ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬಿತ್ತುವ ಪ್ರಾಧ್ಯಾಪಕ
ಕಾಲೇಜು ಕ್ಯಾಂಪಸ್ ತುಂಬಾ ವಿವಿಧ ಜಾತಿ ಗಿಡ ನೆಟ್ಟು ಪೋಷಣೆ
Team Udayavani, Jun 6, 2019, 11:59 AM IST
ಹುಣಸೂರು ಡಿ.ಡಿ. ಅರಸ್ ಕಾಲೇಜಿನಲ್ಲಿ ಪರಿಸರ ಪ್ರೇಮಿ ಅಧ್ಯಾಪಕ ರವಿಯಿಂದ ವಿದ್ಯಾರ್ಥಿಗಳಿಗೆ ಸಸಿ ವಿತರಣೆ.
ಹುಣಸೂರು: ಪ್ರಾಧ್ಯಾಪಕರೊಬ್ಬರ ಸತತ ಪ್ರಯತ್ನದಿಂದಾಗಿ ಕಾಲೇಜಿನ ಆವರಣದಲ್ಲಿಂದು ಕಾಲೇಜು ವನ ನಿರ್ಮಾಣವಾಗಿದೆ.
ಹುಣಸೂರು ಡಿ.ದೇವರಾಜರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಕಾಲೇಜಿನ ಎಕೋ ಕ್ಲಬ್ ಸಂಚಾಲಕ ಸಿ.ರವಿ ಅವರೇ ತಮ್ಮೊಂದಿಗೆ ವಿದ್ಯಾರ್ಥಿ, ಯುವ ಜನರಲ್ಲಿ ಪರಿಸರ ಪ್ರೀತಿ ಬಿತ್ತುತ್ತಿರುವ ನಿಸರ್ಗ ಪ್ರೇಮಿಯಿಂದಾಗಿ ಕ್ಯಾಂಪಸ್ ಹಸಿರಿನಿಂದ ನಳನಳಿಸುತ್ತಿದೆ.
ಆವರಣದಲ್ಲಿ ಏನೇನಿದೆ: ಕಳೆದ 6 ವರ್ಷಗಳಿಂದ ಕ್ಯಾಂಪಸ್‌ನಲ್ಲಿ ಹೊಂಗೆ, ಬೇವು, ಹಲಸು, ತೇಗ, ತೆಂಗು, ಸಪೋಟ, ದಾಳಿಂಬೆ ಸೇರಿದಂತೆ ತರಾವರಿ ಹೂವಿನ ಗಿಡಗಳನ್ನು ಬೆಳೆಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಮಕ್ಕಳಿಗೆ ಮನವರಿಕೆ: ಕಾಲೇಜಿನ ಎಕೋ ಕ್ಲಬ್‌ನ ಸಂಚಾಲಕರಾಗಿರುವ ರವಿ ಅವರು ಸದಾ ಪರಿಸರದ ಬಗ್ಗೆ ವಿದ್ಯಾರ್ಥಿಗಳನ್ನು ಸೆಳೆದಿಡುವ ಮಾತುಗಳನ್ನಾಡುತ್ತಾರೆ. ಪಾಠದ ನಡುವೆಯೂ ಪರಿಸರ, ಭೂಮಿಯ ತಾಪಮಾನದಿಂದಾಗುವ ಅವಾಂತರಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾರೆ.
ಸಸಿಗಳ ಹಾರೈಕೆ: ಇವರಿಗೆ ಸಸಿ ನೆಡುವುದೆಂದರೆ ಅದಮ್ಯ ಪ್ರೀತಿ, ನೆಟ್ಟ ಗಿಡಗಳಿಗೆ ನಿತ್ಯ ನೀರೆರೆಯು ವುದರಲ್ಲೂ ಮತ್ತಷ್ಟು ಪರಿಸರ ಪ್ರೀತಿ ಮೆರೆಯು ತ್ತಾರೆ. ಎಕೋ ಕ್ಲಬ್‌ನ ಮೂಲಕ ವಿದ್ಯಾರ್ಥಿಗಳಿಂದ ಗಿಡ ನೆಡಿಸಿದ್ದರೂ, ನಿತ್ಯ ಕಾಲೇಜಿಗೆ ಬಂದು ಮೊದಲು ತಾವೇ ಸಸಿಗಳಿಗೆ ನೀರುಣಿಸಿದ ನಂತರವೇ ಪಾಠ-ಪ್ರವಚನ ಇವರ ದಿನಚರಿ.
ಇವರ ಪರಿಸರದ ಮೇಲಿನ ಕಾಳಜಿ ಹಲವಾರು ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದು ಅವ ರಲ್ಲಿ ಗಿಡ, ಮರ-ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಬೆಳೆಯುವಂತೆ ಮಾಡುವಲ್ಲಿ ಸಫಲರಾಗಿ ದ್ದಾರೆ. ಅಲ್ಲದೆ ಸಹೋದ್ಯೋಗಿ ಪ್ರಾಧ್ಯಾಪಕರು ಸಹ ಇವರ ಪರಿಸರ ಕಾಳಜಿಗೆ ಕೈಜೋಡಿಸಿದ್ದಾರೆ.
● ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.