ಸಿದ್ದರಾಮಯ್ಯ ಮೇಲೆ ಒಲವಿದ್ದರೂ ಕಾಂಗ್ರೆಸ್ಸಿಗೆ ಮತ ಕೇಳಲ್ಲ
Team Udayavani, Apr 22, 2018, 12:50 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ನನಗೆ ವೈಯಕ್ತಿಕವಾಗಿ ಒಲವಿದೆ. ಹಾಗೆಂದು ನಾನು ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಹೇಳಲ್ಲ. ಎಲ್ಲ ಪಕ್ಷಗಳಲ್ಲಿಯೂ ನನಗೆ ಸ್ನೇಹಿತರಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ನಗರದಲ್ಲಿ ಶನಿವಾರ ಜಸ್ಟ್ ಆಸ್ಕಿಂಗ್ ಅಭಿಯಾನದ ಭಾಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಎಡ-ಬಲ ಪಂಥಗಳಲ್ಲಿ ನಂಬಿಕೆ ಇಲ್ಲ. ನಾನೊಬ್ಬ ಕಲಾವಿದ, ಈ ದೇಶದ ಪ್ರಜೆ, ಜನಸಾಮಾನ್ಯನಾಗಿ ಯಾರ ಪರ-ವಿರುದ್ಧವು ಇಲ್ಲದೆ, ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಅಭಿಪ್ರಾಯ ಮಂಡಿಸುತ್ತಿರುವೆ. ಇದರಿಂದ ಕೆಲವರಾದರೂ ಬದಲಾಗಬಹುದು ಎಂಬ ವಿಶ್ವಾಸ ನನ್ನದು ಎಂದರು.
ಜಸ್ಟ್ ಆಸ್ಕಿಂಗ್ ರಾಜಕೀಯ ವೇದಿಕೆಯಲ್ಲ ಎಂದ ಅವರು, ಇದರಿಂದ ಪ್ರೇರಿತರಾಗಿ ಕೆಲವರಾದರೂ ನಾಯಕರಾಗಿ ರೂಪುಗೊಳ್ಳಬಹುದು. ಆದರೆ, ಅವರು ವಿರೋಧಪಕ್ಷದವರೇ ಆಗಿರುತ್ತಾರೆ ಎಂದ ಅವರು, ವಿಧಾನಸಭೆ ಚುನಾವಣೆ ಮುಗಿದ ಬಳಿಕ ಜೂನ್ ತಿಂಗಳಿಂದ ರಾಜಾದ್ಯಂತ ಕಮ್ಮಟ, ವಿವಿಧ ಸ್ಪ$ರ್ಧೆಗಳ ಮೂಲಕ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ಜಸ್ಟ್ ಆಸ್ಕಿಂಗ್ ವೇದಿಕೆ ಕೆಲಸ ಮಾಡಲಿದೆ ಎಂದು ಹೇಳಿದರು.
ನಾನೊಬ್ಬ ಭಾರತದ ಜವಾಬ್ದಾರಿಯುತ ಪ್ರಜೆಯಾಗಿ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ನನ್ನ ಅನಿಸಿಕೆ, ಅಭಿಪ್ರಾಯಗಳನ್ನು ಜನಸಾಮಾನ್ಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ಸಲುವಾಗಿ ರಾಜ್ಯಾದ್ಯಂತ ಜಸ್ಟ್ ಆಸ್ಕಿಂಗ್ ಅಭಿಯಾನ ಕೈಗೊಂಡಿರುವೆ, ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವೂ ಇಲ್ಲ. ನಾನು ಯಾವ ಪಕ್ಷಕ್ಕೂ ಮತ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ರಾಜ್ಯದಲ್ಲಿ ಕೋಮುವಾದಿಗಳ ರಾಜಕಾರಣ ಬೇಡ, ಜಾತಿ-ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವೆ, ಜಾಗೃತರಾಗಿ ಮತ ಚಲಾಯಿಸುವ ಮೂಲಕ ಸಾಮರಸ್ಯದಿಂದ ಕೂಡಿ ಬಾಳುವಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಎಂದು ಮನವಿ ಮಾಡುವೆ ಎಂದರು.
ನನ್ನ ಈ ಜಸ್ಟ್ ಆಸ್ಕಿಂಗ್ ಜಾಗೃತಿ ಕಾರ್ಯಕ್ರಮಕ್ಕೆ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಮಾಜದಲ್ಲಿ ಧ್ವನಿ ಇಲ್ಲದ ಹಲವರ ಧ್ವನಿಯಾಗಿ ನಾನು ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಂಡರು.ಯಾವುದಾದರೂ ರಾಜಕೀಯ ಪಕ್ಷ ಸೇರುವುದಾ? ಇಲ್ಲ ನಾನೇ ಹೊಸ ಪಕ್ಷ ಕಟ್ಟುವುದಾ? ಎಂಬ ಚಿಂತನೆ ಶುರು ಆಯಿತು.
ಆದರೆ, ಸ್ವಾತಂತ್ರ್ಯಾ ನಂತರ ಎಲ್ಲ ರಾಜಕೀಯ ಪಕ್ಷಗಳೂ ನಂಬಿಕೆ ದ್ರೋಹ ಮಾಡುತ್ತಲೇ ಬಂದಿವೆ, ಹೀಗಾಗಿ ಜನರ ಧ್ವನಿಯಾದರೆ ಯಾರೇ ಅಧಿಕಾರಕ್ಕೆ ಬಂದರೂ ಜನರ ಕೆಲಸ ಮಾಡಿಸಬಹುದು ಎಂಬ ಕಾರಣದಿಂದ ಜಸ್ಟ್ ಆಸ್ಕಿಂಗ್ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.
ಬೇರೊಂದು ಧರ್ಮದ ಮೇಲಿನ ದ್ವೇಷದಿಂದ ಕೆಲವರು ನನ್ನನ್ನು ಪಾಕಿಸ್ಥಾನಕ್ಕೆ ಹೋಗು ಎನ್ನುತ್ತಾರೆ, ನಾನೇಕೆ ಹೋಗಲಿ. ನನ್ನ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ? ಪ್ರಾಣಿಗಳಿಗೆ ಎಲ್ಲವೂ ಪ್ರಾಣಿಗಳಂತೆಯೇ ಕಾಣುತ್ತವೆ, ನಾನು ಕಾಗೆ ಕೂಗುತ್ತಿದ್ದೇನೆ, ಈಗ ವಿಷಯವಿಲ್ಲ ಅದಕ್ಕೇ ಘರ್ಜಿಸುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು.
ಕಾವೇರಿಯನ್ನು ರಾಜಕೀಯದಿಂದ ಹೊರಗಿಡಬೇಕು. ರಾಜಕಾರಣಿಗಳಿಗೆ ಸಮಸ್ಯೆ ಜೀವಂತವಾಗಿರಿಸುವುದರಲ್ಲೇ ಆಸಕ್ತಿ, ಕಮಲ್ ಹಾಸನ್, ರಜನೀಕಾಂತ್ ಮಾತನಾಡಿದಾಕ್ಷಣ ನಾನೂ ಕಾವೇರಿ ಬಗ್ಗೆ ಮಾತನಾಡಬೇಕು ಎಂದು ಯಾಕೆ ಬಯಸುತ್ತೀರಿ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.