ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆನೆ ಸಾವು
Team Udayavani, Jun 16, 2017, 12:55 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡುವಲಯದಲ್ಲಿ ವಾರದಿಂದ ನಿತ್ರಾಣ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಸುಮಾರು 65 ವರ್ಷದ ವರ್ಷದ ಹೆಣ್ಣಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಉದ್ಯಾನವನದ ಕಲ್ಲಳ್ಳ ವಲಯದಿಂದ ಹೊರಬಂದ ಹೆಣ್ಣಾನೆಯು ಮತ್ತಿಗೂಡು ವಲಯದ ಅಡಗುಂಡಿ ಹಾಡಿಯ ಬಳಿಯಲ್ಲಿ ಸಾವನ್ನಪ್ಪಿದೆ, ಹೆಣ್ಣಾನೆಕಾಲಿಗೆ ಗಾಯವಾಗಿದ್ದರಿಂದಾಗಿ ನಿತ್ರಾಣಗೊಂಡು ಲಕ್ಷಂತೀರ್ಥ ನದಿ ನೀರಿನಲ್ಲೇ ಬೀಡು ಬಿಟ್ಟಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಮೂಲಕ ಮೇಲೆತ್ತಿ ಚಿಕಿತ್ಸೆ ಕೊಡಿಸುತ್ತಿದ್ದರಾದರೂ ಫಲಕಾರಿಯಾಗದೆ ಮೃತಪಟ್ಟಿದೆ.
ಆನೆಯ ಎಡಗಾಲು, ಮರ್ಮಾಂಗ, ತೊಡೆ, ಎಡಗಣ್ಣಿನ ಭಾಗಕ್ಕೂ ಗಾಯವಾಗಿತ್ತು, ಕಣ್ಣಿನ ದೃಷ್ಟಿ ಸಹ ಮಂದವಾಗಿತ್ತು. ಚಿಕಿತ್ಸೆ ಸಂದರ್ಭದಲ್ಲಿ ಆನೆಯನ್ನು ಮೇಲೆತ್ತಲು ಮತ್ತಿಗೋಡು ಸಾಕಾನೆ ಕ್ಯಾಂಪಿನಲ್ಲಿರುವ ಸಾಕಾನೆಗಳಾದ ಅಭಿಮನ್ಯು, ಭೀಮ, ಕೃಷ್ಣ, ಗೋಪಾಲ ಹಾಗೂ ದ್ರೋಣ ಹರಸಾಹಸ ಪಟ್ಟಿದ್ದಲ್ಲದೆ, ವೆದ್ಯ ಡಾ.ಉಮಾಶಂಕರ್ ಸತತ ಚಿಕಿತ್ಸೆ ನೀಡುತ್ತಿದ್ದರಾದರೂ ಫಲಕಾರಿಯಾಗದೆ ಆನೆ ಕೊನೆಯುಸಿರೆಳೆಯಿತು.
ಸ್ಥಳಕ್ಕೆ ಎಸಿಎಫ್ ಪ್ರಸನ್ನಕುಮಾರ್, ಹುಣಸೂರು ವಲಯದ ಅರಣ್ಯಾಧಿಕಾರಿ ದೇಚಮ್ಮ ಭೇಟಿ ನೀಡಿ ಪರಿಶೀಲಿಸಿದರು. ಆನೆ ಶವವನ್ನು ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಆನೆಯು ಮಿಲನ ಸಂದರ್ಭದಲ್ಲಿ ಸ್ಪಂದಿಸದ ಕಾರಣ ಗಂಡಾನೆ ದಂತದಿಂದ ತಿವಿದು ಮರ್ಮಾಂಗಕ್ಕೆ ಘಾಸಿಯಾಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.