ಮಾವುತರು-ಕಾವಾಡಿಗಳ ಮಕ್ಕಳಿಂದ ನಾಟಕ ಪ್ರದರ್ಶನ
Team Udayavani, Sep 1, 2017, 12:13 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಈ ಬಾರಿ ದಸರಾ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ನಾಟಕ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯೊಂದಿಗೆ ಮಾವುತರು ಮತ್ತು ಕಾವಾಡಿಗಳು ನಗರಕ್ಕಾಗಮಿಸಿದ್ದಾರೆ. ಇವರೊಂದಿಗೆ ವಿವಿಧ ವಯಸ್ಸಿನ 50ಕ್ಕೂ ಹೆಚ್ಚು ಮಕ್ಕಳೂ ನಗರಕ್ಕಾಗಮಿಸಿದ್ದಾರೆ. ಇವರಿಗಾಗಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ವಿವಿಧ ಸವಲತ್ತು ಕಲ್ಪಿಸಲಾಗಿದೆ.
ಟೆಂಟ್ ಶಾಲೆ: ದಸರಾ ವೇಳೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಟೆಂಟ್ ಶಾಲೆ ಆರಂಭಿಸಲಾಗಿದೆ. ಇದೀಗ ಮೊದಲ ತಂಡದ 15 ಮಕ್ಕಳೊಂದಿಗೆ 2ನೇ ತಂಡದಲ್ಲಿ ಬಂದಿರುವ ಅಂದಾಜು 45ಕ್ಕೂ ಹೆಚ್ಚು ಮಕ್ಕಳು ಟೆಂಟ್ ಶಾಲೆ ಅನುಕೂಲ ಪಡೆಯಲಿದ್ದಾರೆ. ಎಂದಿನಂತೆ ಶಿಕ್ಷಕಿ ನೂರ್ ಫಾತಿಮಾ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಇವರೊಂದಿಗೆ ಕೆಲವು ಸಂಪನ್ಮೂಲ ವ್ಯಕ್ತಿಗಳೂ ಶಿಕ್ಷಣ ನೀಡಲಿದ್ದಾರೆ.
ಮಕ್ಕಳಿಗೆ ಆಸಕ್ತಿ ಕಡಿಮೆ: ಟೆಂಟ್‌ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಕೊರತೆ ಇದೆ. ಹೀಗಾಗಿ ಇವರನ್ನು ಒಂದೆಡೆ ಸೇರಿಸಿ ಶಿಕ್ಷಣ, ನಾಟಕ ಅಥವಾ ಇನ್ನಿತರ ಚಟುವಟಿಕೆಗಳನ್ನು ನಡೆಸುವುದು ಸವಾಲಿನ ಸಂಗತಿ. ಆದರೆ, 2ನೇ ತಂಡದಲ್ಲಿರುವ ಕೆಲವು ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಾರೆ.
ಹೀಗಾಗಿ 2 ತಂಡದಲ್ಲಿರುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅಗತ್ಯ ತರಬೇತಿ ನೀಡಲು ಶಿಕ್ಷಕರು ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ವರ್ಷದ ಮಕ್ಕಳ ದಸರೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮಾವುತರು, ಕಾವಾಡಿಗಳ ಮಕ್ಕಳು ಈ ಬಾರಿ ನಾಟಕ ಪ್ರದರ್ಶನ ನೀಡಲು ಅಣಿಯಾಗುತ್ತಿದ್ದಾರೆ.
ಮಾವುತರು, ಕಾವಾಡಿಗಳ ಮಕ್ಕಳು ನಾಟಕ ಪ್ರದರ್ಶನ ನೀಡಲು ಈ ಬಾರಿ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಕೆಲವು ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಕ್ಕಳು ಆಸಕ್ತಿವಹಿಸಿ ಕಲಿತರೆ ಮಕ್ಕಳ ದಸರಾ ವೇದಿಕೆಯಲ್ಲಿ ಉತ್ತಮ ನಾಟಕವೊಂದನ್ನು ಪ್ರದರ್ಶಿಸಲಿದ್ದಾರೆ.
-ಡಿ.ನಾಗೇಂದ್ರ, ಸಂಗೀತ ಹಾಗೂ ನಾಟಕ ಶಿಕ್ಷಕ
ಕಿಂದರಿಜೋಗಿ, ಭಗತ್‌ಸಿಂಗ್ ಹಾಸ್ಯ ನಾಟಕ
ಇದೇ ಮೊದಲ ಬಾರಿಗೆ ನಾಟಕ ಕಲಿಸುವ ಚಿಂತನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. ಇದಕ್ಕಾಗಿ ಶಿಕ್ಷಕರನ್ನೂ ನಿಯೋಜಿಸಿದೆ. ಮಕ್ಕಳಿಗಾಗಿ ಆಯ್ದ ನಾಟಕಗಳನ್ನೂ ಸಿದ್ಧಮಾಡಿಕೊಂಡಿದ್ದಾರೆ. ಈ ಪೈಕಿ ಕುವೆಂಪು ಅವರ ಕಿಂದರಜೋಗಿ, ಮೋಡಣ್ಣನ ತಮ್ಮ, ಭಗತ್‌ಸಿಂಗ್ ಹಾಗೂ ಟ್ರಾಫಿಕಾಯಣ ಎಂಬ ಹಾಸ್ಯ ನಾಟಕವೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಮಕ್ಕಳ ಅನುಕೂಲಕ್ಕಾಗಿ ಧ್ವನಿ ತರಬೇತಿ, ಉಚ್ಛಾರಣೆ ತರಬೇತಿಯನ್ನು ನೀಡಿ ಅಭ್ಯಾಸ ಮಾಡಿಸಲಾಗುತ್ತಿದೆ.
* ಸಿ.ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.