ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ
Team Udayavani, Nov 8, 2017, 12:16 PM IST
ಹುಣಸೂರು: ಶಿಕ್ಷಣ ಕ್ಷೇತ್ರದಲ್ಲಿ ಈ ಹಿಂದೆ ಪಠ್ಯೇತರ ಚಟುವಟಿಕೆಗೆ ಅವಕಾಶ ಕಡಿಮೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅಭಿಪ್ರಾಯಪಟ್ಟರು.
ನಗರದ ಶಿಕ್ಷಕರ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲಭವನ ಅಕಾಡೆಮಿ ಸಹಯೋಗದಲ್ಲಿ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
2-3 ದಶಕಗಳ ಹಿಂದೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿನ ಪ್ರತಿಭೆಯನ್ನು ಗುರುತಿಸುವ ಅವಕಾಶ ಕಡಿಮೆಯಿತ್ತು. ಆದರೆ ಇಂದು ಪ್ರತಿಭಾ ಕಾರಂಜಿ, ಇನ್ಸ್‌ಸ್ಪೈರ್x ಅವಾರ್ಡ್, ಕಲಾಶ್ರೀ ಪ್ರಶಸ್ತಿಯಂತಹ ಸಾಕಷ್ಟು ದೊಡ್ಡದಾದ ವೇದಿಕೆಗಳು ಅವರಿಗಾಗಿಯೇ ರೂಪುಗೊಂಡಿವೆ. ಇಂತಹ ಚಟುವಟಿಕೆಗಳು ಮಕ್ಕಳ ಬುದ್ಧಿಮತ್ತೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಸಿಡಿಪಿಒ ಯು.ನವೀನ್‌ಕುಮಾರ್, ಆಯ್ಕೆಯಾದ ವಿದ್ಯಾರ್ಥಿಗಳು ಬುಧವಾರ ಮೈಸೂರಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ತೆರಳಲು ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನ ಕಲೆ, ಕಥೆ, ಕವನ, ಪ್ರಬಂಧ, ಶಾಸ್ತ್ರೀಯ, ಜಾನಪದ ನೃತ್ಯ, ಸಂಗೀತ, ಏಕಪಾತ್ರಾಭಿನಯ, ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿ ಪ್ರದರ್ಶನದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಸಿಒ ಹೊನ್ನಾಚಾರ್, ಶಿಕ್ಷಣ ಸಂಯೋಜಕ ಮಹದೇವ್, ಸಿಆರ್‌ಪಿ ಕುಮಾರ್, ಬಿಆರ್‌ಟಿಗಳಾದ ಚಿಲ್ಕುಂದ ಮಹೇಶ್, ಸೋಮಶೇಖರ್, ನಿರ್ಮಲಾ, ತಾಲೂಕಿನ 20ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಾಉತ್ಸವ ವಿಜೇತರಿವರು
ಸತನಾತ್ಮಕ ಕಲೆ: ಸಾಹಿತ್ಯ ಎಂ(ರೋಟರಿ ಶಾಲೆ),ಮೇಘನಾ ಬಿ.ಪಿ( ಮೊರಾರ್ಜಿ ವಸತಿ ಶಾಲೆ ಧರ್ಮಾಪುರ).
ಸ್ಥಜನಾತ್ಮಕ ಭರವಣಿಗೆ: ವೆ.ಎಸ್.ಮೇಘನಾ(ಟ್ಯಾಲೆಂಟ್ ಪಬ್ಲಿಕ್ ಶಾಲೆ), ಅಪರಾತನ್ಮನ್ (ರೋಟರಿ ಶಾಲೆ).
ಸೃಜನಾತ್ಮಕ ಪ್ರದರ್ಶನ ಕಲೆ: ವಿಷ್ಣು(ಸರ್ಕಾರಿ ಪ್ರೌಢಶಾಲೆ ಕಡೇಮನುಗನಹಳ್ಳಿ), ಚಂದ್ರು(ಸರ್ಕಾರಿ ಪ್ರೌಢಶಾಲೆ(ಹರವೆ).
ವಿಜ್ಞಾನದಲ್ಲಿ ನೂತನ ಆವಿಷ್ಕಾರ: ಎಂ.ಎನ್.ನಂದೀಶ(ಆದರ್ಶ ವಿದ್ಯಾಲಯ ಹುಣಸೂರು), ದಾದ್ವಿಕ್(ರೋಟರಿ ಪ್ರೌಢಶಾಲೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.