ಫೆ.1ಕ್ಕೆ ಎಡತೊರೆ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವ
Team Udayavani, Jan 29, 2020, 3:00 AM IST
ಕೆ.ಆರ್.ನಗರ: ಕಾವೇರಿ ನದಿಯ ಬಲದಂಡೆಯಲ್ಲಿರುವ ಹಳೆಎಡತೊರೆಯಲ್ಲಿ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಫೆ.1ರಂದು ಶನಿವಾರ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ. ಕೃಷ್ಣರಾಜನಗರದಿಂದ 2 ಕಿ.ಮೀ. ದೂರದಲ್ಲಿ ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಎಡತೊರೆ ಕ್ಷೇತ್ರದಲ್ಲಿ ಕಾವೇರಿ ನದಿ ಎಡಕ್ಕೆ ತಿರುಗಿ ಹರಿಯುತ್ತಾಳೆ. ಇದರಿಂದಲೇ ಕ್ಷೇತ್ರಕ್ಕೆ ಎಡತೊರೆ ಎಂಬ ಹೆಸರು ಬಂದಿದೆ.
ತಾಲೂಕಿನ ಜನತೆಯ ಆರಾಧ್ಯ ದೈವವಾಗಿರುವ ಅರ್ಕೇಶ್ವರಸ್ವಾಮಿ ಸನ್ನಿಧಿ ಭಕ್ತಿ, ಶ್ರದ್ಧೆಯ ತಾಣವೆಂದು ಪ್ರಸಿದ್ಧಿ ಪಡೆದಿದೆ. ಪ್ರವೇಶ ದ್ವಾರ, ರಾಜಗೋಪುರ, ಗರುಡಗಂಭ, ಅದಕ್ಕೆ ಹೊಂದಿಕೊಂಡಂತೆ ನಂದಿಯ ಸಣ್ಣ ವಿಗ್ರಹ, ಹೊರಾಂಗಣ ಪ್ರಾಕಾರದಲ್ಲಿರುವ ಹತ್ತಾರು ಲಿಂಗಗಳು, ಅರ್ಕೇಶ್ವರನಿಗೆ ಶೈವಾಗಮನದ ರೀತ್ಯ ಪೂಜೆ ಸಲ್ಲಿಸುತ್ತಿರುವುದು, ಪ್ರವೇಶ ದ್ವಾರದ ಎಡಭಾಗದಲ್ಲಿ ಸೂರ್ಯ ದೇವರು, ಈಶಾನ್ಯ ಭಾಗದಲ್ಲಿ ಯಾಗಶಾಲೆ, ಅರ್ಕೇಶ್ವರನ ಹಿಂಭಾಗದಲ್ಲಿ ಮೀನಾಕ್ಷಿ, ಚಂಡಿಕೇಶ್ವರ, ಗಿರಿಜಾ ಕಲ್ಯಾಣ ಮಂಟಪಗಳಿಂದ ಈ ದೇವಾಲಯ ತನ್ನದೇ ವೈಶಿಷ್ಟತೆ ಹೊಂದಿದೆ.
ಕ್ಷೇತ್ರದ ಹಿನ್ನೆಲೆ: ಕ್ಷೇತ್ರದಲ್ಲಿ ಪುರಾಣ ಮತ್ತು ಐತಿಹಾಸಿಕ ಹಿನ್ನೆಲೆಯ ಶ್ರೀಅರ್ಕೇಶ್ವರಸ್ವಾಮಿಯ ದೇವಾಲಯವಿದೆ. ಸೂರ್ಯ ದೇವನು ತನ್ನ ಮಗಳು ಯಮುನೆಯನ್ನು ಪಾಪದೃಷ್ಟಿಯಿಂದ ನೋಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದನು. ನಂತರ ಎಡತೊರೆಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪುಷ್ಕರಣಿ ನಿರ್ಮಿಸಿದನೆಂಬುದು ಪೌರಾಣಿಕ ಪ್ರತೀತಿ ಇದೆ. ಸೂರ್ಯನು ಇಲ್ಲಿಯೇ ಇದ್ದು, ಕಾವೇರಿ ತೊರೆಯಲ್ಲಿ ಮಿಂದು ಮಡಿಯಾಗಿ ಶಿವನನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದ ಕಾರಣ ಇಲ್ಲಿಯ ಶಿವನಿಗೆ ಅರ್ಕೇಶ್ವರನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಮಹಾಶಿವರಾತ್ರಿಯಂದು ಸೂರ್ಯನ ತಪಸ್ಸಿಗೆ ಒಲಿದ ಪರಮೇಶ್ವರನು ಇಲ್ಲಿ ಸ್ವಯಂ ಭೂಲಿಂಗ ರೂಪದಿಂದ ಪ್ರತ್ಯಕ್ಷನಾಗಿ ಅನುಗ್ರಹಿಸಿದನಂತೆ. ಅದರ ಕುರುಹಾಗಿ ಇಂದಿಗೂ ಶಿವರಾತ್ರಿಯ ದಿನ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಈ ಲಿಂಗವನ್ನು ಸ್ಪರ್ಶಿಸಿ ಪೂಜಿಸುವವು ಎಂದು ಹೇಳಲಾಗುತ್ತಿದೆ. 9ನೇ ಶತಮಾನದ ಗಂಗರ ಕಾಲಕ್ಕೆ ಸೇರಿದ ಶಾಸನ ಈ ದೇವಾಲಯದ ಬಳಿ ದೊರೆತಿದೆ. 11ನೇ ಶತಮಾನದಲ್ಲಿ ರಾಜೇಂದ್ರಚೋಳ ವಾಸವಾಗಿದ್ದ ಈ ಪ್ರದೇಶದಲ್ಲಿ ದೇವಾಲಯದ ನಿರ್ಮಾಣಕ್ಕೆ ಅಂಗೈಕಾರನ್ ಎಂಬುವವರು ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದನೆಂದು ತಮಿಳು ಶಾಸನದಿಂದ ತಿಳಿದು ಬಂದಿದೆ.
ಗಂಗರ ಕಾಲದಲ್ಲಿ ಅರ್ಕೇಶ್ವರ ದೇವಾಲಯ, ಚೋಳರ ಕಾಲದಲ್ಲಿ ಮೀನಾಕ್ಷಿ ದೇವಾಲಯ ನಿರ್ಮಾಣವಾಯಿತೆಂದು ಇತಿಹಾಸ ಹೇಳಿದರೂ, ಖಚಿತ ಆಧಾರಗಳು ಈ ದೇವಾಲಯ ನಿರ್ಮಾಣದ ನಿರ್ದಿಷ್ಟ ಕಾಲ ತಿಳಿಸಲು ವಿಫಲವಾಗಿವೆ. ಆದರೆ, ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿ ಅಭಿವೃದ್ಧಿಗೊಂಡಿತೆಂದು ಮಾತ್ರ ಸ್ಪಷ್ಟವಾಗುತ್ತದೆ. ಅಮೃತಪುರಿ ಅಥವಾ ಭಾಸ್ಕರ ರಾಜ ಕ್ಷೇತ್ರದಲ್ಲಿ ನೆಲೆಸಿ ರಾರಾಜಿಸುತ್ತಿರುವ ಅರ್ಕೇಸ್ವರಸ್ವಾಮಿ ಬೃಹ್ಮ ರಥೋತ್ಸವ ಪ್ರತಿ ವರ್ಷ ರಥಸಪ್ತಮಿಯ ದಿನದಂದು ನಡೆಯುತ್ತದೆ.
* ಗೇರದಡ ನಾಗಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.