ಪುರಾತನ ದೇವಾಲಯ ನವೀಕರಿಸಲು ಒತ್ತು
Team Udayavani, Feb 22, 2021, 1:39 PM IST
ಕೆ.ಆರ್.ನಗರ: ನಗರ ಮತ್ತು ಗ್ರಾಮಗಳಲ್ಲಿ ಹೊಸ ದೇವಾಲಯ ನಿರ್ಮಿಸುವುದಕ್ಕಿಂತ ಪುರಾತನ ದೇವಾ ಲಯಗಳ ನವೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಉಪ್ಪಾರರ ಶ್ರೀರಾಮಮಂದಿರದಲ್ಲಿ ನೂತನವಾಗಿ ಸೂರ್ಯ ನಾರಾಯಣ ದೇವರ ರಾಜಗೋಪುರ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ತನ್ನ ದಿನನಿತ್ಯದ ಕೆಲಸದ ಒತ್ತಡದಲ್ಲಿ ನೆಮ್ಮದಿ ಕಾಣಲು ದೇವಮಂದಿರ ಅವಶ್ಯಕವಾಗಿದ್ದು, ಹೊಸ ದೇವಾಲಯ ನಿರ್ಮಾಣಕ್ಕಿಂತ ಹಳೆಯ ದೇವಸ್ಥಾನ ಗಳನ್ನು ಜೀರ್ಣೋದ್ಧಾರಗೊಳಿಸ ಬೇಕೆಂದರು.
ನಾನು ಶಾಸಕನಾಗಿ ತಾಲೂಕಿನ 200ಕ್ಕೂ ಅಧಿಕ ಪುರಾತನ ದೇವಾಲಯಗಳನ್ನು ನವೀಕರಣಗೊಳಿಸಿರು ವುದರ ಜತೆಗೆ ಪ್ರವಾಸೋದ್ಯಮ ಸಚಿವನಾಗಿದ್ದಾಗತಾಲೂಕಿನ ಚುಂಚನಕಟ್ಟೆಯ ಕೋದಂಡರಾಮ ಮತ್ತು ಪಟ್ಟಣದ ಹೊರವಲಯದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಶಿವನ ವಿಗ್ರಹ ನಿರ್ಮಿಸಲಾಗುತ್ತಿದೆ ಎಂದರು.
ನಾನು ಪ್ರಾಥಮಿಕ ಶಿಕ್ಷಣವನ್ನು ಉಪ್ಪಾರ ಸಮುದಾಯ ಹೆಚ್ಚು ವಾಸವಾಗಿರುವ ಹರದನಹಳ್ಳಿಯಲ್ಲಿ ಮಾಡಿದ್ದು, ಸಚಿವನಾಗಿದ್ದ ಸಂದರ್ಭದಲ್ಲಿ ಪ್ರಥಮ ಗ್ರಾಮ ವಾಸ್ತವ್ಯವನ್ನು ಹರದನಹಳ್ಳಿಯನ್ನು ಆಯ್ಕೆ ಮಾಡಿರುವುದಾಗಿ ಹೇಳಿದ ಶಾಸಕರು, ಈ ಸಮಾಜವನ್ನು ರಾಜಕೀಯವಾಗಿ ಮುಂದೆ ತರಲು ಆಗ್ರಾಮದ ಯುವಕನನ್ನು ಕ್ಯಾಬಿನೆಟ್ ದರ್ಜೆಯ ರಾಜಕೀಯ ಸ್ಥಾನ ಮಾನ, ಮೈಸೂರು ನಗರಾಭಿವೃದ್ಧಿ ಅಧ್ಯಕ್ಷನಾಗಿ ಮಾಡಿದ್ದನ್ನು ಸ್ಮರಿಸಿ, ಈ ಸಮಾಜದ ಜನರ ಸಂಬಂಧ ಕುಟುಂಬದಂತಿದೆ ಎಂದರು.
ಭಗೀರಥ ಮಹಾಸಂಸ್ಥಾನ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ಸಮಾಜಗಳು ಸಂಘಟನೆಯಾದಲ್ಲಿ ನಮ್ಮ ಹಕ್ಕು ಪಡೆಯಬಹುದು. ಸಮಾಜ ಉತ್ತಮ ರೀತಿಯಲ್ಲಿ ಸಂಘಟನೆಯಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಸಮಾಜದ ವಂಶಸ್ಥರು ಸೂರ್ಯವಂಶದ ಕ್ಷತ್ರೀಯರು, ಪುರಾತನ ಕಾಲದಿಂದಲೂ ದೇವರ ಬಗ್ಗೆಅಪಾರ ನಂಬಿಕೆ ಇಟ್ಟಿಕೊಂಡಿದ್ದೇವೆ. ಶ್ರೀರಾಮ, ಭಗೀರಥ, ಸೂರ್ಯದೇವರ ಆರಾಧನೆಮಾಡಿಕೊಂಡು ಬರುತ್ತಿದ್ದು, ನಮ್ಮಂತಹ ಹಿಂದುಳಿದ ಸಮುದಾಯದವರು ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಲು ಮೊದಲು ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಂಘಟನೆಗಳು ಒಗ್ಗೂಡಿದರೆ ಮೀಸಲಾತಿ ಹಕ್ಕು ಪಡೆಯಲು ಸಾಧ್ಯ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ಪುರಸಭಾ ಸದಸ್ಯರಾದ ಸಂತೋಷಗೌಡ, ಉಮೇಶ್, ಕೆ.ಬಿ.ವೀಣಾ, ಮಂಜುಳಾ ಅವರನ್ನು ಶಾಸಕರು ಸನ್ಮಾನಿಸಿದರು. ಸಮಾಜದ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ, ನಿವೃತ್ತ ಎಂಜಿನಿಯರ್ ಸ್ವಾಮಿನಾಥ್, ಟಿ.ಎನ್. ಶ್ರೀಧರ್, ಸಮಾಜದ ಯಜಮಾನ ಸೋಮಣ್ಣ, ಅಧ್ಯಕ್ಷ ಎಸ್.ನಟರಾಜು, ಕಾರ್ಯದರ್ಶಿ ಅಶ್ವತ್ ನಾರಾಯಣ್, ಸದಸ್ಯರಾದ ಎನ್.ರಾಮು, ಶ್ರೀನಿವಾಸಮೂರ್ತಿ, ದಶರಥ, ಕೆ.ಆರ್.ಲೋಕೇಶ್, ರಾಜೀವ್, ಗುತ್ತಿಗೆದಾರ ನಾಗೇಶ್, ಮುಖಂಡರಾದ ಜಗದೀಶ್, ದಯಾನಂದ, ರಾಮಚಂದ್ರ, ಶಾರದಮ್ಮ, ಭಾಗ್ಯರಮೇಶ್, ಉಮಾ, ಕೆ.ಟಿ.ನಾರಾಯಣ್, ಜಯರಾಮ್, ರಾಘು, ನವನಗರ ಅರ್ಬನ್ ಬ್ಯಾಂಕ್ ನಿರ್ದೇಶಕ ಎಂ.ಕೆ.ಮಹದೇವ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.