ಮಾವುತರನ್ನೇ ಕೆಡವಿ ಓಡಿದ ಆನೆಗಳು


Team Udayavani, Nov 23, 2018, 11:57 AM IST

m3-mavuta.jpg

ಎಚ್‌.ಡಿ.ಕೋಟೆ: ಹುಲಿ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆಗಳು ದಿಗಿಲುಗೊಂಡು ಮಾವುತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದ ಪ್ರಸಂಗ ಗುರುವಾರ ನಡೆಯಿತು.

ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಪೆಂಜಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾಣಿಸಿಕೊಂಡಿದ್ದ ಹುಲಿ ಪತ್ತೆಗಾಗಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜನರ ಗದ್ದಲ ಹಾಗೂ ಪಟಾಕಿ ಸಿಡಿತದ ಶಬ್ದದಿಂದ ಗಾಬರಿಗೊಂಡ ದ್ರೋಣ ಮತ್ತು ಅಶೋಕ ಆನೆಗಳು ಮಾವುತರಾದ ಗುಂಡ ಮತ್ತು ನಂಜುಂಡ ಇಬ್ಬರನ್ನೂ ಸಹ ಕೆಳಕ್ಕೆ ಬೀಳಿಸಿ ಅವರ ನಿಯಂತ್ರಣ ತಪ್ಪಿಸಿಕೊಂಡು ಕಾಡಿನತ್ತ ಓಡಿದವು.

ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾದರು. ನಂತರ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಇಬ್ಬರು ಮಾವುತರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆನೆಗಳ ಸೆರೆ ಹಿಡಿಯಲು ಅಧಿಕಾರಿಗಳು ಮುಂದಾದರು. ಬಳಿಕ  ಹಿರೇಹಳ್ಳಿ ಸಮೀಪದ ಕಾಡಿನಲ್ಲಿ ಆನೆಗಳನ್ನು ಮಾವುತರ ಸಹಾಯದಿಂದ ಸೆರೆ ಹಿಡಿಯಲಾಯಿತು.  

ಪಟಾಕಿ ಸಿಡಿಸಿ ಹುಲಿ ಕಾಡಿಗಟ್ಟಿವ ಪ್ರಯತ್ನಿಸುತ್ತಿರುವ ಸಿಬ್ಬಂದಿ, ಕೆಲ ದಿನಗಳಿಂದ ಜಾನುವಾರು ಬಲಿ ಪಡಿಯುತ್ತಿರುವ ಹುಲಿಯನ್ನು ಸೆರೆಹಿಡಿಯಲು ಗುರುವಾರ ಬೆಳಗ್ಗೆಯಿಂದ ಆನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದ್ದರು.

ಹುಲಿಯ ಹೆಜ್ಜೆ ಗುರುತು ಅಲ್ಲಿಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಲಿ ಪತ್ತೆ ಕಾರ್ಯ ಆರಂಭ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಗದ್ದಲದಿಂದ ಕಿರಿಕಿರಿಯಾಯಿತು. ಜತೆಗೆ ಪಟಾಕಿ ಸಿಡಿತದಿಂದ ಗಾಬರಿಗೊಂಡ ಆನೆಗಳು ತನ್ನ ಮಾವುತರನ್ನೇ ನೆಲಕ್ಕೆ ಬೀಳಿಸಿ ಕಾಡಿನತ್ತ ಓಡಿ ಹೋದವು.

ನಂತರ ಆನೆಗಳ ಹುಡುಕಾಟ ನಡೆಸಿದ ಅರಣ್ಯಾಧಿಕಾರಿಗಳ ತಂಡ ಸುಮಾರು 15 ಕಿ.ಮೀ. ದೂರದ ಹಿರೇಹಳ್ಳಿ ಸಮೀಪ ಕಾಣಿಸಿಕೊಂಡ ಸಾಕಾನೆಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಹುಲಿ ಸೆರೆ ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿಗಳಾದ ಶರಣಬಸಪ್ಪ, ಮಧು, ವಿಶೇಷ ಹುಲಿ ಸಂರಕ್ಷಣ ದಳದ ಆರ್‌ಎಫ್‌ಒ ಸಂತೋಷ್‌, ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.