ಶಿಕ್ಷಣದಿಂದಲೇ ಸರ್ವರೂ ಅಭಿವೃದ್ಧಿ ಹೊಂದಲು ಸಾಧ್ಯ
Team Udayavani, Mar 14, 2018, 12:34 PM IST
ಹುಣಸೂರು: ಶಿಕ್ಷಣ ಪಡೆದಾಗ ಮಾತ್ರ ದಲಿತರು, ಶೋಷಿತರು, ಬಡವರು ಅಭಿವೃದ್ಧಿ ಹೊಂದಲು ಸಾಧ್ಯವೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ತಿಳಿಸಿದರು.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಪುಟ್ಟರಾಜು ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಡತನವೆಂಬುದು ಶಾಪವಲ್ಲ, ಕೀಳರಿಮೆ ಬಿಟ್ಟು ಅದನ್ನು ಮೆಟ್ಟಿನಿಂತಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ.
ಸರ್ಕಾರಗಳು ಬಡವರ, ದಲಿತರ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ ಪಡೆಯುವ ಮೂಲಕ ಸಮರ್ಥವಾಗಿ ಸವಲತ್ತುಗಳನ್ನು ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ, ಹುಟ್ಟುವಾಗ ಬಡತನವಿರಬಹುದು. ಆದರೆ, ಶಿಕ್ಷಣಪಡೆದವರಿಂದು ಒಂದಿಲ್ಲೊಂದು ರಂಗದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು.
ಆರ್ಥಿಕವಾಗಿ ದುರ್ಬಲ ಕುಟುಂಬದ ಜೊತೆಗೆ ಪರಿಶಿಷ್ಟ ಸಮುದಾಯ ಯುವಕ ಪುಟ್ಟರಾಜು ಅವರು ಕಾನೂನು ಪದವಿಗಳಿಸಿ ನ್ಯಾಯಾಧೀಶರಂತಹ ಉನ್ನತ ಹುದ್ದೆಗೇರಲು ಶಿಕ್ಷಣವೇ ಮದ್ದಾಗಿದ್ದು, ಇದನ್ನು ಯುವ ಪೀಳಿಗೆಯವರು ಮನಗಾಣಬೇಕೆಂದು ಆಶಿಸಿದರು.
ಗ್ರಾಮಕ್ಕೆ ಹೆಮ್ಮೆ: ಕೆ.ಆರ್.ನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವೀರಭದ್ರಯ್ಯ ಮಾತನಾಡಿ, ನಾವು ಏನಾಗಬೇಕೆಂದುಬು ನಮ್ಮ ಕೈಯಲ್ಲಿದೆ, ಪುಟ್ಟರಾಜು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಗ್ರಾಮಕ್ಕೆ ಹೆಮ್ಮೆ, ಇವರ ಸತತ ಪ್ರರಿಶ್ರಮದ ಫಲವೇ ಇವರಿಗೆ ಉನ್ನತ ಹುದ್ದೆ ಕಲ್ಪಿಸಿದೆ ಎಂದರೆ, ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಅಂಬೇಡ್ಕರ್ ಆಶಯದಂತೆ ಮೊದಲು ಸುಶಿಕ್ಷತರಾಗಬೇಕು, ಆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಸೂಚಿಸಿದರು.
ಪೋಷಕರಿಗೆ ಚಿರರುಣಿ: ಹುಟ್ಟೂರಿನ ಜನರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಪುಟ್ಟರಾಜು, ನ್ಯಾಯಾಧೀಶನಾಗಿ ಆಯ್ಕೆಯಾದ ನನಗೆ ನಮ್ಮ ಗ್ರಾಮದಲ್ಲಿ ಎಲ್ಲ ಸಮುದಾಯದ ಮಂದಿ ಪ್ರೀತಿಯಿಂದ, ಗೌರವ ಸಲ್ಲಿಸುತ್ತಿರುವುದು ಹೆಮ್ಮೆ ಎನಿಸಿದೆ. ನಾನು ನ್ಯಾಯಾಧೀಶನಾಗಲು ತಂದೆ ಸಣ್ಣಮಂಚನಾಯಕ, ತಾಯಿ ಚಂದ್ರಮ್ಮರ ಪರಿಶ್ರಮವೇ ಕಾರಣವಾಗಿದ್ದು, ನನ್ನ ಪೋಷಕರು ಹಾಗೂ ಗುರುಗಳಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದರು.
ಸಮಾರಂಭದಲ್ಲಿ ಹುಣಸೂರು ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗಯ್ಯ, ಯ.ಕೇಶವಮೂರ್ತಿ ಮಾತನಾಡಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪದ್ಮಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಗಮ್ಮ, ಸದಸ್ಯರುಗಳಾದ ಶಿವಪ್ಪ, ಸೋಮು, ವೆಂಕಟರಮಣ, ಗ್ರಾಮದ ಮುಖಂಡರಾದ ಆಂಜನೇಯ,
ನಸ್ರುಲ್ಲಾಖಾನ್, ಗಡಿ ಮುಖಂಡ ನಿಂಗರಾಜ್ ಮಲ್ಲಾಡಿ, ಗ್ರಾಮಸ್ಥರಾದ ಕೃಷ್ಣಶೆಟ್ಟಿ, ರಾಮಮೂರ್ತಿ, ಅಂಕಯ್ಯ, ಜಯ, ಪಿ.ಪುಟ್ಟರಾಜು, ಸಿದ್ದಯ್ಯ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಟರಮಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ, ದಸಂಸದ ದೇವೇಂದ್ರ ಕಿರಿಜಾಜಿ ಗಜೇಂದ್ರ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.