ರಾಜಕಾರಣಿಗಳಿಂದ ರೈತರ ಹೆಸರು ದುರ್ಬಳಕೆ
Team Udayavani, Apr 11, 2018, 12:38 PM IST
ಪಿರಿಯಾಪಟ್ಟಣ: ರಾಜಕಾರಣಿಗಳು ರೈತರ ಹೆಸರನ್ನು ತಮ್ಮ ಅಧಿಕಾರ ಪಡೆಯುವ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊಸೂರು ಕೃಷ್ಣಕುಮಾರ್ ದೂರಿದರು. ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಸೇನೆಯ ನೂತನ ಘಟಕ ಉದ್ಘಾಟಿಸಿ ಮಾತನಾಡಿ, ಸಣ್ಣಪುಟ್ಟ ಸಾಲ ಮಾಡಿದ ರೈತರ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಲಾಗುತ್ತಿದೆ.
ಆದರೆ, ಸಾವಿರಾರು ಕೋಟಿ ರೂ. ಬ್ಯಾಂಕಿಗೆ ಮೋಸ ಮಾಡಿದವರು ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ. ಸ್ಟೀಲ್ ಕಂಪನಿಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾವಾಗುತ್ತಿದೆ. ಆದರೆ, ಈ ದೇಶದ ರೈತರ ಸಾಲಮನ್ನಾ ಮಾಡಲು ಸರ್ಕಾರಗಳು ಹಿಂದೆ ಮುಂದೆ ನೋಡುತ್ತಿದೆ ಎಂದು ದೂರಿದರು. ಇಂದು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿರುವ ದೇಶದ ನಾಯಕರು ರಾಜ್ಯದಲ್ಲಿ ಸಾವಿರಾರು ರೈತರು ಸತ್ತಾಗ ಏಕೆ ಬಂದಿಲ್ಲ.
ಮುಂದಿನ ದಿನಗಳಲ್ಲಿ ಯಾವ ರಾಜಕಾರಣಿ, ಯಾವ ಪಕ್ಷ ಕೆಲಸ ಮಾಡುತ್ತದೆಯೋ ಅಂತವರನ್ನು ಆಯ್ಕೆ ಮಾಡಿ ಎಂದು ತಿಳಿಸಿದರು. ಹುಣಸೂರು ತಾಲೂಕು ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ಈ ಹಿಂದೆ ಬ್ಯಾಂಕ್ಗಳು ರೈತನಿಗೆ ತೊಂದರೆ ನೀಡಿದಾಗ ರೈತ ಸಂಘಟನೆಗಳು ರೈತರ ಸಹಾಯಕ್ಕೆ ಬಂದವು. ಆದ್ದರಿಂದ ಜಾತ್ಯತೀತ, ಪûಾತೀತವಾಗಿ ಸಂಘಟನೆ ಮಾಡಿಕೊಂಡು ರೈತರ ಪರ ಧ್ವನಿ ಎತ್ತುತ್ತಿದ್ದೇವೆ ಎಂದು ತಿಳಿಸಿದರು.
ಪದಾಧಿಕಾರಿಗಳ ರಚನೆ: ಗೌರವಾಧ್ಯಕ್ಷರಾಗಿ ಕಾಂತರಾಜು, ಅಧ್ಯಕ್ಷರಾಗಿ ರವಿ, ಉಪಾಧ್ಯಕ್ಷರಾಗಿ ಗಣೇಶ್, ಕಾರ್ಯದರ್ಶಿ ಮಹದೇವ್, ಖಜಾಂಜಿ ರಾಮೇಗೌಡ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಭಾರತಿ, ಕಸಬಾ ಹೋಬಳಿ ಮಟ್ಟದ ಅಧ್ಯಕ್ಷೆ ಸ್ವಾಮೀಗೌಡ, ಮುಖಂಡ ಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷ ಕುಮಾರಬೋವಿ, ತಾಲೂಕು ಉಪಾಧ್ಯಕ್ಷ ಬಸವಣ್ಣ, ತಾ.ಪಂ.ಸದಸ್ಯ ರಾಜಣ್ಣ, ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.