರಿಶಂಕರ ಸ್ವಾಮೀಜಿ, ಗುರುಪಾದ ಶಿವಚಾರ್ಯ ಸ್ವಾಮೀಜಿ, ದೇಶೀಕೇಂದ್ರ ಸ್ವಾಮೀಜಿ, ಸಮಾಜಸೇವಕ ಮಹೇಂದ್ರ ಸಿಂಗ್‌ಕಾಳಪ್ಪ, ರೇಣುಕಾ ಶಿವಚಾರ್ಯ ಸ್ವಾಮೀಜಿ, ಮಹಾಲಿಂಗ ಸ್ವಾಮಿಜಿ, ಪೂಜ್ಯಶ್ರೀಗಳು, ಇಮ್ಮಡಿ ಷಡಕ್ಷರಿ ಸ್ವಾಮಿಜಿ, ಸಹಜನಂದ ಸ್ವಾಮೀಜಿ, ಮಹದೇವ ಸ್ವಾಮೀಜಿ, ದಯಾನಂದ್ ಮಠದ ಬಸವಣ್ಣ ಸೇರಿದಂತೆ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ಹಾಗೂ ಬಸವ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.