ರಂಗ ತರಬೇತಿ ಪಡೆದ ಮಕ್ಕಳಿಂದ ನಾಟಕ ಪ್ರದರ್ಶನ
Team Udayavani, Jul 22, 2019, 3:00 AM IST
ಹುಣಸೂರು: ಈ ಹಳ್ಳಿಯ ಶಾಲಾ ಮಕ್ಕಳು ಮೈಸೂರಿನ ರಂಗಾಯಣದಲ್ಲಿ ರಂಗ ತರಬೇತಿ ಪಡೆದಿರುವ ಅಗ್ರಹಾರ ಸುಭಾಷ್ ನಿರ್ದೇಶನದಲ್ಲಿ ತಿಂಗಳಲ್ಲೇ ನಾಟಕ ಕಲಿತು, ತಮ್ಮೂರಿನ ಜನ, ಪೋಷಕರ ಮುಂದೆ ಮನೋಜ್ಞವಾಗಿ ಅಭಿನಯಿಸಿ, ಶಹಬಾಷ್ ಎನಿಸಿಕೊಂಡರು.
ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಬದಲಾವಣೆ ಜಗದ ನಿಯಮ ಎಂಬ ಮಕ್ಕಳ ನಾಟಕವನ್ನು ಅಭಿನಯದ ಮೂಲಕ ಪ್ರಸ್ತುತ ಸಮಾಜದ ಪರಿಸ್ಥಿತಿಯನ್ನು ಪ್ರತಿಬಿಂಬಿಸಿದರು.
ಮೈಸೂರಿನ ರಂಗಾಯಣದಲ್ಲಿ ರಂಗ ತರಬೇತಿ ಪಡೆದಿರುವ ಅಗ್ರಹಾರದ ಸುಭಾಷ್, ಹುಣಸೂರಿನ ಅರ್ಜುನ್ ಮತ್ತಿತರ ರಂಗ ಕಲಾವಿದರು ಹುಟ್ಟು ಹಾಕಿರುವ ರಂಗ ಗರಡಿ ಟ್ರಸ್ಟ್‌ನಿಂದ ಅಗ್ರಹಾರದಲ್ಲಿ ಅದೇ ಗ್ರಾಮದ ಶಾಲಾ ಮಕ್ಕಳಿಗೆ ತರಬೇತಿ ನೀಡಿ, ಪ್ರಥಮ ಪ್ರಯೋಗವನ್ನು ಅಲ್ಲಿಯೇ ಪ್ರದರ್ಶಿಸಿದ್ದು ವಿಶೇಷ.
ಗಮನ ಸೆಳೆದ ಮಕ್ಕಳು: ರಂಗ ಕಲಾವಿದ ಅರ್ಜುನ್ ರಚನೆಯ, ಅಗ್ರಹಾರ ಸುಭಾಷ್ ನಿರ್ದೇಶನದ ಬದಲಾವಣೆ ಜಗದ ನಿಯಮ ನಾಟಕವನ್ನು ಕಲಿಸಿ, ಅವರ ಪೋಷಕರು, ಸಾರ್ವಜನಿಕರ ಮುಂದೆ ಪ್ರದರ್ಶಿಸಿದರು. ನಾಟಕದಲ್ಲಿ ಹಿಂದಿನ ಕೂಡು ಕುಟುಂಬ, ಗುರು ಹಿರಿಯರಿಗೆ ಗೌರವ, ಅತ್ತೆ-ಸೊಸೆ ಬಾಂದವ್ಯ,
ಇಂದಿನ ಮೊಬೈಲ್ ಹಾವಳಿ, ಕುಟುಂಬದ ಒಡಕು ಹೀಗೆ ಅನೇಕ ಬದಲಾವಣೆಗಳ ಬಗ್ಗೆ ಮಕ್ಕಳು ಅಭಿನಯಿಸಿ, ಪ್ರಸ್ತುತ ಪರಿಸ್ಥಿತಿಯನ್ನು ಅನಾವರಣಗೊಳಿಸಿ ಗಮನ ಸೆಳೆದರು. ನಾಟಕದ ಕೆಲ ಸನ್ನಿವೇಶಗಳು ಹಲವರ ಮನೆಯಲ್ಲಿ ನಡೆಯುತ್ತಿರುವ ಕುರಿತು ಸಭಿಕರ ಮಧ್ಯೆ ಚರ್ಚಾಗ್ರಾಸವಾಗಿತ್ತು.
ನಾಟಕದೊಳಗೊಂದು ಕಂಸಾಳೆ ರಂಗು: ಇದೇ ಶಾಲೆ 30ಕ್ಕೂ ಹೆಚ್ಚು ಮಕ್ಕಳು ರಂಗಕಲಾವಿದ ಅರ್ಜುನ್ ಮಾರ್ಗದರ್ಶನದಲ್ಲಿ ಕಂಸಾಳೆ ಕಲಿತು, ವೇದಿಕೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನೀಡಿದ ಬಗೆಬಗೆಯ ಕಂಸಾಳೆ ಪ್ರದರ್ಶನವಂತೂ ಎಲ್ಲರನ್ನು ಅಶ್ಚರ್ಯಚಕಿತರನ್ನಾಗಿಸಿತ್ತು.
ರಂಗಭೂಮಿ ಉಳಿಸಿ-ಬೆಳೆಸಿ: ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ರಂಗಾಯಣ ಕಲಾವಿದ ರಾಮನಾಥ್ ಮಾತನಾಡಿ, ಇಂದು ರಂಗಭೂಮಿಯನ್ನು ಉಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಮೈಸೂರಿನ ರಂಗಾಯಣ ಪ್ರತಿವರ್ಷ 20 ಮಕ್ಕಳಿಗೆ ರಂಗ ತರಬೇತಿ ನೀಡಲಾಗುವುದು. ರಂಗಾಯಣದಲ್ಲಿ ತರಬೇತಿ ಪಡೆದು ಹುಟ್ಟೂರಿನ ಶಾಲಾ ಮಕ್ಕಳಿಗೆ ನಾಟಕ ಕಲಿಸಿ, ಪ್ರದರ್ಶಿಸಿರುವ ಅಗ್ರಹಾರ ಸುಭಾಷ್ ಮತ್ತು ತಂಡಕ್ಕೆ ಪ್ರಶಂಸಿಸಿದರು.
ಡಿ.ಡಿ.ಅರಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ತ್ರಿವೇಣಿ, ಸಿಆರ್‌ಪಿ ಡಾ.ಮಾಧುಪ್ರಸಾದ್, ಶಾಲಾ ಮುಖ್ಯಶಿಕ್ಷಕ ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಯ. ಗರಡಿಶಿವಣ್ಣ, ಮುಖಂಡರಾದ ಮುತ್ತುರಾಜ್, ಗೋವಿಂದಯ್ಯ ಮತ್ತಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ನಾಟಕ ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.