ಜೋಡಿ ರಸ್ತೆ ವಿಸ್ತರಣೆಯಲ್ಲಿ ಜನರಿಗೆ ಧೂಳಿನಿಂದ ಮುಕಿ
Team Udayavani, May 28, 2018, 4:15 PM IST
ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯನ್ನು 100 ಅಡಿಗೆ ವಿಸ್ತರಿಸುವ ಕಾಮಗಾರಿ ಭರದಿಂದ ಸಾಗಿದೆ. ಪ್ರಸ್ತುತ ರಸ್ತೆಯ ಒಂದು ಬದಿಗೆ ಕ್ವಾಲಿಟಿ ಸಿಮೆಂಟ್ ಕಾಂಕ್ರೀಟ್ ಹಾಕುವ ಕೆಲಸ ನಡೆದಿದೆ. ರಸ್ತೆ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದ್ದು, ಜನರಿಗೆ ಧೂಳಿನಿಂದ ಮುಕ್ತಿ ದೊರೆಯುತ್ತಿದೆ.
ನಗರದ ಪಚ್ಚಪ್ಪ ವೃತ್ತದಿಂದ ರಾಮಸಮುದ್ರದ ವರೆಗೆ 3.10 ಕಿ.ಮೀ. ದೂರದವರೆಗೆ ಬಿ. ರಾಚಯ್ಯ ಜೋಡಿ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೇಂದ್ರ ಭೂಸಾರಿಗೆ ಮಂತ್ರಾಲಯವು 2016- 17ನೇ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 35 ಕೋಟಿ ರೂ. ಅನುದಾನ ನೀಡಿದ್ದು, ಎಂಎಸ್ ಆರ್ ಕನ್ಸ್‌ಟ್ರಕ್ಷನ್ ಎಂಬ ಕಂಪೆನಿ ಕಾಮಗಾರಿ ನಡೆಸುತ್ತಿದೆ.
2017ರ ಆಗಸ್ಟ್ 8ರಂದು ಈ ರಸ್ತೆ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಧೂಳೆದ್ದು ಜನರು ಹಲವು ತಿಂಗಳು ಕಾಲ ಪರಿತಪಿಸ ಬೇಕಾ
ಯಿತು. ಮಾಸ್ಕ್ ಧರಿಸಿ ಸಂಚರಿಸು ವಂತಾಗಿತ್ತು. ಮೊದಲಿಗೆ 80 ಅಡಿ ಅಗಲೀ ಕರಣಗೊಳಿಸುವ ಕಾಮಗಾರಿಯನ್ನು ನಂತರ 100 ಅಡಿಗೆ ಬದಲಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಿಗೆ ಜಿಲ್ಲಾಡಳಿತ, ನಗರಸಭೆ ಯಾವುದೇ ಪರಿಹಾರ ನೀಡದಿದ್ದರಿಂದ ಕೆಲವು ಕಟ್ಟಡ ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿತ್ತು.
ಈಗ ಒಂದು ವಾರದಿಂದ, ರಸ್ತೆಯ ಒಂದು ಬದಿಗೆ ಅಂದರೆ 10.50 ಮೀ. ಅಗಲಕ್ಕೆ ಪಿಕ್ಯೂಸಿ – (ಪೇವ್‌ಮೆಂಟ್ ಕ್ವಾಲಿಟಿ
ಕಾಂಕ್ರೀಟ್) ಹಾಕಲಾಗುತ್ತಿದೆ. ಇದು ರಸ್ತೆಯ ನಿರ್ಮಾಣದಲ್ಲಿ ಅಂತಿಮ ಹಂತದ ಕಾಮಗಾರಿ. ಇದರ ಅಡಿಗೆ, ಜಿಎಸ್‌ಬಿ (ಗ್ರಾನುಲರ್ ಸಬ್ ಬೇಸ್) ಹಾಗೂ ಡಿಎಲ್‌ಸಿ (ಡ್ರೈಲೀನ್ ಕಾಂಕ್ರೀಟ್) ಹಾಕಲಾಗಿತ್ತು. ಒಟ್ಟಾರೆ ಈ ರಸ್ತೆಯ ಎತ್ತರ 250 ಮಿ.ಮೀ ಇರಲಿದೆ.
ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹಳೆಯ ಕಿತ್ತು ಹೋಗಿರುವ ಇನ್ನೊಂದು ಬದಿಯ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಬಹಳ ಸಂಕಷ್ಟದಲ್ಲಿ ಸಂಚರಿಸಬೇಕಾಗಿದೆ. ಇನ್ನೊಂದು ಬದಿಗೆ ಪೂರ್ತಿ 3.10 ಕಿ.ಮೀ.ಗೆ ಪಿಕ್ಯೂಸಿ ಹಾಕುವ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾಗಲಿದೆ! ಪಿಕ್ಯೂಸಿ ಕೆಲಸ ಮುಗಿದ ಮೇಲೆ ಒಂದು ತಿಂಗಳ ಕಾಲ ಕ್ಯೂರಿಂಗ್‌ಗೇ ರಸ್ತೆಯನ್ನು ಬಿಡಬೇಕಾಗಿದೆ. ಹಾಗಾಗಿ ಇನ್ನೂ ಮೂರು ತಿಂಗಳ ಕಾಲ ಸಾರ್ವಜನಿಕರು ತೊಂದರೆಯನ್ನು ಸಹಿಸಿಕೊಳ್ಳಬೇಕಾಗಿದೆ.
ಇನ್ನೊಂದು ಬದಿಯಲ್ಲಿ ಕಾಮಗಾರಿ ಪೂರ್ಣ ಗೊಂಡು ಸಂಚಾರಕ್ಕೆ ತೆರವುಗೊಳಿಸಿದರೆ ಶೇ.75 ರಷ್ಟು ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ. 10.50 ಮೀ. ರಸ್ತೆ ದೊರಕುವುದರಿಂದ ವಾಹನ ಸಂಚಾರಕ್ಕೆ ಎಷ್ಟೋ ಅನುಕೂಲವಾಗಲಿದೆ. ಆಗ ಬಾಕಿ ಉಳಿಯುವ ಇನ್ನೊಂದು ಬದಿ ರಸ್ತೆ ಕಾಮಗಾರಿಗೆ ಹೆಚ್ಚಿನ ತೊಡಕುಂಟಾಗುವುದಿಲ್ಲ.
ಜನರಿಗೂ ಈಗಿನಷ್ಟು ಕಿರಿಕಿರಿ ಇರುವುದಿಲ್ಲ. ವಾಹನ ಪಾರ್ಕಿಂಗ್‌ಗೆಸ್ಲಾಬ್ ಸದ್ಯಕ್ಕಿಲ್ಲ!
ಈಗ 80 ಅಡಿ ರಸ್ತೆ ನಿರ್ಮಾಣಕ್ಕಷ್ಟೇ ಅನುದಾನ ಲಭ್ಯವಿದೆ. ಗುತ್ತಿಗೆದಾರರು 80 ಅಡಿ ರಸ್ತೆ ಮತ್ತು ಚರಂಡಿ ನಿರ್ಮಾಣ
ಮಾಡಲಿದ್ದಾರೆ. ವಾಹನಗಳ ಪಾರ್ಕಿಂಗ್‌ಗೆ ಬೇಕಾದ ಇನ್ನುಳಿದ ಜಾಗಕ್ಕೆ ಸ್ಲಾಬ್ ಹಾಕಲು ಹೊಸ ಅನುದಾನ ಮಂಜೂರಾಗಬೇಕು.
ಅಲ್ಲಿಯವರೆಗೂ ಪಾರ್ಕಿಂಗ್ ಜಾಗಕ್ಕೆ ಇಂಟರ್ ಲಾಕಿಂಗ್ ಸ್ಲಾಬ್ ಹಾಕುವುದಿಲ್ಲ. ಅದಕ್ಕೆ ಮಣ್ಣು ಹಾಕಿ ಹಾಗೆ ಬಿಡಲಾಗುತ್ತದೆ. 80 ಅಡಿಗೆ ಯೋಜನೆಯಾಗಿದ್ದ ರಸ್ತೆಯನ್ನು ಜಿಲ್ಲಾಡಳಿತ 100 ಅಡಿಗೆ ಮಾಡಬೇಕೆಂದು ದಿಢೀರ್ ಎಂದು ಸೂಚನೆ ನೀಡಿದ್ದು ಇದಕ್ಕೆ ಕಾರಣ. ಗುತ್ತಿಗೆದಾರರು ಯೋಜನೆಯಲ್ಲಿ ದ್ದಂತೆ 80 ಅಡಿ ರಸ್ತೆ ಹಾಗೂ ಚರಂಡಿ
ನಿರ್ಮಿಸುತ್ತಿದ್ದಾರೆ. ಉಳಿದ ಜಾಗಕ್ಕೆ ಸ್ಲಾಬ್ ನಿರ್ಮಿಸಲು ಜಿಲ್ಲಾಡಳಿತ ಹೊಸ ಅನುದಾನ ತರಬೇಕಾಗಿದೆ.
ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.