ಬಲಿಗೆ ಕಾದಿರುವ ವಿದ್ಯುತ್‌ ಕಂಬಗಳು


Team Udayavani, May 6, 2017, 12:50 PM IST

mys5.jpg

ಎಚ್‌.ಡಿ.ಕೋಟೆ: ಪಟ್ಟಣದ ಪ್ರತಿಷ್ಠಿತ‌ ಹನುಮಂತನಗರ ಬಡಾವಣೆಯಲ್ಲಿ ಮನೆಗಳಿಗೆ ವಿದ್ಯುತ್‌ ಪೂರೈಕೆಗಾಗಿ ಪುರಸಭೆ ವತಿಯಿಂದ ಚೆಸ್ಕಾಂ, ರಸ್ತೆ ಬದಿಯಲ್ಲಿ ಅಳವಡಿಸಿರುವ ಕೆಲ ವಿದ್ಯುತ್‌ ಕಂಬಗಳು ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವ ಈ ಕಂಬಗಳಲ್ಲಿ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಬಡವಾಣೆಯು ಪಟ್ಟಣದಲ್ಲಿ ಅತಿ ದೊಡ್ಡ ಬಡಾವಣೆಯಾಗಿದ್ದು, ಇಲ್ಲಿ ಹಲವು ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ  ಅಳವಡಿಸಿದ್ದ ಕಂಬಗಳ ಸಮೀಪವೆ ಹೊಸದಾಗಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಕೆಲ ಕಂಬಗಳು ಮಣ್ಣಿನ ಬಿಗಿ ಕಳೆದುಕೊಂಡು ಬಾಗಿಕೊಂಡಿವೆ.

ಇನ್ನು ಕೆಲ ಕಂಬಗಳು ಅರ್ಧಕ್ಕೆ ಬಿರುಕು ಕಾಣಿಸಿಕೊಂಡಿದ್ದರೂ ಅವುಗಳನ್ನು ಬದಲಾಯಿಸದೆ ಬಿರುಕು ಜಾಗಕ್ಕೆ ಕಬ್ಬಿಣದ ಆಂಗ್ಲರ್‌ನಿಂದ ರಕ್ಷಣೆ ನೀಡಲಾಗಿದೆ. ಇನ್ನು ಕೆಲ ಕಂಬಗಳು ಯಾವಾಗ ಬೇಕಾದರೂ ಬೀಳುವಂತಿವೆ.  ಕಂಬ ಬಿದ್ದು ಅವಘಡ ಸಂಭವಿಸುವುದೋ ಎನ್ನುವ ಆತಂಕದಲ್ಲೇ ಜೀವನ ದೂಡುತ್ತಿದ್ದಾರೆ.

ಇಲ್ಲಿನ ವಿದ್ಯುತ್‌ ಕಂಬಗಳ ದುಸ್ಥಿತಿ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ, ಒಂದು ವೇಳೆ ಕಂಬ ನೆಲಕ್ಕೆ ಉರುಳಿದರೇ ಅಗಬಹುದಾದ ಅವಘಡವನ್ನು ಮನವರಿಕೆ ಮಾಡಿಕೊಟ್ಟರೂ ಇನ್ನೂ ಕಂಬ ಬದಲಿಸಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮಳೆಗಾಲ ಶುರುವಾಗಿದ್ದು, ಬಿರುಗಾಳಿ ಸಹಿತ ಮಳೆ ಸುರಿದರೆ ಅಪಾಯ ತಪ್ಪಿದ್ದಲ್ಲ.

