ತುರ್ತು ಪರಿಸ್ಥಿತಿ, ಇಂದಿನ ಪರಿಸ್ಥಿತಿಯಲ್ಲೂ ಪತ್ರಿಕಾ ಸ್ವಾತಂತ್ರ್ಯ ಭ್ರಮೆಯಷ್ಟೇ
Team Udayavani, Jul 15, 2019, 3:00 AM IST
ಮೈಸೂರು: ಸೆನ್ಸಾರ್‌ಶಿಪ್ ಪತ್ರಿಕೆಗಳಿಗೆ ಇಂದಿಗೂ ಮಾರಕವಾಗಿದೆ ಎಂದು ಅಂಕಣಕಾರ್ತಿ ಶೋಭಾ ಡೇ ಹೇಳಿದರು.
ನಗರದಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೇಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ -2015 ಆಯೋಜಿಸಿದ್ದ ಮೈಸೂರು ಸಾಹಿತ್ಯೋತ್ಸವದಲ್ಲಿ “ಶೋಭಾ ಅಟ್ 70-ಸೆಲೆಕ್ಟಿವ್ ಮೆಮೋರಿ’ ಕುರಿತು ಲೇಖಕ ಮಹೇಶ್ ರಾವ್‌ರೊಂದಿಗೆ ನಡೆದ ಮಾತುಕತೆಯಲ್ಲಿ ಅವರು ಮಾತನಾಡಿದರು.
ರೆಡ್ ಮಾರ್ಕ್: ತುರ್ತು ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವು ಒಂದು ಭ್ರಮೆಯಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ಸೆನ್ಸಾರ್ ಶಿಪ್‌ಗ್ಳು ಪತ್ರಿಕೆ ಮತ್ತು ನಿಯತಕಾಲಿಕೆಗಳ ಶೇ.80ರಷ್ಟು ವಿಷಯವನ್ನು ಬದಲಾಯಿಸುತ್ತಿದ್ದವು.
ಸಚಿವಾಲಯದಿಂದ ಕೆಂಪು ಮಾರ್ಕ್‌ನಿಂದ ಸುದ್ದಿಗಳನ್ನು ಗೀಚಿದ ಸ್ಥಿತಿಯಲ್ಲಿ ಕಳುಹಿಸಲಾಗುತ್ತಿತ್ತು. ಅಲ್ಲದೆ, ಆಗಾಗ್ಗೆ ಸಂಪಾದಕರು ಮತ್ತು ಪತ್ರಕರ್ತರ ಬರಹಗಳಿಗೆ ಬೆದರಿಕೆಗಳು ಬರುತ್ತಿದ್ದವು. ತುರ್ತು ಪರಿಸ್ಥಿತಿಯಂತೆ ಇಂದೂ ಕೂಡ ಪತ್ರಿಕಾ ಸ್ವಾತಂತ್ರ್ಯ ಒಂದು ಕಲ್ಪನೆ ಅಥವಾ ಭ್ರಮೆಯಾಗಿ ಉಳಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿಪ್ರಾಯ: ನಂತರ ಶೋಭಾ ಡೇ ಅವರು ಪತ್ರಿಕೆಗಳಲ್ಲಿ ಅಂಕಣಕಾರರ ಪಾತ್ರದ ಕುರಿತು ಮಾತನಾಡಿದರು. ಇಂದು ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಅಭಿಪ್ರಾಯ ಭೇದವಿರುತ್ತದೆ. ಕೇವಲ ಜರ್ನಲ್‌ಗಳು ಮತ್ತು ಅಂಕಣಕಾರರಿಗೆ ಮಾತ್ರವೇ ಅಭಿಪ್ರಾಯಗಳಿರುವುದಿಲ್ಲ.
ವರದಿಗಾರರ ಬಳಿಯಷ್ಟೇ ಸುಂದರ ಕತೆಗಳಿರುವುದರಿಲ್ಲ. ಸಾಮಾನ್ಯ ನಾಗರಿಕನ ಬಳಿಯೂ ಸಾಕಷ್ಟು ಕತೆಗಳಿರುತ್ತವೆ. ಹೀಗಾಗಿ ಈಗ ಪ್ರತಿಯೊಬ್ಬರೂ ಅಂಕಣಕಾರರಾಗಬಹುದು ಮತ್ತು ಆ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಸಿಕೊಂಡ ದಿನ ನಾವು (ಅಂಕಣಕಾರರು) ಅಪ್ರಸ್ತುತವಾಗುತ್ತೇವೆ ಎಂದು ತಿಳಿಸಿದರು.
ಮಾಜಿ ರಾಯಭಾರಿ ನಿರುಪಮಾ ಮೆನನ್ ರಾವ್ ಅವರು ಸಂಗೀತವು ಗಡಿಯನ್ನು ಮೀರಿ ಹೇಗೆ ಸಾಮರಸ್ಯವನ್ನು ಸೃಷ್ಟಿಸುತ್ತಿದೆ ಎಂಬುದರ ಕುರಿತು ಮಾತನಾಡಿದರು. ಆರ್ಕೆಸ್ಟ್ರಾ ಶಿಸ್ತು ಮತ್ತು ಆಲಿಸುವಿಕೆಯನ್ನು ಬಯಸುತ್ತದೆ. ಸಂಗೀತ ನಮ್ಮೊಳಗೆ ಸಾಮರಸ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ದಕ್ಷಿಣ ಏಷ್ಯಾದ ಸಿಂಫನಿ ಆರ್ಕೆಸ್ಟ್ರಾ ಸಂಗೀತ ಸೂಕ್ಷ್ಮವಾದ ವಿಚಾರಗಳ ಪರ ವ್ಯವಹರಿಸುತ್ತದೆ.
