ಮೂರು ದಿನದ ಯುವ ಸುಗ್ಗಿ ಸಂಭ್ರಮಕ್ಕೆ ಚಾಲನೆ
Team Udayavani, Feb 24, 2018, 1:06 PM IST
ಹುಣಸೂರು: ಡಿ.ಡಿ.ಅರಸ್ ಕಾಲೇಜು ವತಿಯಿಂದ ಆಯೋಜಿಸಿರುವ ಮೂರು ದಿನಗಳ ತಾಲೂಕು ಮಟ್ಟದ ಯುವಸುಗ್ಗಿ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಜಂಟೀ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಚಾಲನೆ ನೀಡಿದರು.
ಶುಕ್ರವಾರ ಬೆಳಗ್ಗೆ ಕಾಲೇಜು ಆವರಣದಲ್ಲಿ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಗ್ರಾಮೀಣ ಪ್ರತಿಭೆಗಳು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಮುಂದೆ ನ್ಯಾಕ್ ಮಾನ್ಯತೆ ಮೇಲ್ದರ್ಜೆಗೇರಲು ಸಹಕಾರಿಯಾಗಲಿದೆ.
ಇಲ್ಲಿ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಇನ್ನೂ ಅನೇಕ ಸ್ಪರ್ಧೆ ಇದ್ದಲ್ಲಿ ಮತ್ತಷ್ಟು ಚಂದವೆನಿಸುತ್ತಿತ್ತು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶಾಸಕ ಮಂಜುನಾಥ್ ಅವರು ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯವೆಂದರು.
ಪ್ರತಿಭೆಗೆ ಸೂಕ್ತ ವೇದಿಕೆ: ಸ್ಪರ್ಧೆಗಳಿಗೆ ಚಾಲನೆ ನೀಡಿದ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಯುವಜನರನ್ನು ಒಗ್ಗೂಡಿಸಿ, ಸಾಮರಸ್ಯ ಬೆಸೆಯುವಲ್ಲಿ, ಸಾಂಸ್ಕೃತಿಕತೆಯ ವಿನಿಮಯ ಹಾಗೂ ಪ್ರತಿಭೆ ಹೊರಹೊಮ್ಮಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.
ವಿದ್ಯಾರ್ಥಿಗಳದ್ದೇ ಹವಾ: ಕಾಲೇಜಿನ ಆಡಳಿತ ಮಂಡಳಿ ಇದೇ ಮೊದಲ ಬಾರಿಗೆ ನಡೆಸುತ್ತಿರುವ ಈ ಯುವ ಸುಗ್ಗಿಯಲ್ಲಿ ತಾಲೂಕಿನ 8 ಕಾಲೇಜುಗಳ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಇಡೀ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಕಲರವ ಕಣಟ್ಟುತ್ತಿದೆ. ಕಾರ್ಯಕ್ರಮದಲ್ಲಿ ಜನಪದ ಗೀತೆಗಳ ಝಲಕ್, ಭಾವಗೀತೆಗಳ ಭಾವನೆ, ಸಿನಿಮಾ ಹಾಡುಗಳು ಕಾಲೇಜು ಆವರಣದಲ್ಲಿ ಝೇಂಕರಿಸಿತು.
ಯುವ ಪಡೆಯಂತೂ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಇನ್ನು ಪರಿಸರಕ್ಕೆ ಪೂರಕವಾದ ಚಿತ್ರಕಲೆ ರಚಿಸಿದರು, ಫೇಸ್ ಪೇಂಟಿಂಗ್ ನಡೆಸಿಕೊಟ್ಟ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಮುಖದ ಮೇಲೆ ಪ್ರಕೃತಿ, ಹುಲಿ,ದೆವ್ವ ಹಾಗೂ ಬಟರ್ ಫ್ಲೈ ಹಾಗೂ ಒಂದೇ ಮುಖದಲ್ಲಿ ನಳನಳಿಸುವ ಹಸಿರು ಮತ್ತೂಂದೆಡೆ ಬರದ ಛಾಯೆಯ ಕುರಿತ ಬಣ್ಣಹಚ್ಚಿ ಕಲಾ ಪ್ರೌಢಿಮೆ ಮೆರೆದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಶಿವಪ್ಪ ನಾಯ್ಕ, ಪ್ರಾಚಾರ್ಯರಾದ ವೆಂಕಟೇಶಯ್ಯ, ಜಾnನಪ್ರಕಾಶ್,ಡಾ.ಹನುಮಂತರಾಯ, ಲಿಂಗೇಗೌಡ, ಜಗದೀಶ್, ದೀಪ್ತಿ, ನಾಗೇಶ್, ಕ.ಸಾ.ಪ.ಅಧ್ಯಕ್ಷ ನವೀನ್‌ರೈ, ಬಹುಮುಖ ಸಂಸ್ಥೆಯ ಆನಂದ್, ಸಿ.ಡಿ.ಸಿ.ಸದಸ್ಯರಾದ ರವಿಸಾಲಿಯಾನ, ಜಯರಾಂ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇಂದಿನ ಕಾರ್ಯಕ್ರಮ: ಶನಿವಾರ ಚರ್ಚಾಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ರಸಪ್ರಶ್ನೆ, ಒಲೆ ರಹಿತ ಅಡಿಗೆ, ಸ್ಕಿಟ್ ಹಾಗೂ ಮ್ಯಾಡ್ ಆಡ್ ಸ್ಪರ್ಧೆ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.