ಆದರೂ ಯಾರಬ್ಬರೂ ಈ ಕುರಿತು ಕ್ರಮ ಕೈಗೊಂಡಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ,  ಕೆಳಗೆ ಬಾಗಿರುವ, ಮುರಿದಿರುವ ಬಿರುಕು ಬಿಟ್ಟಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ  ವಾರ್ಡ್‌ನಲ್ಲಿರುವ ಕೆಲ ಕಂಬಗಳು ಬಿರುಕು ಬಿಟ್ಟಿವೆ, ಕೆಲ ಕಂಬಗಳು ಅರ್ಧದಷ್ಟು ನೆಲಕ್ಕೆ ಬಾಗಿವೆ. ಇನ್ನು ಕೆಲ ಕಂಬಗಳಲ್ಲಿ ಗಾರೆ ಕಿತ್ತುಹೋಗಿ ಕಂಬಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳು ಹೊರ ಬಂದಿವೆ. ಈ ಕಂಬಗಳ ವೈರ್‌ ಕೂಡ ಜೋತು ಬಿದ್ದಿದ್ದು ಗಾಳಿ ಬೀಸಿದಾಗ ಒಂದಕೊಂದು ಸ್ಪರ್ಶಗೊಂಡು ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಭಯದಲ್ಲೇ ಬದುಕುತ್ತಿದ್ದೇವೆ.
-ಭಾಗ್ಯಮ್ಮ, ವಾರ್ಡ್‌ ನಿವಾಸಿ.

ವಾರ್ಡ್‌ನಲ್ಲಿ ದುಸ್ಥಿತಿಯಲ್ಲಿರುವ ಕಂಬಗಳನ್ನು ಬದಲಾಯಿಸಲು ಸುಮಾರು 5.5 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ಚೆಸ್ಕಾಂ ಅಧಿಕಾರಿಗಳೇ ತಯಾರು ಮಾಡಿ, ಶೀಘ್ರ ಕಂಬ ಬದಲಿಸುವುದಾಗಿ ತಿಳಿಸಿ ಹೋಗಿ ಒಂದು ವರ್ಷ ಆಯ್ತು. ನಾನು ಕೂಡ ಚೆಸ್ಕಾಂ ಎಇಇ ಹಾಗೂ ಹುಣಸೂರಿನಲ್ಲಿರುವ ಇಇ ಕಚೇರಿಗೆ ಹಲವು ಬಾರಿ ತೆರಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ಕಳೆದ ವಾರ ಶಾಸಕರು ಕೂಡ ಚೆಸ್ಕಾಂ ಮುಖ್ಯ ಎಂಜಿನಿಯರ್‌ಗೆ ಕರೆಮಾಡಿ ಬೇಗ ಕಂಬಗಳನ್ನು ಬದಲಿಸುವಂತೆ ತಿಳಿಸಿದ್ದಾರೆ.
-ಪುಟ್ಟಬಸವನಾಯ್ಕ, ಪುರಸಭೆ ಸದಸ್ಯ

ಬಡಾವಣೆಯಲ್ಲಿ ಕಂಬಗಳ ಸ್ಥಿತಿಯ ಬಗ್ಗೆ ಹಾಗೂ ದುಸ್ಥಿತಿಯಲ್ಲಿರುವ ಕಂಬಗಳನ್ನು ಯಾವ ರೀತಿ ಬದಲಾವಣೆ ಮಾಡಬೇಕು ಎಂದು ಅಲ್ಲಿನ ಎಇಇ ಬಳಿ ಶನಿವಾರ ಚರ್ಚಿಸಿ ಶೀಘ್ರ ಬದಲಾವಣೆ ಮಾಡಲಾಗುವುದು. ಶಾಸಕರು ಕೂಡ ಕರೆಮಾಡಿ ಕಂಬಗಳ ಸ್ಥಿತಿಯ ಬಗ್ಗೆ ತಿಳಿಸಿ ಬೇಗ ಬದಲಾಯಿಸುವಂತೆ ತಿಳಿಸಿದ್ದಾರೆ.
-ನಾಗೇಶ್‌, ಕಾರ್ಯಪಾಲಕ ಎಂಜಿನಿಯರ್‌, ಚೆಸ್ಕಾಂ

* ಬಿ.ನಿಂಗಣ್ಣ ಕೋಟೆ

ಟಾಪ್ ನ್ಯೂಸ್

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.