ಸಾವಿರಾರು ಭಾಷೆ ಸತ್ತರೂ ಕನ್ನಡಕ್ಕೆ ಭಯವಿಲ್ಲ
Team Udayavani, Jun 26, 2017, 12:20 PM IST
ಮೈಸೂರು: ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳಲ್ಲಿ ಅಂತ್ಯಗೊಂಡರೂ ಕನ್ನಡ ಚಿರಂಜೀವಿಯಾಗಿರಲಿದೆ. ಕನ್ನಡ ಎಂದಿಗೂ ಸಾಯುವ ಭಾಷೆಯಲ್ಲ ಎಂದು ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಚಳವಳಿಗಾರರ ಸಂಘದಿಂದ ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಏಕೀಕರಣ-60 ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕನ್ನಡ ಅತ್ಯಂತ ಹಳೆಯ ಭಾಷೆ.
ಇಂಗ್ಲಿಷ್ ಜನನಕ್ಕೂ ಮೊದಲೇ ಕನ್ನಡವಿತ್ತು. ವಿಶ್ವದಲ್ಲಿರುವ 6000 ಭಾಷೆಗಳ ಪೈಕಿ ಈ ಶತಮಾನದ ಅಂತ್ಯಕ್ಕೆ 4000 ಭಾಷೆಗಳು ಅಂತ್ಯಗೊಳ್ಳಲಿವೆ. ಮುಂದಿನ ಶತಮಾನದ ಅಂತ್ಯಕ್ಕೆ 400 ಭಾಷೆಗಳು ಮಾತ್ರ ಉಳಿಯಲಿವೆ. ಇವುಗಳಲ್ಲಿ ಕನ್ನಡದ ಸ್ಥಾನ ಅಬಾಧಿತ. ಅದು ವಿಶೇಷವಾಗಿ ಗ್ರಾಮೀಣ ಜನರ ಅಭಿಮಾನದಿಂದ ಕನ್ನಡ ಭಾಷೆ ಬದುಕಿರುತ್ತದೆ ಎಂದರು.
ತಾಲೂಕು ಮಾಡಬೇಕು: ಕೆಂಪೇಗೌಡ ಬೆಂಗಳೂರು ಬೆಳೆಸಿದ್ದರೂ, ರಾಷ್ಟ್ರಕೂಟರು ಇಡೀ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಹೀಗಾಗಿ ರಾಷ್ಟ್ರಕೂಟರ ರಾಜಧಾನಿ ಮಳಖೇಡ (ಮಾನ್ಯಕೇಟ) ಹಾಗೂ ಬನವಾಸಿಯನ್ನು ತಾಲೂಕು ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು. ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಅರ್ಚಕರಾಗಿ ಶಿವರಾಮ ಕಾರಂತರ ಊರಿನ ಕೋಟದವರನ್ನೇ ನೇಮಕ ಮಾಡಬೇಕು ಎಂಬುದಾಗಿ ಏಳನೇ ಶತಮಾನದಲ್ಲೇ ರಾಷ್ಟ್ರಕೂಟರು ಕರಾರು ಮಾಡಿದ್ದು, ಇಂದಿಗೂ ಅದನ್ನು ಪಾಲಿಸಲಾಗುತ್ತಿದೆ ಎಂದರು.
ನಾನು ಒಳ್ಳೆಯವರ ಪರ: ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಗಡಿಬಾಗಗಳಲ್ಲಿ 150 ಕನ್ನಡ ಶಾಲೆಗಳನ್ನು ಆರಂಭಿಸಲಾಯಿತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಗಡೆ ಅವರಂತೆ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ.
ಅವರು ನನಗಿಂತ ಮೊದಲೇ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅವರು ಕೈಗೊಂಡ ಕ್ರಮಗಳು ಮಾದರಿ ಎಂದರು. ತಾವು ಯಾವುದೇ ರಾಜಕೀಯ ಪಕ್ಷದ ಪರವಿಲ್ಲ. ಆದರೆ, ಒಳ್ಳೆಯ ಕೆಲಸಗಳನ್ನು ಮಾಡುವವರ ಜತೆಗಿರುತ್ತೇನೆಂದು ಭರವಸೆ ನೀಡಿದರು.