ಈ ಸಾಮರಸ್ಯ ದೇಶಗಳ ನಡುವೆಯೂ ಮೂಡಬೇಕಿದೆ. ಆರ್ಥಿಕ ಲಾಭಕ್ಕಾಗಿ ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಹೇಗೆ ಒಂದಾಗಿವೆಯೋ ಹಾಗೆಯೇ ಭಾರತ ಮತ್ತು ಪಾಕಿಸ್ತಾನ ಒಗ್ಗೂಡಬೇಕಿದೆ. ಆದರೆ, ಸದ್ಯ ಕಾಶ್ಮೀರ ಸಮಸ್ಯೆ ಹಾಗೂ ಭಯೋತ್ಪಾದನೆ ನಮ್ಮ ಮುಂದಿದೆ. ಹಾಗಾಗಿ ಪಾಕಿಸ್ತಾನ ಬದಲಾವಣೆಗೆ ಮನಸ್ಸು ಮಾಡಬೇಕಿದೆ ಎಂದು ಹೇಳಿದರು.
ಮಕ್ಕಳಿಗೆ ಇತಿಹಾಸ ತಿಳಿಸಿ: ಬರಹಗಾರ ರಘು ಕಾರ್ನಾಡ್ ಅವರು ತಮ್ಮ ಫಾರ್ಟೆಸ್ಟ್ ಫೀಲ್ಡ…: ಆನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಪುಸ್ತಕದ ಕುರಿತು ಏರ್ ಮಾರ್ಷಲ್ ನಂದಾ ಕರಿಯಪ್ಪ ಅವರೊಂದಿಗೆ ಸಂವಾದ ನಡೆಸಿದರು. ಶಾಲೆಗಳಲ್ಲಿ ಇತಿಹಾಸ, ಆಧುನಿಕ ಇತಿಹಾಸವನ್ನು ಕಲಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಇದರಿಂದ ಮಕ್ಕಳು ನಮ್ಮ ಸುತ್ತ ಇರುವ ಇತಿಹಾಸ ಸೃಷ್ಟಿಸಿದ ನಾಯಕರನ್ನು ಭೇಟಿ ಮಾಡಲು ಮನಸ್ಸು ಮಾಡುತ್ತಾರೆ ಎಂದರು. ವನ್ಯಜೀವಿ ಸಂರಕ್ಷಣಾ ತಜ್ಞ ರೊಮುಲಸ್ ವಿಟ್ಕರ ಅವರು ವೈಲ್ಡ್-ಕನ್ಸರ್ವೇಶನ್ ಮತ್ತು ಮೊಸಳೆಗಳ ಪ್ರಪಂಚದ ಕುರಿತು ಮಾತನಾಡಿದರು.
“ಮಿ ಟೂ’ಗೆ ಬೆಂಬಲ: ಕಾರ್ಯಕ್ರಮದಲ್ಲಿ “ಮಿ ಟೂ’ ಅಭಿಯಾನದ ಬಗ್ಗೆ ಮಾತನಾಡಿದ ಶೋಭಾ ಡೇ, ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗುವ ಪುರುಷರಾಗಲಿ ಅಥವಾ ಮಹಿಳೆಯರೇ ಆಗಲಿ ಅವರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ. ತಮಗಾದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವವರಿಗೆ ಪ್ರೋತ್ಸಾಹ ಬೇಕಿದೆ. ತನುಶ್ರೀ ದತ್ತಾ ಈಗ ದೊಡ್ಡ ತಾರೆಯಾಗಿರದೆ ಇರಬಹುದು. ಹಾಗಂತ ಆಕೆ ಸೋತಿಲ್ಲ. ಕೈ ಕಟ್ಟಿ ಕುಳಿತಿಲ್ಲ.
ನಿಜಕ್ಕೂ ಆಕೆ ನಮ್ಮೆಲ್ಲರ ಬೆಂಬಲಕ್ಕೆ ಅರ್ಹಳು. ಜತೆಗೆ ನ್ಯಾಯಯುತ ವಿಚಾರಣೆಗೂ ಅರ್ಹಳು. ಭಾರತದಲ್ಲಿ ಶತಮಾನಗಳಿಂದ ಮಹಿಳೆಯರು ದಬ್ಟಾಳಿಕೆಗೆ ಒಳಗಾಗುತ್ತಿ¨ªಾರೆ. ಅಲ್ಲದೆ, ಇಡೀ ಪ್ರಪಂಚ ಅದನ್ನೆಲ್ಲಾ ಮುಚ್ಚಿಡಲು ಸಂಚು ರೂಪಿಸುತ್ತಿದೆ. ಆದರೆ, ಇಂದಿನ ಪೀಳಿಗೆಯಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳವನ್ನು ಸುಲಭವಾಗಿ ಮುಚ್ಚಲು ಸಾಧ್ಯವಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.