ಆತ್ಮಾಭಿಮಾನ ಡಿವಿಜಿ ಬದುಕಿನ ಮೌಲ್ಯವಾಗಿತ್ತು


Team Udayavani, Jul 25, 2022, 4:00 PM IST

TDY-8

ಮೈಸೂರು: ಡಿವಿಜಿಯವರು ತಮ್ಮ ಬದುಕಿನಲ್ಲಿ ಆತ್ಮಾಭಿಮಾನವನ್ನೇ ಜೀವನದ ಮೌಲ್ಯವನ್ನಾಗಿಸಿಕೊಂಡಿದ್ದರಿಂದ ಅವರ ವೈಯಕ್ತಿಕ ಜೀವನವು, ಅವರಸಾಹಿತ್ಯಕ್ಕಿಂತಲೂ ಹೆಚ್ಚು ದೊಡ್ಡದಾಗಿತ್ತು ಎಂದು ಶಿಕ್ಷಣ ತಜ್ಞ ಡಾ. ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ಡಿವಿಜಿ ಬಳಗ ಪ್ರತಿಷ್ಠಾನದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಿವಿಜಿ ಪ್ರಶಸ್ತಿ 2022 ಸ್ವೀಕರಿಸಿ ಮಾತನಾಡಿದರು.

ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಅವರಿಗೆ ಒಂದು ರೂ., ಹನ್ನೆರಡಾಣೆಪ್ರಯಾಣ ವೆಚ್ಚ ಕೊಡುತ್ತಿದ್ದರು. ಇಂಥ ಸಂದರ್ಭದಲ್ಲಿ ಸರ್‌ಎಂವಿ ಅವರು ರಾಜರಿಗೆ ಡಿವಿಜಿಗೆ ಕಷ್ಟದಲ್ಲಿದ್ದಾರೆ.ಅವರಿಗೆ ಹೆಚ್ಚು ಹಣ ಕೊಡುವಂತೆ ಹೇಳಿದ್ದರು. ಆಗ 5 ರೂ. ಕೊಡಲಾಯಿತು. ತಮ್ಮೊಬ್ಬರಿಗೇ ಹೆಚ್ಚು ಹಣಕೊಟ್ಟಿರುವುದನ್ನು ತಿಳಿದುಕೊಂಡ ಡಿವಿಜಿ ಪೂರ್ತಿಹಣವನ್ನು ವಾಪಸ್‌ ಕೊಟ್ಟುಬಿಟ್ಟರು. ಹಣಕ್ಕಿಂತಆತ್ಮಾಭಿಮಾನ ಮುಖ್ಯ ಎಂಬ ಮೌಲ್ಯವನ್ನು ಡಿವಿಜಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಹೀಗಾಗಿ ಅವರವೈಯಕ್ತಿಕ ಜೀವನ ಅವರ ಸಾಹಿತ್ಯಕ್ಕಿಂತಲೂ ಹೆಚ್ಚುದೊಡ್ಡದಾಗಿತ್ತು ಎಂದರು.