ಪಾಪು ಹೋರಾಟ ಮಾದರಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಗೋಕಾಕ್ ಚಳವಳಿ ಎಂದರೆ ಪಾಪು. ಈ ಹೋರಾಟದಿಂದಲೇ ಪಾಟೀಲ್ ಪುಟ್ಟಪ್ಪ ಅವರಿಗೆ ಈ ವ್ಯಕ್ತಿತ್ವ ಬಂದಿದೆ. ಸಂವಿಧಾನದ ಆಶಯವನ್ನು ಅರಿತಿದ್ದ ಪಾಟೀಲ್ ಪುಟ್ಟಪ್ಪನವರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಹೀಗಾಗಿ ಪಾಪು ಅವರ ಕಾಳಜಿ, ಹೋರಾಟವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದಲಿತ ಹಾಗೂ ರೈತ ಹೋರಾಟಗಳು ಮೊನಚನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿ ಈ ಹೋರಾಟಗಳಿಗೆ ಪಾಟೀಲ್ ಪುಟ್ಟಪ್ಪ ಅವರ ಹೋರಾಟ ಮಾದರಿ. ಆ ಮೂಲಕ ರೈತ, ದಲಿತ ಹೋರಾಟಗಳಿಗೆ ಪುನಶ್ಚೇತನ ನೀಡಬೇಕಿದೆ ಎಂದರು.
ಕನ್ನಡವನ್ನೇ ಅಭಿನಂದಿಸಿದಂತೆ: ಅಭಿನಂದನಾ ಭಾಷಣ ಮಾಡಿದ ಮೈಸೂರು ವಿವಿ ವಿಶ್ರಾಂತ ಕುಲಪತಿ ರೊ.ಕೆ.ಎಸ್.ರಂಗಪ್ಪ, ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿಗಳಲ್ಲಿ ಪಾಟೀಲ್ ಪುಟ್ಟಪ್ಪನವರು ತನುಮನವನ್ನೆಲ್ಲಾ ರಾಜ್ಯಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಲ್ಲದೆ ಸಾಹಿತಿಯಾಗಿ, ಪತ್ರಕರ್ತರಾಗಿಯೂ ಕೆಲಸ ಮಾಡಿರುವ ಪಾಪು ಅವರು ಆ ಮೂಲಕ ಕನ್ನಡಕ್ಕಾಗಿ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಪತ್ರಿಕೋದ್ಯಮಿ ರಾಜಶೇಖರಕೋಟಿ ಮಾತನಾಡಿ, ಇಂಗ್ಲಿಷ್‌ನಿಂದ ಕನ್ನಡದ ಅಭಿಮಾನ ಕಡಿಮೆ ಆಗುತ್ತಿದೆ. ಇಂಗ್ಲಿಷ್‌ನಲ್ಲಿ ಓದಿದರೆ ಮಾತ್ರ ಉದ್ಯೋಗ ಸಿಗಲಿದೆ ಎಂಬ ಭಾವನೆ ಬಹುತೇಕರಲ್ಲಿದೆ. ಹೀಗಾಗಿ ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವ ವ್ಯಕ್ತಿಯೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ಶಾಲೆಗಳು ಉತ್ತಮವಾಗಿ ನಡೆಯುವಂತೆ ಹಾಗೂ ಶಾಲೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕಿದೆ.
ಸರ್ಕಾರ ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಕಲ್ಪಿಸಿದಲ್ಲಿ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆಂದು ಸರ್ಕಾರವನ್ನು ಒತ್ತಾಯಿಸಿದರು. ಮೈಸೂರಿನ ಎನ್‌ಟಿಎಂ ಶಾಲೆಯನ್ನು ಉಳಿಸಲು ರಾಜ್ಯ ಸರ್ಕಾರ ಮುಂದಾದಲ್ಲಿ, ಇದಕ್ಕೆ ನಾವೆಲ್ಲರೂ ಕೈಜೋಡಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಕನ್ನಡ ಏಕೀಕರಣ ಹೋರಾಟದ ನೇತೃತ್ವ ವಹಿಸಿದ್ದ ನಾಡೋಜ ಡಾ.ಪಾಟೀಲ ಪುಟ್ಟಪ್ಪ(ಪಾಪು) ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಮಾಜಸೇವಕ ಕೆ.ರಘುರಾಂ, ಎಸ್‌ಎಂಪಿ ಡೆವಲಪರ್ನ ಶಿವಪ್ರಕಾಶ್, ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಪ್ರಕಾಶ್ ಇತರರು ಇದ್ದರು.
ಕರ್ನಾಟಕ ಪರಭಾಷೆ ಜನರಿಗೆ ಮೇಯಲು ಒಳ್ಳೆಯ ಹುಲ್ಲುಗಾವಲು. ಇವರ ಪೈಕಿ ಕೇಂದ್ರ ಸಚಿವ ವೆಂಕಯ್ಯನಾಯ್ಡು ಸಹ ಒಬ್ಬರು. ವೆಂಕಯ್ಯನಾಯ್ಡು ಈ ಹಿಂದೆ ನಮ್ಮ ರಾಜ್ಯದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಇದೊಂದು ಉದಾಹರಣೆಯಷ್ಟೇ.
-ನಾಡೋಜ ಡಾ. ಪಾಟೀಲ್ ಪುಟ್ಟಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.