ಕಾಡಂಚಿನ ಗ್ರಾಮಗಳಲ್ಲಿ ಆನೆ ದಾಳಿ

Team Udayavani, Oct 4, 2017, 12:39 PM IST

mu3.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ದಾಂದಲೆ ಶುರುಮಾಡಿದ್ದು, ರೈತರ ಬೆಳೆದಬೆಳೆಗಳನ್ನು ತಿಂದು-ತುಳಿದು ನಾಶಪಡಿಸಿರುವ ಘಟನೆ ನಡೆದಿದೆ.

ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಉಡುವೇಪುರದ ಗೋವಿಂದ, ವೀರಭದ್ರೇಗೌಡ, ಕುಮಾರ್‌, ರಾಜಶೇಖರ್‌ರ ಜಮೀನುಗಳಿಗೆ ನುಗ್ಗಿದ ಕಾಡಾನೆ ಹಿಂಡು ಜಮೀನಿನಲ್ಲಿದ್ದ ರಾಗಿ ಬೆಳೆಯನ್ನು ತಿಂದು ತುಳಿದು ನಾಶಮಾಡಿವೆ.

ಬೀರೇಗೌಡ ಜಮೀನಿನಲ್ಲಿ ಅಳವಡಿಸಿದ್ದ ಸ್ಪಿಂಕ್ಲರ್‌ ಫೈಪು ಮತ್ತು ತಂತಿ ಬೇಲಿಯನ್ನು ಸಹ ತುಳಿದು ನಾಶಪಡಿಸಿವೆ. ಅಲ್ಲದೆ ಪಕ್ಕದ ಕಾಳಬೋಚನಹಳ್ಳಿಯ ಸಿ.ಎನ್‌.ಬೀರೇಗೌಡರ ಸೇರಿದ ಮೂರು ಎಕರೆ ಮುಸುಕಿನ ಜೋಳ, ದಾಸಯ್ಯರ ಸೇರಿದ ರಾಗಿಬೆಳೆಯನ್ನು ನಾಮಾವಶೇಷಗೊಳಿಸಿದ್ದು ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಕಳೆದೊಂದು ತಿಂಗಳಿಂದಲೂ ಎಡಬಿಡದೆ ಹೆಬ್ಟಾಳ, ಕಲ್ಲುಗುಂಡಿ, ಹಾಗೂ ಸಣ್ಣಮ್ಮನಕುಂಚಿಯ ಅರಣ್ಯದ ಮಾರ್ಗವಾಗಿ ಹೊರಬರುವ ಕಾಡಾನೆಗಳ ಹಿಂಡು ನಿತ್ಯ ಲಗ್ಗೆ ಇಟ್ಟು ರೈತರು ಬೆಳೆದ ಬೆಳೆಗಳನ್ನು ತಿಂದು ನಾಶ ಪಡಿಸಿತ್ತಿವೆ. ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರೈತರ ಆಗ್ರಹ: ಪ್ರತಿವರ್ಷ ಆಗಸ್ಟ್‌ ತಿಂಗಳಿನಿಂದ ಡಿಸೆಂಬರ್‌ ವರೆಗೆ ವಿವಿಧ ಬೆಳೆಗಳು ಕಟಾವು ಮಾಡುವ ಸಂದರ್ಭದಲ್ಲೇ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ರೈತರು ಜಮೀನು, ತೋಳಗಳಲ್ಲಿ ಅಟ್ಟಣೆ ಹಾಕಿ ರಾತ್ರಿ ಕಾವಲು ಕಾದರೂ ನಿಯಂತ್ರಣಕ್ಕೆ ಬಂದಿಲ್ಲ. ರಣ್ಯ ಇಲಾಖೆಯವರು ಆನೆ ಹಾವಳಿ ನಿಯಂತ್ರಿಸಲು ಹೆಚ್ಚಿನ ಕಾವಲು ಪಡೆ ನಿಯೋಜಿಸಬೇಕು, ಬಾಕಿ ಉಳಿದಿರುವ ರೈಲುಕಂಬಿಯ ತಡೆಗೋಡೆಯನ್ನು ಪೂರ್ಣಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಪರಿಹಾರ ಸಿಕ್ಕಿಲ್ಲ: ಕಳೆದ ವರ್ಷ ನೇರಳಕುಪ್ಪೆಯ ಎ.ವಿ.ಬಾಲಕಷ್ಣ ಶಗ್ರಿತಾಯ, ಸಣ್ಣ ತಮ್ಮೇಗೌಡ ವಿ.ಸಿ.ಸಂಜೀವ, ಬಿಲ್ಲೇನ ಹೊಸಹಳ್ಳಿಯ ಜಾನ್ಸನ್‌, ಕೆ.ಜಿ.ಹೆಬ್ಬನಕುಪ್ಪೆಯ ಕಮಲ. ಕಾಳಬೋಚನಹಳ್ಳಿಯ ಹೊನ್ನೇಗೌಡ, ಬೀರೇಗೌಡ ಸೇರಿದಂತೆ ಹತ್ತಾರು ಜಮೀನುಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆ ನಾಶ ಪಡಿಸಿದ್ದವು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರ್ಷಕಳೆದರೂ ಇನ್ನು ಪರಿಹಾರ ದೊರಕಿಲ್ಲವೆಂದು ಈ ವೇಳೆ ಬೆಳೆ ನಾಶ ಹೊಂದಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. 

ಟಾಪ್ ನ್ಯೂಸ್

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

police

Bangaladesh illegal immigrants: ಕಾರ್ಮಿಕರ ಮಾಹಿತಿ ಸಂಗ್ರಹ ಆರಂಭಿಸಿದ ಪೊಲೀಸರು

KCV

By Election: ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ: ಸಿಎಂ, ಡಿಸಿಎಂ ಜತೆ ವೇಣುಗೋಪಾಲ್‌ ಸಭೆ

Palm-Oil

Edible Oil Mission: ಕರಾವಳಿಗರ ಕೈ ಹಿಡಿದೀತೇ ಎಣ್ಣೆ ತಾಳೆ

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

Flight

Investigation: ಗೆಳೆಯನನ್ನು ಸಿಲುಕಿಸಲು ಬಾಲಕನಿಂದ ಟ್ವೀಟ್‌ ಬಾಂಬ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur-1

Hunsur: ತಂಬಾಕು ಬೆಳೆಗಾರರ ರಕ್ಷಣೆಗೆ ಬದ್ದ: ಸಂಸದ ಯದುವೀರ್ ಒಡೆಯರ್

ಮುಡಾ ಅಧ್ಯಕ್ಷ ಕೆ.ಮರಿಗೌಡ ತಲೆದಂಡ?

MUDA Chairman: ಕೆ.ಮರಿಗೌಡ ತಲೆದಂಡ? ಇಂದು ಅಥವಾ ನಾಳೆ ರಾಜೀನಾಮೆ ನೀಡುವ ಸಾಧ್ಯತೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

police

Bangaladesh illegal immigrants: ಕಾರ್ಮಿಕರ ಮಾಹಿತಿ ಸಂಗ್ರಹ ಆರಂಭಿಸಿದ ಪೊಲೀಸರು

KCV

By Election: ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ: ಸಿಎಂ, ಡಿಸಿಎಂ ಜತೆ ವೇಣುಗೋಪಾಲ್‌ ಸಭೆ

Palm-Oil

Edible Oil Mission: ಕರಾವಳಿಗರ ಕೈ ಹಿಡಿದೀತೇ ಎಣ್ಣೆ ತಾಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.