ಸಾರ್ವಜನಿಕ ಬೈಸಿಕಲ್ ಬಳಕೆಗೆ ಸಿಎಂ ಚಾಲನೆ
Team Udayavani, Jun 5, 2017, 12:45 PM IST
ಮೈಸೂರು: ನಗರಗಳಲ್ಲಿ ತಲೆದೋರುತ್ತಿರುವ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪರಿಸರದ ಉಳಿವಿಗಾಗಿ ಬೈಸಿಕಲ್ ಬಳಕೆ ಹೆಚ್ಚಬೇಕು. ಮುಂಬರುವ ದಿನಗಳಲ್ಲಿ ಬೆಂಗಳೂರಿಗೂ ಈ ಯೋಜನೆ ವಿಸ್ತರಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ ಮೈಸೂರು ಮಹಾ ನಗರಪಾಲಿಕೆಯು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿರುವ ಸಾರ್ವಜನಿಕ ಬೈಸಿಕಲ್ ಬಳಕೆ ಟ್ರಿಣ್ ಟ್ರಿಣ್ ಯೋಜನೆಗೆ ಭಾನುವಾರ ಅವರು ಚಾಲನೆ ನೀಡಿದರು.
ಮಾಲಿನ್ಯ ತಡೆಗೆ ಸಹಕಾರಿ: 12 ಲಕ್ಷ ಜನಸಂಖ್ಯೆ ಹೊಂದಿರುವ ಮೈಸೂರು ನಗರದಲ್ಲಿ 6.5 ಲಕ್ಷ ವಾಹನಗಳಿವೆ. ನಗರದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ವಾಹನಗಳಿದೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ನಾವು ಬೈಸಿಕಲ್ ಬಳಕೆಯನ್ನು ಹೆಚ್ಚು ಮಾಡಬೇಕು. ವಿಶ್ವದ ಸುಮಾರು 600 ನಗರಗಳಲ್ಲಿ ಬೈಸಿಕಲ್ ಬಳಕೆ ಇದೆ.
ಬೆಲ್ಜಿಯಂನಲ್ಲೂ ಬೈಸಿಕಲ್ ಬಳಕೆಯನ್ನು ಜಾರಿಗೆ ತರಲಾಗಿದೆ. ನನ್ನ ಹಿರಿ ಮಗ ಬೆಲ್ಜಿಯಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಹೋಗಿದ್ದಾಗ ಇದನ್ನು ಕಂಡಿದ್ದೇನೆ. ಬೆಳಗ್ಗೆ ಕಚೇರಿಗೆ ಹೋಗಿ, ಸಂಜೆ ಮನೆ ಸೇರುವವರು ಈ ಬೈಸಿಕಲ್ ಬಳಸುವುದರಿಂದ ಆರೋಗ್ಯವೂ ಸುಧಾರಿಸುತ್ತದೆ, ಪೆಟ್ರೋಲ್ ಬಳಕೆ ನಿಯಂತ್ರಿಸಬಹುದು ಮತ್ತು ಮಾಲಿನ್ಯ ನಿಯಂತ್ರಣ ಮಾಡಬಹುದು ಎಂದರು.
ಆದರೆ ಈ ಬೈಸಿಕಲ್‌ಗಳನ್ನು ಮಧ್ಯ ವಯಸ್ಕರು ಬಳಸುವುದು ಕಷ್ಟ. ಹೀಗಾಗಿ 30 ವರ್ಷದೊಳಗಿನವರಿಗೆ ಇಂತಹ 100 ಬೈಸಿಕಲ್ ಮೀಸಲಿಟ್ಟು, ಗುಣಮಟ್ಟದ ಬೈಸಿಕಲ್‌ಗಳನ್ನು 30 ವರ್ಷ ದಾಟಿದವರಿಗೆ ನೀಡುವುದು ಉತ್ತಮ ಎಂದು ಸಲಹೆ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್ ಬಳಕೆಯನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಂಗಳೂರಿಗೂ ವಿಸ್ತರಿಸುವ ಉದ್ದೇಶವಿದೆ ಎಂದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಸಂಸದ ಆರ್. ಧ್ರುವನಾರಾಯಣ, ಮೇಯರ್ ಎಂ.ಜೆ.ರವಿಕುಮಾರ್, ಶಾಸಕ ಎಂ.ಕೆ.ಸೋಮಶೇಖರ್, ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್, ಜಿಲ್ಲಾಧಿಕಾರಿ ಡಿ. ರಂದೀಪ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್ ಜೈನ್, ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.