10 ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಡುಗೆಯಾಗಿ ನೀಡಿದ ಶಾಸಕ ಮಂಜುನಾಥ್ ಮತ್ತು ಸ್ನೇಹಜೀವಿ ಬಳಗ
Team Udayavani, May 21, 2021, 12:53 PM IST
ಹುಣಸೂರು: ಹುಣಸೂರಿನ ಶಾಸಕ ಎಚ್ ಪಿ ಮಂಜುನಾಥ್ ರವರು 5 ಆಕ್ಸಿಜನ್ ಸಿಲಿಂಡರ್ ಗಳ ಮತ್ತು ಅವರ ಸ್ನೇಹಜೀವಿ ಬಳಗದ ಸದಸ್ಯರುಗಳು 5 ಆಕ್ಸಿಜನ್ ಸಿಲಿಂಡರ್ ಗಳು ಸೇರಿದಂತೆ ಒಟ್ಟು 10 ಆಕ್ಸಿಜನ್ ಸಿಲಿಂಡರ್ ಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.
ಸ್ವೇಹ ಜೊವಿ ಬಳಗದ ಸೋನಾಲಿಕ ಟ್ಯಾಕ್ಟರ್ ನ ಡೀಲರ್ ಗಳಾದ ಕುಡಿನೀರು ಮುದ್ದನಹಳ್ಳಿ ದಿಲೀಪ್ ರವರು ಶಾಸಕ ಸ್ನೇಹಜೀವಿ ಎಚ್ ಪಿ ಮಂಜುನಾಥ್ ರವರ ನೇತೃತ್ವದಲ್ಲಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಕೊರೋನಾ ಸೋಂಕಿತರಿಗೆ ನೆರವಾಗುವಂತೆ ಎರಡು ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಇದಲ್ಲದೆ ಸ್ನೇಹಜೀವಿ ತಂಡದ ಸದಸ್ಯರು ಹಾಗೂ ನಗರಸಭಾ ಸದಸ್ಯರುಗಳಾದ ಮಾಲೀಕ್ ಪಾಶ, ಜಬಿಉಲ್ಲಾಹ್(ಆಂಡಿ), ಜಾಕೀರ್, ಯುನಾಸ್, ಇಮ್ರಾನ್, ರಿಜ್ವಾನ್, ಮಜಾಜ್, ಶಕೀಬ್, ಅಮೀನ್, ಶೋಯಬ್, ಶಾಮಿಯಾನ ರಫೀಕ್, ಬಶೀರ್, ಅಪ್ರೋಜ್ ಸೇರಿದಂತೆ ಇನ್ನು ಅನೇಕ ಮುಸ್ಲಿಂ ಸಮುದಾಯದ ಮುಖಂಡರಗಳ ಸಹಕಾರದೊಂದಿಗೆ ಇವರುಗಳೂ ಕೂಡ ಮೂರು ಆಕ್ಸಿಜನ್ ಸಿಲಿಂಡರ್ (ಆಮ್ಲಜನಕ) ಗಳನ್ನು ಕೊಡುಗೆಯಾಗಿ ನೀಡಿ ಕೋವಿಡ್ ಮಹಾಮಾರಿಯ ಸೋಂಕಿಗೆ ತುತ್ತಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಿದ್ದಾರೆ.
ಇದನ್ನೂ ಓದಿ: ಗೋವಾ: ಲೈಂಗಿಕ ಕಿರುಕುಳ ಆರೋಪಗಳಿಂದ ಪತ್ರಕರ್ತ ತರುಣ್ ತೇಜ್ ಪಾಲ್ ಖುಲಾಸೆ
ಈ ಸಂದರ್ಭದಲ್ಲಿ ಶಾಸಕರಾದ ಸ್ನೇಹಜೀವಿ H.P. ಮಂಜುನಾಥ್ ಮಾತನಾಡಿ ನನ್ನ ಸ್ನೇಹಜೀವಿ ಬಳಗದವರು ನನ್ನೊಂದಿಗೆ ತಾಲೂಕಿನಲ್ಲಿ ಸಂಕಷ್ಟಕ್ಕೊಳಗಾಗಿರುವ ಜನರ ನೆರವಿಗೆ ಧಾವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾಲೂಕಿನ ಜನತೆಯು ಬಹಳ ಎಚ್ಚರಿಕೆಯಿಂದ ತಮ್ಮ ಆರೋಗ್ಯದ ಕಡೆ ಗಮನ ನೀಡಿ ಸಾಮಾಜಿಕ ಅಂತರದೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಬೇಕು. ತಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ತಹಸೀಲ್ದಾರ್ ಬಸವರಾಜ್, ಇ.ಒ. ಗಿರೀಶ್ ತಾಲೂಕು ಆರೋಗ್ಯ ಅಧಿಕಾರಿ ಕೀರ್ತಿ ಕುಮಾರ್ ನಗರಸಭೆ ಅಧ್ಯಕ್ಷ ಅನುಷಾರಾಗು ಸೇರಿದಂತೆ ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ: ಭೂಮಿ ಕಬಳಿಸಲು ಬೃಹತ್ ಬಂಡೆ ಸೀಳಿದ ಖದೀಮರು: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ, ಪ್ರಾಧಿಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.