ಘಟಕವಿದ್ದರೂ ಶುದ್ಧ ಕುಡಿವ ನೀರು ಸಿಗುತ್ತಿಲ್ಲ
Team Udayavani, Mar 4, 2018, 12:32 PM IST
ಹುಣಸೂರು: ನಗರದಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆಗೊಂಡು ನಾಲ್ಕು ತಿಂಗಳಾದರೂ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ಇಲ್ಲಿಯ ಸತ್ಯ ಫೌಂಡೇಶನ್ ಜೊತೆಗೂಡಿ ಸಾರ್ವಜನಿಕರು ಪ್ರತಿಭಟಿಸಿದರು.
ನಗರದ ಎಚ್.ಡಿ.ಕೋಟೆ ವೃತ್ತದ ಪಶು ಆಸ್ಪತ್ರೆ ಎದುರಿನ ಶುದ್ಧ ಕುಡಿ ಯುವ ನೀರು ಪೂರೈಕೆ ಘಟಕದ ಎದುರು ಖಾಲಿ ಕೊಡ ಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಸರಕಾರ ಹಾಗೂ ನಗರಸಭೆ ವಿರುದ್ಧ ಧಿಕ್ಕಾರ ಮೊಳಗಿಸಿದರು.
ಸತ್ಯ ಫೌಂಡೇ ಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ವಾಸ ಮಾಡುತ್ತಿದೆ. ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕಾಗಿ ಫೌಂಡೇಶನ್ ವತಿ ಯಿಂದ 2 ಬಾರಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಒತ್ತಾಯಿಸ ಲಾಗಿತ್ತು. ಈ ಮೇರೆಗೆ ನಗರದಲ್ಲಿ 2 ರೂ. ಗೆ 20 ಲೀಟರ್ ಒದಗಿಸುವ ಯೋಜನೆಅನುಷ್ಠಾನಗೊಂಡಿತ್ತು.
ಸಂಪರ್ಕ ನೀಡಿಲ್ಲ: ಸುಮಾರು 60 ಲಕ್ಷ ರೂ. ವೆಚ್ಚದಡಿ ಚಿಕ್ಕಹುಣಸೂರು, ಎಚ್.ಡಿ.ಕೋಟೆ ಸರ್ಕಲ್, ಕಲ್ಕುಣಿಕೆ, ರಂಗನಾಥ ಬಡಾವಣೆ, ಸದಾಶಿವನಕೊಪ್ಪಲು, ಮಾರುತಿ ಪೆಟ್ರೋಲ್ ಬಂಕ್ ಮತ್ತು ಎನ್.ಎಸ್. ತಿಟ್ಟು ಸೇರಿದಂತೆ 7 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಗೊಂಡು ಕಳೆದ ಮೂರು ತಿಂಗಳ ಹಿಂದೆ ಶಾಸಕರು ನಗರಸಭೆ ಅಧ್ಯಕ್ಷರು, ಸದಸ್ಯರು ಉದ್ಘಾಟಿಸಿದ್ದಾರೆ.
ಆದರೆ, ಈ ಘಟಕಗಳಿಗೆ ಬೋರ್‌ವೆಲ್ ಸಂಪರ್ಕ ಹಾಗೂ ಕಾವೇರಿ ನೀರಿನ ಸಂಪರ್ಕವನ್ನೂ ನೀಡದೆ ಉದ್ಘಾಟಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಶಾಸಕರು ಉದ್ಘಾಟನೆಗೆ ತೋರಿಸಿದ ಆಸಕ್ತಿಯನ್ನು ನಿರಂತರ ನೀರು ಪೂರೈಕೆ ಮಾಡಲು ತೋರಿಲ್ಲ.
ಈ ಬಗ್ಗೆ ಸಂಸದರು ಸಹ ಚಕಾರವೆತ್ತುತ್ತಿಲ್ಲವೆಂದು ಆರೋಪಿಸಿದರು. ವರದರಾಜು, ರೈತ ಮುಖಂಡ ಬೆಟ್ಟೇಗೌಡ, ಶಿವಣ್ಣ, ಬಸಪ್ಪ, ಸುರೇಶ್, ವಿಶ್ವನಾಥರಾವ್ ಸಿಂಧೆ, ಸೋಮಣ್ಣ, ಮುರುಗೇಶ, ಬಸವರಾಜು, ಸುರೇಶ, ಲಕ್ಷ್ಮಮ್ಮ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.