ಸಭೆಯಲ್ಲಿ ಪ್ರತಿಧ್ವನಿಸಿದ ಬೀದಿ ನಾಯಿ ದಾಳಿ ಪ್ರಕರಣ
Team Udayavani, Feb 12, 2020, 3:00 AM IST
ಮೈಸೂರು: ನಂಜನಗೂಡಿನ ವಿದ್ಯಾನಗರದಲ್ಲಿ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಪ್ರಕರಣ ಜಿಪಂ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ನಂಜನಗೂಡಿನ ವಿದ್ಯಾನಗರದಲ್ಲಿ ಬೀದಿನಾಯಿಗಳು ದಾಳಿ ನಡೆಸಿ 5 ರಿಂದ 7 ವರ್ಷ ವಯಸ್ಸಿನ ಐವರು ಮಕ್ಕಳಿಗೆ ತೀವ್ರ ಗಾಯವಾಗಿದ್ದು, ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಮಾತನಾಡಿದ ಸಾ.ರಾ.ನಂದೀಶ್, ಬೀದಿ ನಾಯಿಗಳ ದಾಳಿ, ಚಚ್ಚುಮದ್ದು ದೊರೆಯದಿರುವ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹೀಗಾಗಿ ಆನೆ ಗಣತಿ, ಹುಲಿ ಗಣತಿ ಮಾಡಿದಂತೆ ಬೀದಿ ನಾಯಿಗಳ ಗಣತಿ ಮಾಡಿ, ಚುಚ್ಚುಮದ್ದನ್ನೇಕೆ ಕೊಡಿಸಬಾರದು ಎಂದು ಪ್ರಶ್ನಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ, ಬೀದಿ ನಾಯಿ ಹಿಡಿದು ಚುಚ್ಚುಮದ್ದು ಕೊಡುವುದು ಕಷ್ಟದ ಕೆಲಸ, ಕೊಲ್ಲುವುದು ಕೂಡ ಕಷ್ಟದ ಕೆಲಸವೇ, ಪ್ರಾಣಿದಯಾ ಸಂಘಗಳು ಅಡ್ಡಬರುತ್ತವೆ ಎಂದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾ.ರಾ.ನಂದೀಶ್, ಕಾಡಲ್ಲಿರುವ ಹುಲಿ-ಸಿಂಹಗಳನ್ನೇ ಹಿಡಿದು ಚುಚ್ಚುಮದ್ದು ಕೊಡುತ್ತಾರೆ, ಬೀದಿನಾಯಿಗಳನ್ನೇಕೆ ಹಿಡಿದು ಚುಚ್ಚುಮದ್ದು ಕೊಡಿಸೋಕಾಗಲ್ಲ. ಪಂಚಾಯ್ತಿ ಮಟ್ಟದಲ್ಲಿ ಈ ಬಗ್ಗೆ ಕ್ರಮವಹಿಸಿ ಎಂದು ತಿಳಿಸಿದರು.
ಅರ್ಧಂಬರ್ಧ ಮಾಹಿತಿ ಕೊಟ್ರೆ ಸಭೆ ಮಾಡೋಕಾಗಲ್ಲ: ನೀವು ಕೊಡುವ ಶೇಕಡಾವಾರು ಅಂಕಿಅಂಶ ನೋಡೋಕೆ ಕೆಡಿಪಿ ಸಭೆ ಮಾಡುವ ಅವಶ್ಯಕತೆ ಕಾಣಿ¤ಲ್ಲ. ಕೆಡಿಪಿ ಸಭೆಗೆ ಅರ್ಧಂಬರ್ಧ ಮಾಹಿತಿ ಕೊಟ್ರೆ ಹೇಗೆ ಪ್ರಗತಿಪರಿಶೀಲನೆ ಮಾಡೋದು ಎಂದು ಜಿಪಂ ಸಿಇಒ ಕೆ.ಜ್ಯೋತಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನಿಂದಲೂ ಹೀಗೆ ನಡೆದುಕೊಂಡು ಬರುತ್ತಿದೆ. ಇಲಾಖಾವಾರು ಪ್ರಗತಿ ವರದಿಯನ್ನು ಜಿಪಂಗೆ ಮುಂಚಿತವಾಗಿಯೂ ಕೊಡುವುದಿಲ್ಲ. ಕೊಟ್ಟರು ಅದು ಅರ್ಧಂಬರ್ಧ ಇರುತ್ತದೆ. ಸಭೆಯ ದಿನ ನಿಮ್ಮ ಬಳಿ ಒಂದು ಮಾಹಿತಿ ಇದ್ದರೆ, ನಮ್ಮ ಬಳಿ ಒಂದು ಮಾಹಿತಿ ಇರುತ್ತೆ. ಶೇ.53, ಶೇ.60 ಸಾಧನೆ ಎಂದರೆ ಏನು ಎಂಬ ವಿವರಬೇಕಲ್ಲ? ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಮುಂದಿನ ಸಭೆಗೆ ತಾಲೂಕುವಾರು ವಿವರವಾದ ಮಾಹಿತಿ ಕೊಡಿ. ಈ ಸಭೆಗೆ ಕೊಟ್ಟಿರುವ ಮಾಹಿತಿಯ ತಾಲೂಕುವಾರು ವಿವರವಾದ ಮಾಹಿತಿಯನ್ನೂ 15 ದಿನಗಳಲ್ಲಿ ಕೊಡಿ, ಮುಂದಿನ ಸಭೆಗೆ ಒಂದು ವಾರ ಮುಂಚಿತವಾಗಿ ಜಿಪಂಗೆ ಸಮಗ್ರವಾದ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.