ದಿನಗಳು ಕಳೆದಂತೆ ಘಟನೆಗಳ ತೀವ್ರತೆ ಕಡಿಮೆ: ನಾವು ಮಾಡುವ ಕಾರ್ಯದಿಂದ ಸಾವನ್ನು ಗೆಲ್ಲಬಹುದು. ಸುಖವಿರಲಿ ದುಃಖವಿರಲಿ, ಜಯವಿರಲಿ ಅಪಜಯವಿರಲಿ ದಿನಗಳು ಕಳೆದಂತೆ ಘಟನೆಗಳತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡರೂ ಮರೆತು ಬದುಕುತ್ತೇವೆ. ಇದೇ ಪ್ರಕೃತಿ. ಆದರೆ, ಕೆಲವು ವಿಷಯಗಳು, ವ್ಯಕ್ತಿಗಳು, ಚಿಂತನೆಗಳು, ಪುಸ್ತಕಗಳು ಮೊದಲಾದವುಗಳು ಮಾತ್ರ ದಿನಗಳು ಕಳೆದಂತೆ ಹೆಚ್ಚುಪ್ರಖರವಾಗುತ್ತಾ ಹೋಗುತ್ತವೆ. ಸ್ವಾಮಿ ವಿವೇಕಾ ನಂದ, ಡಿವಿಜಿ ಕಗ್ಗಗಳು, ಭಗವದ್ಗೀತೆ ಮೊದಲಾದವುಅದಕ್ಕೆ ಉದಾಹರಣೆಗಳಾಗಿವೆ. ಭಗವದ್ಗೀತೆಯನ್ನುಸುಟ್ಟರೂ ಏನೂ ಆಗುವುದಿಲ್ಲ. ಅದನ್ನುಹಿಂದೆಂದಿಗಿಂತಲೂ ಈಗ ಹೆಚ್ಚಿನವರು ಓದುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಉಲ್ಲೇಖ: ಮಿದುಳಿಗೆ ಹೋಗುವುದು ಹೆಚ್ಚು ನೆನಪಿನಲ್ಲಿಉಳಿಯದು. ಹೃದಯಕ್ಕೆ ಹೋಗುವುದನ್ನುನೆನಪಿಸಿಕೊಳ್ಳುವ ಅಗತ್ಯವಿಲ್ಲ. ಮನಸ್ಸಿನಲ್ಲಿ ಅದುಸದಾ ಉಳಿಯುತ್ತದೆ. ಅಂತೆಯೇ, ಸಾರ್ವಕಾಲಿಕಸತ್ಯದ ಬಗ್ಗೆ ಮಾತನಾಡುವವರು ಶಾಶ್ವತವಾಗಿಉಳಿಯುತ್ತಾರೆ. ಡಿವಿಜಿಯವರನ್ನು ಈಗಲೂವಿದೇಶಗಳಲ್ಲೂ ನೆನೆಯುತ್ತಾರೆ. ಅವರ ಕಗ್ಗಗಳನ್ನು ಓದುತ್ತಾರೆ. ಜನಪ್ರತಿನಿಧಿಗಳು ಕೂಡ ಕಗ್ಗಗಳನ್ನುತಮ್ಮ ಭಾಷಣಗಳಲ್ಲಿ ಅದರಲ್ಲೂ ವಿಧಾನಮಂಡಲಅಧಿವೇಶನದಲ್ಲಿ ಉಲ್ಲೇಖೀಸುತ್ತಾರೆ. ಈ ರೂಪದಲ್ಲಿ ಡಿವಿಜಿ ಉಳಿದಿದ್ದಾರೆ ಎಂದು ನೆನೆದರು.

ವಿದ್ವಾನ್‌ ಜಿ.ಎಸ್‌. ನಟೇಶ್‌ ಮಾತನಾಡಿ, ಸರ್ಕಾರಿ ಪ್ರಶಸ್ತಿಗಳನ್ನು ಪಡೆದವರಿಗೆ ವಿಜೇತರು ಎಂದು ಸಂಭೋದಿಸುವ ಕಾಲ ಬಂದಿದೆ. ಅರ್ಜಿ ಹಾಕಿ, ಕಚೇರಿಯಿಂದ ಕಚೇರಿಗೆ ಸುತ್ತಾಡಿ, ಯಾರದೋ ಕೃಪೆಯಿಂದ ಪ್ರಶಸ್ತಿ ಪಡೆದು, ಅದರಲ್ಲಿ ಬಂದ ಹಣದಲ್ಲಿ ಪಾಲು ಕೊಡುವ ಸನ್ನಿವೇಶನಿರ್ಮಾಣವಾಗಿದೆ. ಹೀಗಿರುವಾಗ ಡಿವಿಜಿ ಬಳಗಪ್ರತಿಷ್ಠಾನದವರು ಗುರುರಾಜ ಕರಜಗಿ ಅಂಥವರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಮಾಡುತ್ತಿರುವುದುಸಂತೋಷ. ಇದರಿಂದ ಪ್ರಶಸ್ತಿಗೂ ಘನತೆ ಬಂದಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್‌, ಪ್ರತಿಷ್ಠಾನದ ಸಂಚಾಲಕ ಸಿ.ಕನಕರಾಜು ಇದ್ದರು.

ಯಾವ ಚೈತನ್ಯ ಹತ್ತಾರು ಮುಖಗಳಲ್ಲಿ ವಿಜೃಂಭಿಸುತ್ತದೆಯೋ ಅದು ಶಾಶ್ವತವಾಗಿ ಉಳಿಯುತ್ತದೆ. ಅದಕ್ಕೆ ಡಿವಿಜಿನಿದರ್ಶನವಾಗಿದ್ದಾರೆ. ಅವರು ಬಹುಮುಖೀ ಆಯಾಮ ಹೊಂದಿದ್ದವರು.ಅವರನ್ನು ಕವಿ, ವಿಮರ್ಶಕ, ಸಮಾಜ ಸುಧಾರಕ, ರಾಜಕೀಯ ವಿಶ್ಲೇಷಕ ಎಂದೆಲ್ಲಹೇಳಬಹುದು. -ಡಾ. ಗುರುರಾಜ ಕರಜಗಿ, ಶಿಕ್ಷಣ ತಜ್ಞ

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.